ಪತಂಜಲಿ ಸಿಮ್ ಸುಳ್ಳು
Team Udayavani, May 30, 2018, 10:47 AM IST
ಹೊಸದಿಲ್ಲಿ: ಸದ್ಯದಲ್ಲೇ ಪತಂಜಲಿ ಸಿಮ್ ಕಾರ್ಡುಗಳು ಮಾರುಕಟ್ಟೆಗೆ ಲಭ್ಯವಿದೆ ಎಂಬ ಮಾಧ್ಯಮಗಳ ವರದಿಗಳನ್ನು ಪತಂಜಲಿ ಸಂಸ್ಥೆ ಅಲ್ಲಗಳೆದಿದೆ. ಬಿಎಸ್ಸೆನ್ನೆಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ಕೊಂಡು ಪತಂಜಲಿ ಹಾಗೂ ಅದರ ಸಹಯೋಗಿ ಸಂಸ್ಥೆಗಳ ಸಿಬಂದಿಗಾಗಿ ಸಿಮ್ ಕಾರ್ಡ್ ಖರೀದಿಸಲಾಗಿದೆಯಷ್ಟೆ. ದೂರ ಸಂಪರ್ಕ ಕ್ಷೇತ್ರಕ್ಕೆ ಲಗ್ಗೆಯಿಡುವ ಯಾವುದೇ ಇರಾದೆಯಿಲ್ಲ ಎಂದು ಸಂಸ್ಥೆ ಹೇಳಿದೆ.