ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಗುಪ್ತಚರ ಸಂಸ್ಥೆಗಳು

Team Udayavani, Oct 20, 2021, 6:40 AM IST

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ಕಾಶ್ಮೀರ: ಆತಂಕಗೊಂಡಿರುವ ವಲಸಿಗ ಕಾರ್ಮಿಕರು ಊರಿಗೆ ಮರಳಲು ಶ್ರೀನಗರ ರೈಲು ನಿಲ್ದಾಣದಲ್ಲಿ ಸೇರಿರುವ ದೃಶ್ಯ.

ಹೊಸದಿಲ್ಲಿ: ಜಮ್ಮು- ಕಾಶ್ಮೀರದಲ್ಲಿ ಒಂದು ತಿಂಗಳಿನಿಂದ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ಹತ್ಯೆಗಳ ಹಿಂದೆ ಪಾಕಿಸ್ಥಾನದ ಐಎಸ್‌ಐನ “ನೀಲನಕ್ಷೆ’ ಕೆಲಸ ಮಾಡುತ್ತಿರುವುದು ಈಗ ಸ್ಪಷ್ಟವಾಗಿದೆ.

ಕಣಿವೆಯಲ್ಲಿ ಅಟ್ಟಹಾಸಗೈಯ್ಯುತ್ತಿರುವ ಉಗ್ರರಿಗೆ ಪಾಕಿಸ್ಥಾನದ ಐಎಸ್‌ಐ ಕಳುಹಿಸಿ ಕೊಟ್ಟಿರುವ “22 ಅಂಶಗಳ ಕಾರ್ಯ ಸೂಚಿ’ ಯನ್ನು ಭಾರತೀಯ ಗುಪ್ತಚರ ಸಂಸ್ಥೆ ಗಳು ಬಹಿರಂಗಪಡಿಸಿವೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ರಕ್ತದೋಕುಳಿ ಹರಿಸುವ ಐಎಸ್‌ಐ ಸಂಚು ಬಯಲಾಗಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಜಮ್ಮು – ಕಾಶ್ಮೀರದಲ್ಲಿ 11 ಮಂದಿ ನಾಗರಿಕರು ಈ ರಾಕ್ಷಸರ ಗುಂಡಿಗೆ ಬಲಿಯಾಗಿದ್ದಾರೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಕಣಿವೆಯಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಅನ್ಯರಾಜ್ಯದವರ ಆಗಮನವೂ ಹೆಚ್ಚಾಗಿದೆ. ಅವರು ಇಲ್ಲಿ ಖಾಯಂ ಆಗಿ ನೆಲೆ ನಿಂತರೆ ತಮ್ಮ ಉಗ್ರ ಚಟುವಟಿಕೆಗಳಿಗೆ ಸಮಸ್ಯೆಯಾಗಬಹುದು ಎಂಬ ಕಾರಣದಿಂದ ಪಾಕಿಸ್ಥಾನದ ಐಎಸ್‌ಐ ಅನ್ಯರಾಜ್ಯದವರಲ್ಲಿ ಭೀತಿ ಹುಟ್ಟಿಸುವ ಕೆಲಸಕ್ಕೆ ಕೈಹಾಕಿದೆ. ಅದಕ್ಕಾಗಿ ಉಗ್ರರು ಆಯ್ದುಕೊಂಡಿರುವ ಮಾರ್ಗ ಈ “ಗುರಿ ನಿರ್ದೇಶಿತ ಹತ್ಯೆ’.

ಸರಕಾರಿ ನೌಕರರಿಗೂ ಸಂದೇಶ
ಜಮ್ಮು – ಕಾಶ್ಮೀರದಲ್ಲಿ ನೆಲೆಸುವ ಸ್ಥಳೀಯೇತರರಿಂದ ಮುಂದೆ ಆಗಬಹು ದಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಕಾರ್ಯಸೂಚಿಯಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಸ್ಥಳೀಯ ಸರಕಾರಿ ನೌಕರರ ಸ್ವಾತಂತ್ರ್ಯವನ್ನು ಕಸಿಯುವ ಮತ್ತು ಅವರ ಕೆಲಸಕ್ಕೆ ತೊಂದರೆಯಾಗುವಂಥ ಯಾವುದೇ ಆದೇಶ ಅಥವಾ ಸುತ್ತೋಲೆಗಳು ಬಂದರೂ ಅವೆರೆಲ್ಲರೂ ಅದಕ್ಕೆ ವಿರುದ್ಧ ಪ್ರತಿರೋಧ ಒಡ್ಡುವಂತೆ ಮಾಡಬೇಕು. ಕೇಂದ್ರಾಡಳಿತ ಪ್ರದೇಶದಲ್ಲಿ ಕ್ರೀಡಾ ಕಾರ್ಯಕ್ರಮ ಆಯೋಜಿಸಿದರೆ ಬಹಿಷ್ಕರಿಸಬೇಕು. ದ್ರೋಹ ಎಸಗುವವರನ್ನು ಪತ್ತೆಹಚ್ಚಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

6 ಲಷ್ಕರ್‌ ಉಗ್ರರ ಹತ್ಯೆ
ಜಮ್ಮು – ಕಾಶ್ಮೀರದ ರಜೌರಿ ವಲಯದ ಅರಣ್ಯದಲ್ಲಿ ಮಂಗಳವಾರ ಭದ್ರತ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಲಷ್ಕರ್‌-ಎ-ತೊಯ್ಬಾದ 6 ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದ 2-3 ತಿಂಗಳಲ್ಲಿ ಪಾಕ್‌ನಿಂದ ಭಾರತದೊಳಗೆ ನುಸುಳಿರುವ ಸುಮಾರು 10 ಲಷ್ಕರ್‌ ಉಗ್ರರು ರಜೌರಿ- ಪೂಂಛ… ಜಿಲ್ಲೆಗಳ ನಡುವೆ ಬರುವ ದಟ್ಟಾರಣ್ಯಗಳಲ್ಲಿ ಅವಿತಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತ ಪಡೆ ಕಾರ್ಯಾಚರಣೆ ನಡೆಸಿದ್ದು, ಇನ್ನಷ್ಟು ಉಗ್ರರಿಗಾಗಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರ ನೀಲ ನಕಾಶೆ
ಐಎಸ್‌ಐ ರವಾನಿಸಿರುವ ಟೂಲ್‌ಕಿಟ್‌ನಲ್ಲಿ 22 ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಅನುಸರಿಸುವಂತೆ ಉಗ್ರರಿಗೆ ನಿರ್ದೇಶನ ನೀಡ ಲಾಗಿದೆ. ಸ್ಥಳೀಯೇತರ ಅಧಿಕಾರಿ ಗಳನ್ನು ಜಮ್ಮು- ಕಾಶ್ಮೀರದಲ್ಲಿ ಅಥವಾ ಅವರ ಊರಿಗೆ ಹೋಗಿ ಹತ್ಯೆ ಮಾಡುವಂತೆ ತಿಳಿಸ ಲಾಗಿದೆ. ಯಾವುದೇ ಇಲಾಖೆ, ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ರಲ್ಲದ ಪ್ರತೀ ಉದ್ಯೋಗಿ ಯನ್ನು ಗುರಿಯಾಗಿಸಿ ದಾಳಿ ನಡೆಸುವಂತೆ ಸೂಚಿಸಲಾಗಿದೆ.

ಟೂಲ್‌ಕಿಟ್‌ನಲ್ಲಿ ಏನಿದೆ?
01ದೀರ್ಘಾವಧಿ ವಾಸವಿರ ಲೆಂದು ಕಣಿವೆಗೆ ಬರುವ ಅನ್ಯ ರಾಜ್ಯದವರನ್ನು ಹತ್ಯೆ ಮಾಡಿ.
02 90ರ ದಶಕಗಳಲ್ಲಿ ಕಾಶ್ಮೀರ ದಿಂದ ವಲಸೆ ಹೋಗಿ, ಈಗ ವಾಪಸಾಗಲು ಬಯಸುತ್ತಿರುವ ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆಸಿ.
03ಸ್ಥಳೀಯವಾಗಿ ಪೊಲೀಸರು, ಸೇನೆಗೆ ಮಾಹಿತಿದಾರರಾಗಿ ಕೆಲಸ ಮಾಡುವವರ ಮನೆಗಳ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆಯಿರಿ, ಕಲ್ಲುತೂರಾಟ ನಡೆಸಿ.
04ಕಾಶ್ಮೀರ ವಿರೋಧಿ ಹೋರಾಟ  ದಲ್ಲಿ ಭಾಗಿ ಯಾಗಿ ರುವ ಜಮ್ಮು-ಕಾಶ್ಮೀರ ಪೊಲೀಸ್‌ ಸಿಬಂದಿ ಮನೆಗಳ ಮೇಲೆ ದಾಳಿ ನಡೆಸಿ.
05ಆಡಳಿತದೊಂದಿಗೆ ಕೈಜೋಡಿಸಿರುವ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರನ್ನು ಗುರಿ ಮಾಡಿ.
06ಆಡಳಿತದೊಂದಿಗೆ ಸಹಭಾಗಿತ್ವ ಹೊಂದಿರುವ ಎಲ್ಲ ಮಾಧ್ಯಮ ಸಂಸ್ಥೆಗಳನ್ನು ಬಹಿಷ್ಕರಿಸಿ.
07ಸರಕಾರಿ ಆಸ್ತಿಪಾಸ್ತಿ, ಅಭಿವೃದ್ಧಿ ಯೋಜನೆಗಳು, ಸೇತುವೆ, ಶಾಲೆ-ಕಾಲೇಜುಗಳು, ಕ್ರೀಡಾ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ

ಟಾಪ್ ನ್ಯೂಸ್

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!-ವಿಡಿಯೋ ವೈರಲ್‌

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.