ಕಳೆದ 10 ತಿಂಗಳಲ್ಲಿ 2,500 ಭಾರೀ ಕದನ ವಿರಾಮ ಉಲ್ಲಂಘಿಸಿದ ಪಾಕ್: ಬೆಚ್ಚಿ ಬೀಳಿಸಿದ ವರದಿ

Team Udayavani, Nov 17, 2019, 8:13 AM IST

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಪಾಕ್ ತನ್ನ ದುಷ್ಕೃತ್ಯವನ್ನು ಮುಂದುವರಿಸಿದ್ದು  2019ರ ಜನವರಿಯಿಂದ ನವೆಂಬರ್ 15 ರವರೆಗೆ ಗಡಿ ನಿಯಂತ್ರಣ ರೇಖೆಯ ಬಳಿ (LOC) 2,500 ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ವರದಿಯಾಗಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಲಡಾಕ್ ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ನಂತರ ಅತೀ ಹೆಚ್ಚು ಭಾರೀ ಕದನ ವಿರಾಮ ಉಲ್ಲಂಘಿಸಲಾಗಿದೆ. ಆದರೇ ಕಣಿವೆ ರಾಜ್ಯದಲ್ಲಿ ಅಶಾಂತಿಯನ್ನು ಉಂಟುಮಾಡುವ ಪಾಕ್ ನ ಎಲ್ಲಾ ಪ್ರಯತ್ನಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

ಅಕ್ಟೋಬರ್‌ನಲ್ಲಿಯೇ 350ಕ್ಕೂ ಹೆಚ್ಚು ಭಾರೀ ಕದನ ವಿರಾಮ ಉಲ್ಲಂಘನೆಯಾಗಿದ್ದು, ಇದು ಕಳೆದ 10 ತಿಂಗಳಲ್ಲಿಯೇ  ಅತಿ ಹೆಚ್ಚು ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವೆಂಬರ್  ತಿಂಗಳ ಮೊದಲ 11 ದಿನಗಳಲ್ಲಿ 97 ಭಾರೀ ಕದನ ವಿರಾಮ ಉಲ್ಲಂಘನೆ ಮಾಡಿ ಪಾಕ್ ತನ್ನ ಪುಂಡಾಟ ಮೆರೆದಿದೆ.

ಪಾಕಿಸ್ತಾನ ಸೇನೆಯು ಗಡಿ ಪ್ರದೇಶಗಳಲ್ಲಿ ಭಾರತೀಯ ನಾಗರಿಕರನ್ನು ತಮ್ಮ ಪ್ರಮುಖ ಗುರಿಗಳನ್ನಾಗಿ ಮಾಡಿ ಗುಂಡಿನ ದಾಳಿ ನಡೆಸುತ್ತಿದೆ. ಒಂದೇ ದಿನದಲ್ಲಿ 10ಕ್ಕೂ ಹೆಚ್ಚು ಭಾರೀ ಶೆಲ್ ದಾಳಿ ನಡೆಸಿದ ುದಾಹರಣೆಗಳು ಇವೆ. ಹಿರಾನಗರ, ಅಖ್ನೂರ್, ಸುಂದರಬಾನಿ, ನೌಶೇರಾ, ರಾಜೌರಿ, ಮೆಂಧರ್, ಪೂಂಚ್, ಉಡಿ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸತತವಾಗಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ