ಪಾಕ್ ಗೆ ದರ್ಗಾದ ಮನವಿ
Team Udayavani, Oct 30, 2019, 12:22 AM IST
ಜೈಪುರ: ಕರ್ತಾರ್ಪುರ ಸಾಹಿಬ್ಗ ಭೇಟಿ ನೀಡುವ ಯಾತ್ರಿಕರಿಗೆ 20 ಡಾಲರ್ ಶುಲ್ಕ ವಿಧಿಸುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಪಾಕಿಸ್ಥಾನಕ್ಕೆ ರಾಜಸ್ಥಾನದ ಇತಿಹಾಸ ಪ್ರಸಿದ್ಧ ಅಜ್ಮೇರ್ ದರ್ಗಾದ ಧರ್ಮಗುರುಗಳ ಸಮುದಾಯವಾದ ಖಾದಿಮ್ ಸಮುದಾಯ ಮನವಿ ಮಾಡಿದೆ.
ಅಜ್ಮೇರ್ನಲ್ಲೂ ವಾರ್ಷಿಕ ಉರೂಸ್ ನಡೆಯುವಾಗ ಪಾಕಿಸ್ಥಾನ ಸೇರಿದಂತೆ ವಿವಿಧ ದೇಶಗಳ ಯಾತ್ರಿಕರು ಆಗಮಿಸುತ್ತಾರೆ. ಅವರಿಗೆ ಯಾವತ್ತೂ ನಾವು ಶುಲ್ಕ ವಿಧಿಸಿಲ್ಲ. ಇದನ್ನು ಅರ್ಥಮಾಡಿಕೊಂಡು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರ್ಪುರ ಯಾತ್ರಿಕರನ್ನೂ ಉಚಿತವಾಗಿ ಪ್ರವೇಶ ಕಲ್ಪಿಸಬೇಕು. ಯಾತ್ರಿಕರಿಗೆ ಶುಲ್ಕ ವಿಧಿಸಿದರೆ “ಸದ್ಭಾವನೆಗೆ’ ಅರ್ಥವಿರುವುದಿಲ್ಲ ಎಂದೂ ದರ್ಗಾ ಹೇಳಿದೆ.