ಐವರು ಹಿಜ್‌ಬುಲ್‌ ಮುಜಾಹಿದೀನ್‌ ಸಹಚರರ ಬಂಧನ; ಐಇಡಿ ವಶ

Team Udayavani, Jun 19, 2019, 4:30 PM IST

ಶ್ರೀನಗರ : ನಿಷೇಧಿತ ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಐವರು ಕ್ಷೇತ್ರ-ಕಾರ್ಯಕರ್ತರನ್ನು ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ.

ಹಿಜ್‌ಬುಲ್‌ ಮುಜಾಹಿದೀನ್‌ನ ಈ ಐವರು ಸಹಚರರ ಬಳಿ ಇದ್ದ ಸುಧಾರಿತ ಸ್ಫೋಟಕವನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಐಇಡಿಯನ್ನು ಭದ್ರತಾ ಪಡೆಗಳ ವಿರುದ್ಧ ಬಳಸಲು ಉದ್ದೇಶಿಸಲಾಗಿತ್ತು ಎಂದವರು ಹೇಳಿದರು.

ಬಂಧಿತ ಉಗ್ರ ಸಹಚರರನ್ನು ಆಕಿಬ್‌ ನಜೀರ್‌ ರಠಾರ್‌, ಆಮೀರ್‌ ಮಜಾಹೀದ್‌ ವಾನಿ, ಸಮೀರ್‌ ಅಹ್ಮದ್‌ ಭಟ, ಫೈಸಲ್‌ ಫಾರೂಕ್‌ ಅಹಂಗರ್‌ ಮತ್ತು ರಯೀಸ್‌ ಅಹ್ಮದ್‌ ಗನಾಯ್‌ ಎಂದು ಗುರುತಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ