ಎಸ್‌ಬಿಐ ಎಟಿಎಂ ನಿಂದ ಅಪರಿಚಿತ ದುಷ್ಕರ್ಮಿಗಳಿಂದ 12.40 ಲಕ್ಷ ರೂ. ಲೂಟಿ

Team Udayavani, May 16, 2019, 4:54 PM IST

ಜೈಪುರ : ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಗೋಪಾಲಗಢ ಪಟ್ಟಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಟಿಎಂ ನಿಂದ 12.40 ಲಕ್ಷ ರೂ. ಲೂಟಿಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಬುಧವಾರ ರಾತ್ರಿ ದುಷ್ಟರ್ಮಿಗಳು ಗ್ಯಾಸ್‌ ವೆಲ್ಡಿಂಗ್‌ ಮಶೀನ್‌ ಉಪಯೋಗಿಸಿಕೊಂಡು ಸೇಫ್ ಬಾಕ್ಸ್‌ ಕಟ್‌ ಮಾಡಿ 12.40 ಲಕ್ಷ ರೂ. ಒಯ್ದರು ಎಂದು ಗೋಪಾಲಗಢ ಎಸ್‌ಎಚ್‌ಓ ರಾಮ ನರೇಶ್‌ ಮೀಣ ತಿಳಿಸಿದರು.

ಎಟಿಎಂ ಲೂಟಿ ನಡೆದಾಗ ಅದರ ಗಾರ್ಡ್‌ duty ಯಲ್ಲಿ ಇರಲಿಲ್ಲ; ಹಾಗಾಗಿ ಎಟಿಎಂ ಲೂಟಿ ನಡೆದಿರುವುದು ಪೊಲೀಸರಿಗೆ ಇಂದು ಗುರುವಾರ ಬೆಳಗ್ಗೆಯಷ್ಟೇ ಗೊತ್ತಾಯಿತು.

ಪೊಲೀಸರು ಈಗ ಸಿಸಿಟಿವಿ ಚಿತ್ರಿಕೆ ಮತ್ತು ಅಕ್ಕಪಕ್ಕದ ಕಟ್ಟಡಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ಚಿತ್ರಿಕಗಳನ್ನು ಪರಿಶೀಲಿಸುತ್ತಿರುವುದಾಗಿ ಮೀಣ ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ