ಕೊನೆಗೂ ಕಪ್ಪು ಪಟ್ಟಿಗೆ ಸೇರುವುದೇ ಪಾಕ್‌?


Team Udayavani, Feb 18, 2020, 6:33 AM IST

pakistan

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಎಫ್ಎಟಿಎಫ್ ಸಭೆಯಲ್ಲಿ ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ. ಅದೇನಾದರೂ ಕಪ್ಪುಪಟ್ಟಿಗೆ ಸೇರಿತೆಂದರೆ, ಆರ್ಥಿಕವಾಗಿ ದೊಡ್ಡ ಪೆಟ್ಟು ತಿನ್ನಲಿರುವುದಂತೂ ನಿಶ್ಚಿತ. ಹೀಗಾಗಿ, ಕುಣಿಕೆಯಿಂದ ಪಾರಾಗಲೂ ಇಮ್ರಾನ್‌ ಸರ್ಕಾರ ಚೀನ, ಮಲೇಷ್ಯಾ, ಟರ್ಕಿ ಹಾಗೂ ಸೌದಿಯ ಸಹಾಯ ಯಾಚಿಸುತ್ತಿದೆ… ಪ್ರಪಂಚದ ಮುಂದೆ ತರಹೇವಾರಿ ಕಥೆಗಳನ್ನೂ ಹೇಳುತ್ತಿದೆ!

ಉಗ್ರವಾದಕ್ಕೆ ಹರಿಯುವ ದೇಣಿಗೆಯ ಮೇಲೆ ನಿಗಾ ಇಡಲು ಹಾಗೂ ಹತ್ತಿಕ್ಕಲು ಪ್ರಯತ್ನಿಸುವ ಕಾರ್ಯಪಡೆ ಎಫ್ಎಟಿಎಫ್ (ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್ ಫೋರ್ಸ್‌) ಸಭೆಯು ಭಾನುವಾರ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದು, ಈ ಸಮಯದಲ್ಲೇ ಪಾಕ್‌ ಹೊಸ ಕಥೆ ಕಟ್ಟುತ್ತಿದೆ. ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಸ್ಥಾಪಕ ಮಸೂದ್‌ ಅಝರ್‌ ಮತ್ತು ಆತನ ಕುಟುಂಬ ಕಾಣೆಯಾಗಿದೆ ಎಂದು ಪಾಕಿಸ್ಥಾನ ಹೇಳಿದೆ!
ಇದೇ ಶುಕ್ರವಾರ ಎಫ್ಎಟಿಎಫ್ ಸಭೆಯಲ್ಲಿ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೇ ಬೇಡವೇ ಎಂಬ ಕುರಿತು ಚರ್ಚೆ ನಡೆಯಲಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ, ಸಂಯುಕ್ತ ರಾಷ್ಟ್ರಗಳು, ವಿಶ್ವ ಬ್ಯಾಂಕ್‌ ಸೇರಿದಂತೆ 205 ದೇಶಗಳ 800 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪಾಕಿಸ್ಥಾನವಂತೂ ಏನಕೇನ ಈ ಕುಣಿಕೆಯಿಂದ ಪಾರಾಗಲು ಸಕಲ ಪ್ರಯತ್ನ ನಡೆಸಿದೆ. ಇದೇ ಕಾರಣಕ್ಕಾಗಿಯೇ, ಕೆಲವೇ ದಿನಗಳ ಹಿಂದಷ್ಟೇ ಅದು, ಮುಂಬೈ ದಾಳಿಯ ಉಗ್ರ ಹಫೀಜ್‌ ಸಯೀದ್‌ಗೆ 11 ವರ್ಷ ಜೈಲು ಶಿಕ್ಷೆ ವಿಧಿಸುವ ನಾಟಕವನ್ನೂ ಮಾಡಿರುವುದು ಇಲ್ಲಿ ನೆನಪಿಸಲೇಬೇಕು.
ಕಳೆದ ಎರಡು ವರ್ಷಗಳಿಂದ ಪಾಕಿಸ್ಥಾನ ಗ್ರೇ ಪಟ್ಟಿಯಲ್ಲಿದ್ದು, ಅದೇನಾದರೂ ಕಪ್ಪು ಪಟ್ಟಿಯಲ್ಲಿ ಜಾಗ ಪಡೆಯಿತೆಂದರೆ, ತೀವ್ರ ಸಂಕಷ್ಟಕ್ಕೆ ಈಡಾಗಲಿರುವುದಂತೂ ನಿಶ್ಚಿತ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ರಾಷ್ಟ್ರಗಳು ಪಾಕಿಸ್ಥಾನದ ಪರ ನಿಂತು, ಅದನ್ನು ಬಚಾವು ಮಾಡಲು ಪ್ರಯತ್ನಿಸಲಿವೆ.

ಉಗ್ರವಾದದ ವಿಷಯದಲ್ಲಿ ಎಫ್ಎಟಿಎಫ್ , ಉಗ್ರರಿಗೆ ಹರಿಯುವ ಹಣದ ಮೂಲವನ್ನು ಹತ್ತಿಕ್ಕಬೇಕು ಎಂಬ ಅಂಶ ಸೇರಿದಂತೆ 27 ಅಂಶಗಳನ್ನು ಪಾಲಿಸಬೇಕು ಎಂದು ಪಾಕಿಸ್ಥಾನಕ್ಕೆ ಈ ಹಿಂದೆ ತಾಕೀತು ಮಾಡಿತ್ತು. ಆದರೆ ಪಾಕಿಸ್ಥಾನ ಅದರಲ್ಲಿ 22 ಅಂಶಗಳಲ್ಲಿ ವಿಫ‌ಲವಾಗಿತ್ತು. ಹೀಗಾಗಿ, ಕಳೆದ ವರ್ಷವೇ ಅದು ಕಪ್ಪುಪಟ್ಟಿಗೆ ಬೀಳುವ ನಿರೀಕ್ಷೆಯಿತ್ತು. ಆದರೆ ಚೀನ ಸೇರಿದಂತೆ ಕೆಲವು ರಾಷ್ಟ್ರಗಳು ಅದನ್ನು ಪಾರು ಮಾಡಿದ್ದವು.

ಕಳೆದ ವರ್ಷ ಪುಲ್ವಾಮಾ ದಾಳಿಯ ಅನಂತರ ಅನೇಕ ರಾಷ್ಟ್ರಗಳು ಪಾಕಿಸ್ಥಾನದ ಮೇಲೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದವು. ಹೀಗಾಗಿ, ಎಫ್ಎಟಿಎಫ್ ಕಪ್ಪು ಪಟ್ಟಿಗೆ ಬೀಳುವ ಭಯದಿಂದ ಪಾಕಿಸ್ಥಾನ, ತಾನು ತನ್ನ ದೇಶದಲ್ಲಿರುವ ಎಲ್ಲಾ ತೀವ್ರವಾದಿ ಸಂಘಟನೆಗಳ ಮೇಲೂ ಕ್ರಮ ಜರುಗಿಸಿರುವುದಾಗಿ ತಿಳಿಸಿತ್ತು. ಈಗ ಉಗ್ರ ಮಸೂದ್‌ ಅಝರ್‌ ಕಾಣೆಯಾಗಿದ್ದಾನೆ ಎಂದು ವಾದಿಸುತ್ತಿದೆ. ಆದರೆ ಭಾರತ, ಮಸೂದ್‌ ಅಝರ್‌ ಸೇರಿದಂತೆ ವಿವಿಧ ಉಗ್ರರ ನೆಲೆಗಳನ್ನು ತಾನು ಗುರುತಿಸಿರುವುದಾಗಿ, ಈ ವಿಷಯವನ್ನು ಶುಕ್ರವಾರದ ಸಭೆಯಲ್ಲಿ ಮಂಡಿಸುವುದಾಗಿ ಹೇಳುತ್ತಿದೆ. ಅಲ್ಲದೇ ಮಸೂದ್‌ ಅಝರ್‌ನ ಮೇಲೆ ಕ್ರಮಕೈಗೊಳ್ಳಲೇಬೇಕೆಂದು ಪಾಕಿಸ್ಥಾನದ ಮೇಲೆ ಒತ್ತಡ ತರಲು ಪ್ರಯತ್ನಿಸಲಿದೆ. ಇದನ್ನು ಅರಿತ ಪಾಕ್‌ ಮಸೂದ್‌ ಅಝರ್‌ ಕಾಣೆಯಾಗಿದ್ದಾನೆ ಎಂದು ಹೇಳುತ್ತಿದೆ ಎನ್ನುವ ಅನುಮಾನಗಳಿವೆ. ಪಾಕಿಸ್ಥಾನದ ಮುತ್ತಾಹಿದ್‌ ಕ್ವಾಮಿ ಮೂವೆ¾ಂಟ್‌ ಪಕ್ಷದ ಮುಖ್ಯಸ್ಥ ಅಲ್ತಾಫ್ ಹುಸೇನ್‌ ಅವರು ಎಫ್ಎಟಿಎಫ್ ಸಭೆಗೆ ಮುನ್ನ ಮಸೂದ್‌ ಅಝರ್‌ ಮಾಯವಾಗಿರುವುದು ನಿಜಕ್ಕೂ ಕಳವಳ ಹುಟ್ಟಿಸುವ ಸಂಗತಿ, ಇದು ಪಾಕಿಸ್ಥಾನದ ನಿಯತ್ತಿನ ಮೇಲೆ ಖಂಡಿತ ಸವಾಲೆಸೆಯಲಿದ್ದು, ಸಭೆಯಲ್ಲಿ ಪಾಕ್‌ಗೆ ಸಮಸ್ಯೆಯಾಗಲಿದೆ ಎನ್ನುತ್ತಾರೆ.

ಎಷ್ಟು ಮತಗಳು ಬೇಕು?
ಕಪ್ಪು ಪಟ್ಟಿಯಿಂದ ತಪ್ಪಿಸಿಕೊಳ್ಳಲು ಮೂರು ಮತಗಳ ಬೆಂಬಲ ಸಿಗಬೇಕು.
ಗ್ರೇ ಪಟ್ಟಿಯಿಂದ ತಪ್ಪಿಸಿಕೊಳ್ಳಲು 15 ಮತಗಳು ಬೇಕೇಬೇಕು. ಹೀಗಾಗಿ, ಪಾಕಿಸ್ಥಾನ ಕಪ್ಪು ಪಟ್ಟಿಯಿಂದ ತಪ್ಪಿಸಿಕೊಂಡರೂ ಗ್ರೇ ಪಟ್ಟಿಯಲ್ಲಂತೂ ಮುಂದುವರಿಯಲಿದೆ.

ಮಲೇಷ್ಯಾ, ಟರ್ಕಿ, ಚೀನ ಬೆನ್ನತ್ತಿ
ಕಳೆದ ವರ್ಷವೇ ಪಾಕ್‌ ಕಪ್ಪು ಪಟ್ಟಿಗೆ ಸೇರಬೇಕಿತ್ತು. ಆದರೆ ಬಹುಕಾಲದ ಮಿತ್ರ ರಾಷ್ಟ್ರಗಳಾದ ಚೀನ, ಮಲೇಷ್ಯಾ, ಟರ್ಕಿ, ಸೌದಿಯ ಪ್ರಯತ್ನದಿಂದಾಗಿ ಅದು ಬಚಾವಾಗಿತ್ತು. ಕಳೆದೊಂದು ತಿಂಗಳಲ್ಲಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಮಲೇಷ್ಯಾ ಪ್ರವಾಸಕೈಗೊಂಡದ್ದು, ಟರ್ಕಿಯ ಅಧ್ಯಕ್ಷ ಎಡೋìಗನ್‌ ಪಾಕಿಸ್ಥಾನದ ಪ್ರವಾಸ ಕೈಗೊಂಡಿರುವುದು, ಚೀನದ ರಾಯಭಾರಿಗಳು-ಪಾಕ್‌ ರಾಯಭಾರಿಗಳ ನಡುವೆ ಜೋರು ಮಾತುಕತೆ ನಡೆದಿದೆ. ಇತ್ತೀಚೆಗೆ ಸೌದಿ ದೊರೆಯನ್ನೂ ಇಮ್ರಾನ್‌ ಭೇಟಿಯಾಗಿದ್ದರು. ಈ ಬಾರಿಯೂ ಈ ರಾಷ್ಟ್ರಗಳೆಲ್ಲ ಪಾಕ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.
***
ಎಫ್ಎಟಿಎಫ್ ಕಪ್ಪು ಪಟ್ಟಿಯಲ್ಲಿರುವ ಪ್ರಮುಖ ರಾಷ್ಟ್ರಗಳೆಂದರೆ ಉತ್ತರ ಕೊರಿಯಾ ಹಾಗೂ ಇರಾನ್‌.
ಉತ್ತರ ಕೊರಿಯಾ: ಕಿಂ ಜಾಂಗ್‌ ಉನ್‌ರ ಈ ಏಷ್ಯನ್‌ ರಾಷ್ಟ್ರ ಅಂತಾರಾಷ್ಟ್ರೀಯ ಸಹಕಾರ, ಸಹಾಯಗಳಿಂದ ವಂಚಿತವಾಗಿದೆ.
ಇರಾನ್‌: ಆದಾಗ್ಯೂ ಇರಾನ್‌ ಜಾಗತಿಕ ಶಕ್ತಿಗಳೊಂದಿಗೆ 2015ರಲ್ಲೇ ಪರಮಾಣು ಒಪ್ಪಂದ ಮಾಡಿಕೊಂಡಿತಾದರೂ, ಅದಕ್ಕಿಂತ 7 ವರ್ಷಗಳ ಹಿಂದೆಯೇ, ಅಂದರೆ 2008ರಿಂದಲೇ ಅದು ಕಪ್ಪು ಪಟ್ಟಿಯಲ್ಲಿ ಇದೆ.

ಪಾಕ್‌ ಕಪ್ಪು ಪಟ್ಟಿಗೆ ಸೇರಿದರೆ ಏನೆಲ್ಲ ಸಂಕಷ್ಟ? 
1. ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್‌, ಏಷ್ಯನ್‌ ಡೆವಲಪ್‌ ಮೆಂಟ್‌ ಬ್ಯಾಂಕ್‌ನಂಥ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ, ಐರೋಪ್ಯ ಒಕ್ಕೂಟ ಹಾಗೂ ವಿವಿಧ ದೇಶಗಳಿಂದ ಸಹಾಯ ಸಿಗುವುದು ಬಹಳವೇ ಕಷ್ಟವಾಗುತ್ತದೆ. ಈಗಿನಂತೆ ಯಾವ ರಾಷ್ಟ್ರಕ್ಕೂ ಕೂಡ ಪಾಕಿಸ್ಥಾನಕ್ಕೆ ಮುಕ್ತವಾಗಿ ಸಾಲ ಕೊಡುವುದಕ್ಕೆ ಅಥವಾ ಹೂಡಿಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಮಾಡಿದರೂ ಹಿಂಬಾಗಿಲಿನ ಮೂಲಕ ಮಾಡಬೇಕಷ್ಟೆ!

2. ರಾಷ್ಟ್ರವೊಂದು ಎಫ್ಎಟಿಎಫ್ನ ಕಪ್ಪು ಪಟ್ಟಿಗೆ ಸೇರಿತೆಂದರೆ, ಉದ್ಯಮಗಳಿಗೆ ಆ ರಾಷ್ಟ್ರದೊಂದಿಗೆ ವ್ಯವಹರಿಸುವುದು ಅಪಾಯಕಾರಿಯಾಗುತ್ತದೆ. ಉದಾಹರಣೆಗೆ, ಕಂಪನಿಯೊಂದು ಕಪ್ಪು ಪಟ್ಟಿಯಲ್ಲಿರುವ ದೇಶಕ್ಕೆ ಹಣ ಕಳುಹಿಸಲು ಅಥವಾ ಅಲ್ಲಿಂದ ಹಣ ಪಡೆಯಲು ಪ್ರಯತ್ನಿಸಿದರೆ, ಈ ಪ್ರಯತ್ನ ವಿಫ‌ಲವಾಗಬಹುದು. ಏಕೆಂದರೆ, ಹಣವನ್ನು ಕಳುಹಿಸುವ ಬ್ಯಾಂಕು, ಈ ವ್ಯವಹಾರವನ್ನು ರದ್ದುಪಡಿಸುವ ಸಾಧ್ಯತೆ ಅಧಿಕ. ಒಂದು ವೇಳೆ, ಅಂಥ ವ್ಯವಹಾರ ನಡೆದರೆ, ಸಂಬಂಧಿಸಿದ ಬ್ಯಾಂಕ್‌ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಭಾರೀ ಮೊತ್ತದ ದಂಡ, ನಿರ್ಬಂಧ  ಎದುರಿಸುವುದಷ್ಟೇ ಅಲ್ಲದೆ ನಿರ್ವಾಹಕರು ಜೈಲು ಕೂಡ ಸೇರಬೇಕಾಗುತ್ತದೆ. ಉದಾಹರಣೆಗೆ, ಇರಾನ್‌ ಎಫ್ಎಟಿಎಫ್ನ ಕಪ್ಪು ಪಟ್ಟಿಯಲ್ಲಿದೆ. ಈ ರಾಷ್ಟ್ರದೊಂದಿಗೆ ರಹಸ್ಯವಾಗಿ ವ್ಯವಹರಿಸಿದ್ದಕ್ಕಾಗಿ ಚೀನ ಮೂಲದ ಹುವಾಯಿ ಕಂಪೆನಿಯ ಸ್ಥಾಪಕನ ಮಗಳಾದ ಮೆಂಗ್‌ ವ್ಯಾಂಗ್‌ ಝೋ ಬಂಧನಕ್ಕೊಳಗಾದರು…ಈಗಲೂ ಅಮೆರಿಕದಲ್ಲಿ ಅವರ ವಿರುದ್ಧ ಕೇಸು ನಡೆಯುತ್ತಿದೆ.

3.ಅಂತಾರಾಷ್ಟ್ರೀಯ ವ್ಯಾಪಾರ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಕಪ್ಪು ಪಟ್ಟಿಯಲ್ಲಿರುವ ರಾಷ್ಟ್ರಗಳ ಜತೆ ವ್ಯಾಪಾರ ನಡೆಸಲು ಅನ್ಯರಾಷ್ಟ್ರಗಳು ಹಿಂಜರಿಯುತ್ತವೆ.

4. ಎನ್‌ಜಿಒಗಳಿಗೆ ದೇಣಿಗೆ ಪಡೆಯಲು ಕಷ್ಟವಾಗುತ್ತದೆ. ಪಾಕಿಸ್ಥಾನದಂಥ ರಾಷ್ಟ್ರಗಳ ಎನ್‌ಜಿಒಗಳಿಗೆ ವಿದೇಶಗಳಿಂದ ಹರಿದುಬರುವ ಹಣ ಉಗ್ರವಾದಕ್ಕೆ ಬಳಕೆಯಾಗುತ್ತಿದೆ ಎಂಬ ಆರೋಪವಿದೆ. ಸಮಾಜ ಸೇವೆಯ ಪೋಷಾಕಿನಲ್ಲಿ ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸುವ ಈ ರೀತಿಯ ಎನ್‌ಜಿಒಗಳು ಉತ್ತರದಾಯಿತ್ವದಿಂದ ತಪ್ಪಿಸಿಕೊಂಡು ಬಿಡುತ್ತವೆ. ಹೀಗಾಗಿ, ಒಂದು ದೇಶ ಕಪ್ಪು ಪಟ್ಟಿಗೆ ಸಿಲುಕಿತೆಂದರೆ, ಸಹಜವಾಗಿಯೇ, ಅಲ್ಲಿ ಉಗ್ರವಾದಕ್ಕೆ ಹರಿಯುವ ಹಣಕ್ಕೂ ಬಹಳ ದೊಡ್ಡಪೆಟ್ಟು ಬೀಳುತ್ತದೆ.

5. ಸೌದಿ ಮೇಲೆ ಭಾರತದ ಗಮನ!
ಪಾಕಿಸ್ಥಾನವನ್ನು ಕಪ್ಪು ಪಟ್ಟಿಯಿಂದ ಬಚಾವು ಮಾಡಲು ಮೂರು ರಾಷ್ಟ್ರಗಳ ಓಟು ಸಾಕು. ಮಲೇಷ್ಯಾ, ಟರ್ಕಿ, ಚೀನ ಮತ್ತು ಸೌದಿ ಮೊದಲಿನಿಂದಲೂ ಎಫ್ಎಟಿಎಫ್ನಲ್ಲಿ ಪಾಕಿಸ್ಥಾನವನ್ನು ಬಚಾವು ಮಾಡುತ್ತಾ ಬಂದಿವೆ. ಗಮನಾರ್ಹ ಸಂಗತಿಯೆಂದರೆ, ಕಾಶ್ಮೀರದ ವಿಚಾರ ಬಂದಾಗ ಮಾತ್ರ ಮೊದಲ ಮೂರೂ ರಾಷ್ಟ್ರಗಳು ಪಾಕಿಸ್ಥಾನದ ಪರ ಮಾತನಾಡಿದರೆ, ಸೌದಿ ಭಾರತದ ಪರ ನಿಲ್ಲುತ್ತದೆ. ಇದಕ್ಕೆ ಕಾರಣ ಕೆಲವು ವರ್ಷಗಳಿಂದ ಸೌದಿ ಮತ್ತು ಭಾರತದ ದೋಸ್ತಿ ಸದೃಢವಾಗುತ್ತಾ ಸಾಗುತ್ತಿರುವುದು. ಹೀಗಿದ್ದರೂ ಸೌದಿಗೆ ಪಾಕಿಸ್ಥಾನವನ್ನು ಕಪ್ಪುಪಟ್ಟಿಯಿಂದ ಬಚಾವು ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ, ಅದು ಪಾಕಿಸ್ಥಾನದಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದೆ, ಅಷ್ಟೇ ಪ್ರಮಾಣದಲ್ಲಿ ಸಾಲವನ್ನೂ ನೀಡಿದೆ. ಒಮ್ಮೆ ಪಾಕಿಸ್ಥಾನವೇನಾದರೂ ಕಪ್ಪು ಪಟ್ಟಿಗೆ ಸಿಲುಕಿತೆಂದರೆ, ಈ ಹಣ ಸೌದಿಯ ಕೈ ಜಾರುವ ಅಪಾಯ ಹೆಚ್ಚು. ಒಂದರ್ಥದಲ್ಲಿ ಸೌದಿ ನಡೆ ಭಾರತಕ್ಕೆ ನುಂಗಲಾರದ ತುತ್ತಾದರೂ, ಭಾರತ ಸೌದಿಯ ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡಿದೆ. ಸೌದಿ ಅಷ್ಟೇ ಅಲ್ಲದೆ, ಅಮೆರಿಕ ಕೂಡ ಈ ಬಾರಿ ಪಾಕಿಸ್ಥಾನದ ಪರ ನಿಲ್ಲಬಹುದು ಎಂಬ ಅನುಮಾನವೂ ಇದೆ. ಪಾಕಿಸ್ಥಾನ ಸಂಪೂರ್ಣವಾಗಿ ಚೀನದ ತೆಕ್ಕೆಗೆ ಜಾರುವುದು ಅಮೆರಿಕಕ್ಕೆ ಇಷ್ಟವಿಲ್ಲ. ಏಷ್ಯಾ ಖಂಡದಲ್ಲಿ ಅದಕ್ಕೆ ಪಾಕಿಸ್ಥಾನ ದಂಥ ರಾಷ್ಟ್ರ ಅತ್ಯಗತ್ಯ. ಹೀಗಾಗಿ, ಅಮೆರಿಕ ಪಾಕಿಸ್ಥಾನವನ್ನು ಬಚಾವು ಮಾಡುವುದಷ್ಟೇ ಅಲ್ಲ, ಅದನ್ನು ಗ್ರೇ ಪಟ್ಟಿಯಿಂದಲೇ ಹೊರತರುವ ಯೋಚನೆಯಲ್ಲಿದೆ ಎಂದೂ ಹೇಳಲಾಗುತ್ತದೆ. ಆದರೆ, ಈ ಪ್ರಯತ್ನಕ್ಕೆ ಅದಕ್ಕೆ ಬೆಂಬಲ ಸಿಗಲಾರದು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.