Udayavni Special

ಪಾಕ್‌ ಅತ್ಯಾಧುನಿಕ ವಿಮಾನ ಚಿಂದಿ ಮಾಡಿದ್ದು ದಶಕಗಳಷ್ಟು ಹಳೆ ಮಿಗ್‌ 21

Team Udayavani, Mar 1, 2019, 12:30 AM IST

mi21.jpg

ಬುಧವಾರ ಭಾರತದ ಗಡಿಯೊಳಕ್ಕೆ ತೂರಿ ಬಂದ ಪಾಕಿಸ್ಥಾನದ ಅತ್ಯಾಧುನಿಕ ಎಫ್-16 ಕೆಲ ಕ್ಷಣಗಳಲ್ಲೇ ಚಿಂದಿಯಾಗಿತ್ತು. ಇದಕ್ಕೆ ಕಾರಣ, ಭಾರತದ ದಶಕಗಳಷ್ಟು ಹಳೆಯ ಮಿಗ್‌ 21 ಬೈಸನ್‌! ಎಫ್-16ರ ಸಾಮರ್ಥ್ಯವನ್ನು ಮಿಗ್‌-21 ಸರಿಗಟ್ಟಲು ಸಾಧ್ಯವೇ ಇಲ್ಲ ಎಂಬಂತಿದೆ. ಆದರೂ, ಚಾಣಾಕ್ಷತನದಿಂದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರೇ ಎಫ್-16 ಯುದ್ಧ ವಿಮಾನ ಉರುಳಿಸಿದ ವೀರ. ಈ ಕಾದಾಟದಲ್ಲಿ ಮಿಗ್‌ 21 ಮೇಲೆ ದಾಳಿಯಾಗಿದ್ದು, ಅದು ಪತನಗೊಳ್ಳುತ್ತಿರುವಾಗ ಅಭಿನಂದನ್‌ ಪ್ಯಾರಾಚೂಟ್‌ ಮೂಲಕ ಹೊರಜಿಗಿದರು. ಆದರೆ ಅವರು ಪಾಕ್‌ ನಿಯಂತ್ರಣದ ನೆಲದಲ್ಲಿ ಇಳಿದಿದ್ದರಿಂದ ಅಲ್ಲಿನ ಸೇನೆಯ ಬಂಧಿಯಾದರು.

ಘಟನೆ ವೇಳೆ
ನಡೆದಿದ್ದೇನು? 
ಬುಧವಾರ ಬೆಳಗ್ಗೆ 9.52

ಪಾಕ್‌ನ ವಿವಿಧ ವಾಯುನೆಲೆಗಳಿಂದ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳು ಕಾಶ್ಮೀರದಲ್ಲಿರುವ ಭಾರತದ ಪ್ರಮುಖ ಸೇನಾ ನೆಲೆ ಧ್ವಂಸಗೊಳಿಸಲು ನುಗ್ಗಿ ಬರತೊಡಗಿದ್ದವು. 10 ಯುದ್ಧ ವಿಮಾನಗಳನ್ನು ದೂರದಿಂದಲೇ ರಾಡಾರ್‌ ಗುರುತಿಸಿದ್ದು, ಅದರಂತೆ ಅವುಗಳನ್ನು ತಡೆಯಲು ಆವಂತಿಪೊರಾದಿಂದ ಸುಖೋಯ್‌ 30 ಎಂಕೆಐ ಮತ್ತು ಎರಡು ಮಿಗ್‌-21 ಬೈಸನ್‌ಗಳು ನಭಕ್ಕೆ ನೆಗೆದವು.
 
ಬೆಳಗ್ಗೆ 10 ಗಂಟೆ
ನೌಶೇರಾ ಸೆಕ್ಟರ್‌ ಒಳಗೆ ಪಾಕ್‌ ವಿಮಾನಗಳು ಬಂದಿದ್ದು, ಎರಡು ಸೆಕೆಂಡ್‌ನ‌ಲ್ಲಿ ವಾಯುಪಡೆ ವಿಮಾನಗಳ ಪ್ರತಿರೋಧ ಎದುರಾಗಿತ್ತು. ಒಂದು ವಿಮಾನಕ್ಕೆ ಅಭಿನವ್‌ ಅವರು ತಮ್ಮ ಮಿಗ್‌-21 ಬೈಸನ್‌ನಿಂದ ಕಡಿಮೆ ದೂರದ ಆರ್‌73 ಕ್ಷಿಪಣಿಯನ್ನು ಪ್ರಯೋಗಿಸಿದ್ದು, ಅದು ಹೋಗಿ ಎಫ್-16ಗೆ ಬಡಿದಿದ್ದು, ಆ ವಿಮಾನ ನಿಯಂತ್ರಣ ರೇಖೆಯಾಚೆಗೆ ಲಾಮ್‌ ಕೆರಿ ಸೆಕ್ಟರ್‌ ವಲಯದಲ್ಲಿ ಬಿದ್ದಿತ್ತು. ಈ ಕಾದಾಟದ ವೇಳೆ ಭಾರತದ ಗಡಿ ದಾಟಿದ್ದ ಮಿಗ್‌ 21ಗೆ ಪಾಕ್‌ನ ಇನ್ನೊಂದು ಎಫ್-16 ಅಥವಾ ಭೂಮಿಯಿಂದ ಹಾರಿಸಿದ ಕ್ಷಿಪಣಿ ಬಂದು ಬಡಿದಿದೆ. ಈ ವೇಳೆ ಮತ್ತೆ ಗಡಿಯೊಳಕ್ಕೆ ಬರಲಾಗದೆ ಅಭಿನವ್‌ ಅವರ ವಿಮಾನ ಪಾಕ್‌ ಸರಹದ್ದಿನಲ್ಲಿ ಪತನಗೊಂಡಿದೆ. ಅವರು ಪ್ಯಾರಾಚೂಟ್‌ನಲ್ಲಿ ಪಾರಾಗಿದ್ದಾರೆ. ಭಾರತೀಯ ಪಡೆಗಳ ಪ್ರತಿರೋಧ ಹಿನ್ನೆಲೆಯಲ್ಲಿ ಪಾಕ್‌ ವಿಮಾನಗಳು ವಾಪಸ್ಸಾದವು. 

ಹಾರಾಡುವ ಶವಪೆಟ್ಟಿಗೆ ಖ್ಯಾತಿ
ಮಿಗ್‌ 21 ವಿಮಾನಗಳಿಗೆ ಹಾರಾಡುವ ಶವಪೆಟ್ಟಿಗೆ ಎಂಬ ಖ್ಯಾತಿ ಬಹು ಹಿಂದಿನಿಂದಲೇ ಇದೆ. ಇದಕ್ಕೆ ಕಾರಣ ಬಹು ಹಳೆಯ ಈ ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿರುವುದು. ಭಾರತೀಯ ವಾಯುಪಡೆಗೆ 1963ರಲ್ಲಿ ಸೇರ್ಪಡೆಗೊಂಡ ಬಳಿಕ ಸುಮಾರು 500 ವಿಮಾನಗಳು ಅಪಘಾತಕ್ಕೀಡಾಗಿವೆ. ಈಗಿನ ಯುದ್ಧ ಸನ್ನಿವೇಶಗಳಿಗೆ ಹೋಲಿಸಿದರೆ, ಇದರ ಸಾಮರ್ಥ್ಯ, ತಂತ್ರಜ್ಞಾನ ಸಾಲದು. ಅದರಲ್ಲಿ ಬಳಕೆಯಾಗುವ ಯುದ್ಧ ಸಲಕರಣೆಗಳೂ ಹಳೆಯವು. 1959ರಲ್ಲಿ ಸೋವಿಯತ್‌ ಒಕ್ಕೂಟ ಮೊದಲ ಮಿಗ್‌ 21 ವಿಮಾನ ತಯಾರು ಮಾಡಿದ್ದು, 1963ರಲ್ಲಿ ಮಿಗ್‌ 21ನ ವಿವಿಧ ಆವೃತ್ತಿಗಳು (ಒಟ್ಟು 874) ವಿಮಾನಗಳು ಸೇರ್ಪಡೆಯಾಗಿದ್ದವು. ಇವುಗಳನ್ನು ಎಚ್‌ಎಎಲ್‌ ತಯಾರು ಮಾಡಿತ್ತು. 1971ರ ಬಾಂಗ್ಲಾ ಕದನದಲ್ಲಿ ಪ್ರಮುಖ ಪಾತ್ರವಹಿಸಿದ್ದು. ಕನಿಷ್ಠ 9 ಪಾಕ್‌ ವಿಮಾನಗಳನ್ನು ಹೊಡೆದುರುಳಿಸಿತ್ತು. 1990ರಲ್ಲಿ ಮಿಗ್‌ ಬೈಸನ್‌ ಆವೃತ್ತಿ ಸುಧಾರಣೆ ಮಾಡಲಾಗಿದೆ. ಹೊಸ ರಾಡಾರ್‌, ಏವಿಯಾನಿಕ್ಸ್‌, ಹೆಲ್ಮೆಟ್‌ ಮೌಂಟೆಡ್‌ ಸೈಟ್‌ ಜೋಡಿಸಲಾಗಿದೆ. ಸದ್ಯ ವಾಯುಪಡೆ ಬಳಿ 120 ಯುದ್ಧ ವಿಮಾನಗಳಿವೆ. ಇದುವರೆಗೆ ಭಾರತ ಖರೀದಿಸಿದ ವಿಮಾನಗಳಲ್ಲಿ ಶೇ. 70ರಷ್ಟು ಅಂದರೆ 500 ಮಿಗ್‌ಗಳು ಅವಘಡಕ್ಕೊಳಗಾಗಿವೆ. 200 ಪೈಲಟ್‌ಗಳು ಬಲಿಯಾಗಿದ್ದಾರೆ.  

ಟಾಪ್ ನ್ಯೂಸ್

chikkamagalore news

ಹಣದಾಸೆಗೆ ಗೋಮಾಳವನ್ನೂ ನುಂಗಿದ ಅಧಿಕಾರಿಗಳು….!: ಸ್ಥಳೀಯರ ಆರೋಪ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

gvhfghftyt

ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

goa news

ಪೋಲಿಸರಿಗೆ ಯಕ್ಷ ಪ್ರಶ್ನೆಯಾಗಿ ಉಳಿದ ಸಾಗರ ನಾಯ್ಕನ ಕೊಲೆ ಪ್ರಕರಣ

ಆಕ್ಸಿಜನ್ ಕೊರತೆಯೇ ಕೋವಿಡ್ ಸೋಂಕಿತರು ಸಾವನ್ನಪ್ಪಲು ಕಾರಣ:ಬಿ.ಕೆ.ಮಿಶ್ರಾ ತ್ರಿ ಸದಸ್ಯ ಸಮಿತಿ

ಆಕ್ಸಿಜನ್ ಕೊರತೆಯೇ ಕೋವಿಡ್ ಸೋಂಕಿತರು ಸಾವನ್ನಪ್ಪಲು ಕಾರಣ:ಬಿ.ಕೆ.ಮಿಶ್ರಾ ತ್ರಿ ಸದಸ್ಯ ಸಮಿತಿ

28

ಉತ್ತರಾಖಂಡ ವರುಣಾರ್ಭಟ: ಸಾವಿನ ಸಂಖ್ಯೆ 16ಕ್ಕೆ ಏರಿಕೆ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

chikkamagalore news

ಹಣದಾಸೆಗೆ ಗೋಮಾಳವನ್ನೂ ನುಂಗಿದ ಅಧಿಕಾರಿಗಳು….!: ಸ್ಥಳೀಯರ ಆರೋಪ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ಇಂಧನ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾಸಿಯಾ

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.