ನಹಾರ್‌ಗಢ ಕೋಟೆ ಶವ: ಸಿಬಿಐ ತನಿಖೆಗೆ ಕರಣಿ ಸೇನೆ ಆಗ್ರಹ
Team Udayavani, Nov 28, 2017, 12:20 PM IST
ಜೈಪುರ : ನಹಾರ್‌ಗಢ ಕೋಟೆಯ ಗೋಡೆಯ ಮೇಲಿಂದ ಈಚೆಗೆ ವ್ಯಕ್ತಿಯ ಶವವೊಂದು ತೂಗಾಡುತ್ತಿದ್ದುದು ಪತ್ತೆಯಾದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಬಾಲಿವುಡ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ “ಪದ್ಮಾವತಿ’ ಚಿತ್ರದ ಬಿಡುಗಡೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಶ್ರೀ ರಾಜಪೂತ ಕರಣಿ ಸೇನೆ ಸರಕಾರವನ್ನು ಒತ್ತಾಯಿಸಿದೆ.
“ಈ ಘಟನೆಯು ಕೋಮು ವಿದ್ವೇಷ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಉದ್ದೇಶದ ಪಿತೂರಿಯಾಗಿದೆ ಆದುದರಿಂದ ಕೇಂದ್ರ ಸರಕಾರ ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಶ್ರೀ ರಾಜಪೂತ ಕರಣಿ ಸೇನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲವಿ ಹೇಳಿದ್ದಾರೆ.
ಕಳೆದ ನ.24ರಂದು ಜೈಪುರದ ನಹಾರ್‌ಗಢ ಕೋಟೆಯ ಮೇಲಿಂದ ವ್ಯಕ್ತಿಯೊಬ್ಬರ ಶವ ತೂಗುತ್ತಿದ್ದೆಡೆ ಸಮೀಪದಲ್ಲೇ ಎಚ್ಚರಿಕೆಯ ಬರಹವೊಂದು ಕಂಡು ಬಂದಿತ್ತು.