ಪ್ಯಾರಾಸಿಟಮಾಲ್‌ ಮಾತ್ರೆ ದರ ಶೇ.40 ಏರಿಕೆ

Team Udayavani, Feb 18, 2020, 6:33 AM IST

Coronavirus-01-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೀಜಿಂಗ್‌: ಚೀನದಲ್ಲಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೊನಾ ವೈರಸ್‌ನ ಬಿಸಿ ಭಾರತದ ಔಷಧ ಮಾರುಕಟ್ಟೆಗೂ ತಟ್ಟಿದೆ. ಬಹುತೇಕ ಮಂದಿ ಜ್ವರ ಹಾಗೂ ನೋವು ನಿವಾರಕವಾಗಿ ಬಳಸುವ ಪ್ಯಾರಾಸಿಟಮಾಲ್‌ ಮಾತ್ರೆಯ ದರ ಭಾರತದಲ್ಲಿ ಶೇ. 40ರಷ್ಟು ಏರಿಕೆಯಾಗಿದೆ.

ಬ್ಯಾಕ್ಟೀರಿಯಾದಿಂದ ಬರುವ ಸೋಂಕುಗಳಿಗೆ ಆ್ಯಂಟಿಬಯಾಟಿಕ್‌ ಆಗಿ ಬಳಸಲಾಗುವ ಅಝಿತ್ರೋಮೈಸಿನ್‌ ಮಾತ್ರೆಯ ದರ ಶೇ.70ರಷ್ಟು ಹೆಚ್ಚಳವಾಗಿದೆ ಎಂದು ಝೈಡಸ್‌ ಕ್ಯಾಡಿಲಾ ಮುಖ್ಯಸ್ಥ ಪಂಕಜ್‌ ಆರ್‌. ಪಟೇಲ್‌ ತಿಳಿಸಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಔಷಧಿಗಳ ಪೂರೈಕೆ ಹೆಚ್ಚಿಸದೇ ಇದ್ದರೆ, ಔಷಧಗಳ ತೀವ್ರ ಕೊರತೆ ಎದುರಾಗಲಿದೆ ಎಂದೂ ಅವರು ಹೇಳಿದ್ದಾರೆ. ಕೊರೊನಾದಿಂದಾಗಿ ಚೀನದ ಹಲವು ಕಂಪೆನಿಗಳಲ್ಲಿ ಉತ್ಪಾದನೆ ಸ್ಥಗಿತಗೊಂಡಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.

ಚೀನದ ವುಹಾನ್‌ನ ಬಳಿಕ ಅತಿದೊಡ್ಡ ಕೊರೊನಾ ಸೋಂಕಿತರ ತಾಣವಾಗಿರುವ ಜಪಾನ್‌ನ ಕ್ರೂಸ್‌ ನೌಕೆಯಲ್ಲಿ ಸೋಮವಾರ ಮತ್ತೆ 99 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 454ಕ್ಕೇರಿಕೆಯಾಗಿದೆ. ಈ ನಡುವೆ, ಜಪಾನ್‌ ಸರಕಾರವು ಹಡಗಿನಲ್ಲಿರುವವರಿಗೆ 2 ಸಾವಿರ ಐಫೋನ್‌ಗಳನ್ನು ಉಚಿತವಾಗಿ ವಿತರಿಸಿದೆ. ವೈದ್ಯ ರೊಂದಿಗೆ ಸಂಪರ್ಕ ಸಾಧಿಸಲು, ಅಪಾಯಿಂಟ್‌ಮೆಂಟ್‌ ಬುಕ್‌ ಮಾಡಲು, ಔಷಧಗಳಿಗೆ ಆರ್ಡರ್‌ ಮಾಡಲು ಈ ಐಫೋನ್‌ಗಳನ್ನು ನೀಡಲಾಗಿದೆ. ಕೊರೊನಾ ಸೋಂಕು ತಗುಲಿರುವ ನಾಲ್ವರು ಭಾರತೀಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಇತ್ತೀಚೆಗಷ್ಟೇ ಚೀನದಿಂದ ಭಾರತೀಯರನ್ನು ವಾಪಸ್‌ ಕರೆತಂದ ಏರ್‌ಇಂಡಿಯಾದ ಎಲ್ಲ ಸಿಬಂದಿಗೂ ಪ್ರಧಾನಿ ಮೋದಿ ಅವರ ಸಹಿ ಇರುವ ಶ್ಲಾಘನೆ ಪತ್ರಗಳನ್ನು ವಿತರಿಸಲಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶವೇ ನಿಮ್ಮ ಜತೆಗಿರುತ್ತದೆ ಎಂಬ ಸಂದೇಶವನ್ನು ಜಗತ್ತಿನಾದ್ಯಂತ ಇರುವ ಆನಿವಾಸಿ ಭಾರತೀಯರಿಗೆ ನೀವು ಸಾರಿ ಹೇಳಿದ್ದೀರಿ ಎಂದು ಅದರಲ್ಲಿ ಬರೆಯಲಾಗಿದೆ.

1,770 ಮಂದಿ ಸಾವು: ಚೀನದಲ್ಲಿ ಕೊರೊನಾಗೆ ಈವರೆಗೆ 1,770 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ.ಕಾದಂಬರಿಯಲ್ಲಿ ‘ಕೊರೊನಾ’! 40 ವರ್ಷಗಳ ಹಿಂದೆ ಅಂದರೆ 1981ರಲ್ಲಿ ಡೀನ್‌ ಕೂನ್‌l ಎಂಬವರು ಬರೆದ “ದಿ ಅಯ್ಸ ಆಫ್ ಡಾರ್ಕ್‌ನೆಸ್‌’ ಎಂಬ ಥ್ರಿಲ್ಲರ್‌ ಕಾದಂಬರಿಯಲ್ಲಿ ಕೊರೊನಾ ವೈರಸ್‌ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂಬ ಅಚ್ಚರಿಯ ಅಂಶ ಈಗ ಬೆಳಕಿಗೆ ಬಂದಿದೆ. ಕಾದಂಬರಿಯ ಒಂದು ಪುಟದಲ್ಲಿ “ವುಹಾನ್‌ -400′ ಎಂಬ ವೈರಸ್‌ ಬಗ್ಗೆ ಪ್ರಸ್ತಾಪವಿದೆ. ಅಲ್ಲದೆ, ಇದನ್ನು ಪ್ರಯೋಗಾಲಯದಲ್ಲಿ ಒಂದು ಜೈವಿಕ ಅಸ್ತ್ರವಾಗಿ ಸೃಷ್ಟಿಸಲಾಗಿದೆ ಎಂದೂ ಬರೆಯಲಾಗಿದೆ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.