
ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಜನಪ್ರಿಯ ಮದ್ದಳೆ ವಾದಕ
Team Udayavani, Feb 7, 2023, 12:28 PM IST

ಲಕ್ನೋ: ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗಲೇ ಜನಪ್ರಿಯ ಮದ್ದಳೆ ವಾದಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಸೋಮವಾರ ( ಫೆ.6 ರಂದು) ನಡೆದಿದೆ.
ಹೆಸರಾಂತ ಮದ್ದಳೆ ವಾದಕ ದಿನೇಶ್ ಪ್ರಸಾದ್ ಮಿಶ್ರಾ (68) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸೋಮವಾರ ಸಫೇದ್ ಬರದರಿಯಲ್ಲಿ ಮಹೀಂದ್ರ ಸಂತಕಡ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿರುವ ವೇಳೆ ಮದ್ದಳೆ ಬಾರಿಸುತ್ತಿರುವ ಸಂದರ್ಭದಲ್ಲೇ ದಿನೇಶ್ ಪ್ರಸಾದ್ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ದಿನೇಶ್ ಪ್ರಸಾದ್ ಮಥುರಾ ಮೂಲದವರಾಗಿದ್ದು, ಅವರ ಅಂತಿಮ ವಿಧಿ ವಿಧಾನ ಆಲಂಬಾಗ್ ನಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sisodia ಸ್ಥಿತಿ ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟ ಕೇಜ್ರಿವಾಲ್; ವಿಡಿಯೋ

Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

ಜೀವಂತವಾಗಿದ್ದರೂ ದಾಖಲೆಯಲ್ಲಿ ʼಮೃತ ವ್ಯಕ್ತಿʼ: ಎಡವಟ್ಟಿನಿಂದ ವೃದ್ಧಾಪ್ಯ ವೇತನವೇ ಗೋತಾ.!

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

Borewell: ಆಟ ಆಡುವ ವೇಳೆ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
