
ರಾಹುಲ್ ಗಾಂಧಿ ಸಂಪರ್ಕಕ್ಕೆ ಸಿಗದ ಪೈಲಟ್ ದೂರವಾಣಿಯಲ್ಲಿ ಚಿದಂಬರಂ ಜತೆ ಮಾತುಕತೆ!
ಪೈಲಟ್ ತನ್ನ ಜತೆ ಗುರುವಾರ ಮಾತನಾಡಿರುವುದಾಗಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.
Team Udayavani, Jul 17, 2020, 10:54 AM IST

ನವದೆಹಲಿ:ಅನರ್ಹತೆ ಭೀತಿಯಲ್ಲಿರುವ ಸಚಿನ್ ಪೈಲಟ್ ಹಾಗೂ 18 ಮಂದಿ ಶಾಸಕರು ರಾಜಸ್ಥಾನ್ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆ ಎಂಬಂತೆ ಸಚಿನ್ ಪೈಲಟ್ ಅವರು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧವೇ ತಿರುಗಿಬಿದ್ದಿದ್ದ ಸಚಿನ್ ಪೈಲಟ್ ಭಾನುವಾರದಿಂದ ಕಾಂಗ್ರೆಸ್ ಪಕ್ಷದ ಯಾವ ಹಿರಿಯ ನಾಯಕರ ಸಂಪರ್ಕಕ್ಕೂ ಸಿಕ್ಕಿರಲಿಲ್ಲವಾಗಿತ್ತು. ಏತನ್ಮಧ್ಯೆ ಪೈಲಟ್ ತನ್ನ ಜತೆ ಗುರುವಾರ ಮಾತನಾಡಿರುವುದಾಗಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.
“ಸಚಿನ್ ಅವರ ನಾಯಕತ್ವದ ಗುಣದ ಬಗ್ಗೆ ಪುನರುಚ್ಚರಿಸಿದ್ದು, ಈ ನಿಟ್ಟಿನಲ್ಲಿ ಭೇಟಿಯಾಗುವ ಮೂಲಕ ಎಲ್ಲಾ ವಿಚಾರವನ್ನು ಚರ್ಚಿಸಿ, ದೊರೆತ ಅವಕಾಶವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದೇನೆ” ಎಂದು ಚಿದಂಬರಂ ತಿಳಿಸಿದ್ದಾರೆ.
ರಾಜಸ್ಥಾನ ರಾಜಕೀಯ ಜಿದ್ದಾಜಿದ್ದಿಯಲ್ಲಿ ಸಚಿನ್ ಪೈಲಟ್ ಕಾಂಗ್ರೆಸ್ ಹೈಕಮಾಂಡ್ (ಸೋನಿಯಾ, ರಾಹುಲ್) ನಾಯಕರಿಗೂ ಸಿಕ್ಕಿರಲಿಲ್ಲವಾಗಿತ್ತು. ಅಲ್ಲದೇ ಯಾರ ಜತೆಯೂ ಮಾತುಕತೆಯೂ ನಡೆಸಿರಲಿಲ್ಲವಾಗಿತ್ತು. ಇದೀಗ ಸಚಿನ್ ಪೈಲಟ್ ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಅವರ ಜತೆ ಮಾತನಾಡಿರುವುದು ಮತ್ತೊಂದು ಬೆಳವಣಿಗೆಯಾಗಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
