ದೇಶದ ಎಲ್ಲ ಸ್ಪರ್ಧಾ ಪರೀಕ್ಷೆಗಳಲ್ಲಿ ಪಾಸ್!
Team Udayavani, Jun 20, 2019, 5:52 AM IST
ನವದೆಹಲಿ: ಅಸಾಧ್ಯವಾದುದನ್ನೂ ಸಾಧಿಸಿ ತೋರಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾಳೆ ಈ ಬಾಲಕಿ. ಗುಜರಾತ್ನ ಸೂರತ್ ಮೂಲದ ಸ್ತುತಿ ಖಂಡ್ವಾಲಾ ದೇಶದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಪಾಸ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ನೀಟ್, ಏಮ್ಸ್ನ ಎಂಬಿಬಿಎಸ್ ಪರೀಕ್ಷೆ, ಜೆಇಇ(ಮೇನ್) ಸೇರಿದಂತೆ ಎಲ್ಲ ಸ್ಮರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ಮಾಡಿರುವುದಲ್ಲದೆ, ಅಮೆರಿಕದ ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಗೆ ಪ್ರವೇಶ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾಳೆ. ವಿಶೇಷವೆಂದರೆ, ನೀಟ್ ಪರೀಕ್ಷೆಯಲ್ಲಿ ಅಖೀಲ ಭಾರತ ಮಟ್ಟದಲ್ಲಿ 71ನೇ ರ್ಯಾಂಕ್ ಪಡೆದಿದ್ದಾಳೆ. ಏಮ್ಸ್ನ ಪರೀಕ್ಷೆಯಲ್ಲೂ 10ನೇ ರ್ಯಾಂಕ್ ಗಳಿಸಿದ್ದಾಳೆ.