ಎಲ್.ಒ.ಸಿ.ಯಲ್ಲಿ ದಾಳಿ ಮಾಡಲು ಪಾಕಿಸ್ಥಾನದ ಬ್ಯಾಟ್ ಸಜ್ಜು!: ಗುಪ್ತಚರ ಮಾಹಿತಿ
Team Udayavani, Jan 17, 2020, 9:18 PM IST
ಜಮ್ಮು ಕಾಶ್ಮೀರದಲ್ಲಿ ಗಸ್ತು ನಿರತ ಭಾರತೀಯ ಯೋಧರು.
ನವದೆಹಲಿ: ಗಣರಾಜ್ಯೋತ್ಸವ ದಿನ ಸಮೀಪಿಸುತ್ತಿರುವಂತೆ ಭಾರತ ಪಾಕಿಸ್ಥಾನ ಗಡಿಭಾಗದಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನದ ಬಾರ್ಡರ್ ಆ್ಯಕ್ಷನ್ ಟೀಮ್ (BAT) ಸಜ್ಜಾಗಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಇದಕ್ಕೆ ಪೂರಕವಾಗಿ ಬ್ಯಾಟ್ ಪಡೆಗಳು ಗಡಿಭಾಗದಲ್ಲಿ ಸುಧಾರಿತ ಸ್ಪೋಟಕಗಳನ್ನು ಹುದುಗಿಡುತ್ತಿದ್ದಾರೆ ಎಂಬ ಎಚ್ಚರಿಕೆಯನ್ನೂ ಸಹ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ನೀಡಿದೆ.
ಪಾಕಿಸ್ಥಾನದ ಬ್ಯಾಟ್ ಪಡೆಗಳು ಐ.ಎಸ್.ಐ. ಮತ್ತು ಉಗ್ರ ಸಂಘಟನೆಗಳ ನೆರವಿನಿಂದ ಜಮ್ಮು ಕಾಶ್ಮೀರಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಬಲವಾದ ಸಾಧ್ಯತೆಗಳಿವೆ ಎಂಬ ಮಾಹಿತಿಯನ್ನೂ ಗುಪ್ತಚರ ಇಲಾಖೆ ನೀಡಿದೆ.
ಪಾಕಿಸ್ಥಾನಿ ಎಸ್.ಎಸ್.ಜಿ. ಕಮಾಂಡೋಗಳ ಒಂದು ತಂಡ ಕೆಲವು ಉಗ್ರರೊಂದಿಗೆ ಕೃಷ್ಣ ಘಾಟಿ ಪ್ರದೇಶದಲ್ಲಿ ಕಾಣಸಿಕ್ಕಿದ ಮಾಹಿತಿಯನ್ನು ಗುಪ್ತಚರ ಇಲಾಖೆ ಭದ್ರತಾ ಪಡೆಗಳೊಂದಿಗೆ ಹಂಚಿಕೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..