ಜೈಲಲ್ಲೇ ಇಲ್ಲ ಉಗ್ರ ಹಫೀಜ್ !
26/11 ದಾಳಿ ರೂವಾರಿ ಸೆರೆಯಿಂದ ಸದ್ದಿಲ್ಲದೆ ಕಳುಹಿಸಿಕೊಟ್ಟ ಪಾಕ್
Team Udayavani, Nov 27, 2020, 6:05 AM IST
ಹೊಸದಿಲ್ಲಿ: ಮುಂಬಯಿ ನಗರದಲ್ಲಿ 26/11ರ ದಾಳಿಯ ಮಾಸ್ಟರ್‌ಮೈಂಡ್, ಎಲ್‌ಇಟಿ ಉಗ್ರ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್ ಲಾಹೋರ್‌ನ ಮನೆಯಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದು, ಅಲ್ಲಿಂದಲೇ ಉಗ್ರ ಸಂಘಟನೆಯನ್ನು ನಿರ್ವಹಿಸುತ್ತಿದ್ದಾನೆ!
ಇದು ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿರುವ ಮಾಹಿತಿ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಕ್ಕೆ ಒಳಗಾಗಿರುವ ಉಗ್ರನನ್ನು ಜೈಲಿನಲ್ಲಿ ಇರಿಸದೆ ಪಾಕ್ ಆತನಿಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿ ಕೊಟ್ಟಿದೆ, ತನ್ಮೂಲಕ ಎಲ್ಲರ ಕಣ್ಣಿಗೆ ಮಣ್ಣೆರಚಿದೆ.
2019ರ ಜುಲೈಯಲ್ಲಿ ಸಯೀದ್‌ನನ್ನು ಬಂಧಿಸ ಲಾಗಿತ್ತು. ಆದಾದ ಕೆಲವೇ ತಿಂಗಳುಗಳಲ್ಲಿ ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಆತನಿಗೆ 10 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿತ್ತು. ಕಳೆದ ವಾರವಷ್ಟೇ ಸಯೀದ್‌ಗೆ ಮತ್ತೆರಡು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಘೋಷಿಸಲಾಗಿದೆ. ಆದರೆ ಇದೆಲ್ಲ ಜಗತ್ತಿನ ಬಾಯಿ ಮುಚ್ಚಿಸುವ ತಂತ್ರ ಎನ್ನುವುದು ಗುಪ್ತಚರ ಮಾಹಿತಿಯಿಂದ ಬಹಿರಂಗವಾಗಿದೆ.
ಇತರ ಉಗ್ರರ ಭೇಟಿಯೂ ಅವಕಾಶ !
ಮನೆಯಲ್ಲೇ ಇರುವ ಸಯೀದ್‌ಗೆ ಭದ್ರತೆಯನ್ನೂ ಒದಗಿಸಲಾಗಿದೆ. ಅತಿಥಿಗಳ ಆಗಮನಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಳೆದ ತಿಂಗಳಷ್ಟೇ “ಘೋಷಿತ ಉಗ್ರ’ರ ಪಟ್ಟಿಗೆ ಸೇರ್ಪಡೆಗೊಂಡಿರುವ 26/11ರ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್‌ನ ಜೆಹಾದ್ ಘಟಕದ ಮುಖ್ಯಸ್ಥ ಝಕೀವುರ್ ರೆಹಮಾನ್ ಲಖ್ರಿ ಕೂಡ ಉಗ್ರ ಸಯೀದ್‌ನ ಮನೆಗೆ ಬಂದು ಹಲವು ತಾಸುಗಳ ಕಾಲ ಮಾತುಕತೆ ನಡೆಸಿ ವಾಪಸಾಗಿದ್ದ. ಜೆಹಾದ್‌ಗೆ ದೇಣಿಗೆ ಸಂಗ್ರಹ ಸಹಿತ ವಿವಿಧ ವಿಚಾರಗಳ ಕುರಿತು ಈ ವೇಳೆ ಚರ್ಚಿಸಲಾಗಿತ್ತು ಎಂದೂ ಮೂಲಗಳು ತಿಳಿಸಿವೆ.
ಮುಂಬಯಿ ದಾಳಿ ನಡೆದು 12 ವರ್ಷಗಳು ಕಳೆದರೂ ದಾಳಿಕೋರರಿಗೆ ಇನ್ನೂ ಶಿಕ್ಷೆಯಾಗದಿರುವುದರ ಹಿಂದಿನ ಪಾಕಿಸ್ಥಾನದ ನಿಜ ಬಣ್ಣ ಇದರಿಂದ ಬಯಲಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ
ಪ್ರತಿಭಟನೆ ಅಂತ್ಯಗೊಳಿಸಿ, ಕೂಡಲೇ ಸ್ಥಳ ಬಿಟ್ಟು ಹೊರಡಿ: ರೈತರಿಗೆ ಉತ್ತರ ಪ್ರದೇಶ ಸರ್ಕಾರ
ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?
ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್