ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಇಂದು ಪರೀಕ್ಷಾ ಪೇ ಚರ್ಚಾ
Team Udayavani, Jan 27, 2023, 7:55 AM IST
ಹೊಸದಿಲ್ಲಿ: ದೇಶದಲ್ಲಿ ಬೋರ್ಡ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಜ.27ರಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಸಂವಾದ ನಡೆಸುವರು.
ದಿಲ್ಲಿಯ ತಲ್ಕಟೋರಾ ಸ್ಟೇಡಿಯಂನಲ್ಲಿ ಬೆಳಗ್ಗೆ 11ಕ್ಕೆ ಚರ್ಚೆ ಆರಂಭವಾಗಲಿದೆ. ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಪ್ರಧಾನಮಂತ್ರಿ ಕಚೇರಿಯ ಎಲ್ಲ ಜಾಲತಾಣ ಖಾತೆಗಳಲ್ಲೂ ಸಂವಾದದ ನೇರ ಪ್ರಸಾರವಿದ್ದು, education.gov.inನಲ್ಲಿ ಇದರ ಲಿಂಕ್ ಗಳು ಲಭ್ಯವಿರಲಿವೆ.
ಈ ಬಾರಿ 38.8 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಕಳೆದ ಬಾರಿಗಿಂತಲೂ 2 ಪಟ್ಟು ಹೆಚ್ಚು ಎಂಬುದು ವಿಶೇಷ.