100 ಕೋಟಿ ದಾಟಿದ ಪದ್ಮಾವತ್ ಆದಾಯ?
Team Udayavani, Jan 29, 2018, 6:45 AM IST
ಮುಂಬೈ: ಹಲವು ವಿವಾದಗಳನ್ನು ಎದುರಿಸಿ ಗೆದ್ದ ಪದ್ಮಾವತ್ ಚಿತ್ರವು ದಿನಕಳೆದಂತೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಭಾನುವಾರ 100 ಕೋಟಿ ರೂ. ಆದಾಯವನ್ನು ದಾಟಿದೆ ಎಂದು ಅಂದಾಜಿಸಲಾಗಿದೆ.
ಸಿನಿಮಾ ತೆರೆಕಂಡ ದಿನ ಅಂದರೆ 25ರಂದು 19 ಕೋಟಿ ರೂ. ಗಳಿಸಿತ್ತು. ಮಾರನೇ ದಿನ 32 ಕೋಟಿ ರೂ, ಶನಿವಾರ 27 ಕೋಟಿ ರೂ. ಸಂಗ್ರಹವಾಗಿ, ಒಟ್ಟು 83 ಕೋಟಿ ರೂ. ಗಳಿಸಿತ್ತು. ಭಾನುವಾರ ರಜಾ ದಿನವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಿನಿಮಾಮಂದಿರಕ್ಕೆ ತೆರಳಿದ್ದು, ಪದ್ಮಾವತ್ ಆದಾಯ 100 ಕೋಟಿ ರೂ. ದಾಟುವುದು ಸ್ಪಷ್ಟ ಎಂದು ನಿರ್ಮಾಣ ಸಂಸ್ಥೆ ವಯಾಕಾಮ್ ಹೇಳಿದೆ. ದಕ್ಷಿಣ ಭಾರತದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಇದೇ ವೇಳೆ, ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ಪದ್ಮಾವತ್ ಸಿನಿಮಾ ಪ್ರದರ್ಶಿಸುತ್ತಿದ್ದ ಸಿನಿಮಾ ಮಂದಿರದೊಳಕ್ಕೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಉಂಟಾಗಿಲ್ಲ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು