Patanjali Ads Case: ಬಾಬಾ ರಾಮದೇವ್ ಪ್ರಭಾವಿ ಹೌದು, ಆದರೆ…..: ಸುಪ್ರೀಂ ಕೋರ್ಟ್

Team Udayavani, May 14, 2024, 3:56 PM IST

Patanjali Ads Case: ಬಾಬಾ ರಾಮದೇವ್ ಪ್ರಭಾವಿ ಹೌದು, ಆದರೆ…..: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಯೋಗ ಗುರು ರಾಮದೇವ್ ಅವರು ತುಂಬಾ ಪ್ರಭಾವ ಹೊಂದಿದ್ದು, ಆದರೆ ಅವರು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪತಂಜಲಿ ಆಯುರ್ವೇದ ಮತ್ತು ಅದರ ಸ್ಥಾಪಕರಾದ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ವಿರುದ್ಧದ ದಾರಿತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಪೀಠವು ಈ ಅಭಿಪ್ರಾಯಪಟ್ಟಿದೆ.

ಇಂದಿನ ವಿಚಾರಣೆಯ ಆರಂಭದಲ್ಲಿ, ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠಕ್ಕೆ ಪತಂಜಲಿ ಸಂಸ್ಥೆಯು ತನ್ನ ಜಾಹೀರಾತುಗಳು ಇನ್ನೂ ಚಾಲನೆಯಲ್ಲಿರುವ ಟಿವಿ ಚಾನೆಲ್‌ಗಳಿಗೆ ಪತ್ರ ಬರೆದಿದೆ, ಪ್ರಶ್ನೆಯಲ್ಲಿರುವ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆ ಎಂದು ಹೇಳಿದರು.

ಈ ಉತ್ಪನ್ನಗಳ ದಾಸ್ತಾನುಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಪತಂಜಲಿಯನ್ನು ಕೇಳಿದೆ. ಸದ್ಯಕ್ಕೆ ನ್ಯಾಯಾಲಯಕ್ಕೆ ಹಾಜರಾಗುವುದನ್ನು ಕೈ ಬಿಡುವಂತೆ ರಾಮದೇವ್ ಮತ್ತು ಬಾಲಕೃಷ್ಣ ಅವರ ಮನವಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ.

“ರಾಮದೇವ್ ಅವರು ತುಂಬಾ ಪ್ರಭಾವ ಹೊಂದಿದ್ದಾರೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಪೀಠ ಹೇಳಿತು. ಸಾಲಿಟರಿ ಜನರಲ್ ತುಷಾರ್ ಮೆಹ್ತಾ ಅವರು, “ರಾಮದೇವ್ ಅವರು ಯೋಗ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ” ಎಂದರು. ಆಗ ನ್ಯಾ.ಹಿಮಾ ಕೊಹ್ಲಿ ಅವರು, ‘ಅವರು ಯೋಗ ಕ್ಷೇತ್ರಕ್ಕೆ ಏನು ಮಾಡಿದ್ದರೆ ಅದು ಒಳ್ಳೆಯದು ; ಆದರೆ ಪತಂಜಲಿ ಉತ್ಪನ್ನಗಳ ವಿಚಾರ ಬೇರೆಯದು” ಎಂದರು.

ರಾಮದೇವ್ ಮತ್ತು ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9 ರಂದು ನಡೆಯಲಿದೆ.

ಟಾಪ್ ನ್ಯೂಸ್

Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ  

Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ  

Amit Shah 2

Congress; ಸೋತ ನಂತರವೂ ದುರಹಂಕಾರ :ರಾಹುಲ್ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ

SIddu-Savadhi

Government Doctor: ಆಸ್ಪತ್ರೆಯಲ್ಲಿ ರಾಜಕೀಯ ಮಾಡುವುದಾದ್ರೆ ಸರ್ಕಾರಿ ನೌಕರಿ ತ್ಯಜಿಸಿ

1-sadsdas

Kanwar Yatra; ನಟ ಸೋನು ಸೂದ್ ಗೆ ‘ಹಲಾಲ್’ ವಿಚಾರ ಪ್ರಸ್ತಾಪಿಸಿ ಕಂಗನಾ ತಿರುಗೇಟು

1-trrr

Shiruru hill collapse; ನೆರವು ನೀಡಲು ತೆರಳಿದ್ದ ವ್ಯಕ್ತಿ ನಾಪತ್ತೆ: ಹಲವು ಸಂಶಯ

1-reee

Sindagi;ತಹಶೀಲ್ದಾರ್ ಕಚೇರಿಯಲ್ಲಿ ವಿಷದ ಬಾಟಲಿ ಹಿಡಿದು ಮಹಿಳೆ ಪ್ರತಿಭಟನೆ

1-AAP-1

AAP; ಹರಿಯಾಣದಲ್ಲಿ ಪಂಚ ಗ್ಯಾರಂಟಿ ಘೋಷಣೆ: ಸುನೀತಾ ಕೇಜ್ರಿವಾಲ್ ಪ್ರಚಾರ ಸಾರಥ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah 2

Congress; ಸೋತ ನಂತರವೂ ದುರಹಂಕಾರ :ರಾಹುಲ್ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ

1-sadsdas

Kanwar Yatra; ನಟ ಸೋನು ಸೂದ್ ಗೆ ‘ಹಲಾಲ್’ ವಿಚಾರ ಪ್ರಸ್ತಾಪಿಸಿ ಕಂಗನಾ ತಿರುಗೇಟು

1-AAP-1

AAP; ಹರಿಯಾಣದಲ್ಲಿ ಪಂಚ ಗ್ಯಾರಂಟಿ ಘೋಷಣೆ: ಸುನೀತಾ ಕೇಜ್ರಿವಾಲ್ ಪ್ರಚಾರ ಸಾರಥ್ಯ

ARMY (2)

Jammu ಪ್ರಾಂತ್ಯದಲ್ಲಿ 50ಕ್ಕೂ ಹೆಚ್ಚು ಪಾಕ್ ಉಗ್ರರು!: ಬೇಟೆಗಿಳಿದ 500 ಪ್ಯಾರಾ ಕಮಾಂಡೋಗಳು

Ammonia Gas: ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ… 30 ಮಹಿಳಾ ಕಾರ್ಮಿಕರು ಅಸ್ವಸ್ಥ

Ammonia Gas: ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ… 30 ಮಹಿಳಾ ಕಾರ್ಮಿಕರು ಅಸ್ವಸ್ಥ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ  

Stray dog: ಉಡುಪಿ ನಗರದಲ್ಲಿ ಬೀದಿ ನಾಯಿಯ ಕ(ಹು)ಚ್ಚಾಟ  

Amit Shah 2

Congress; ಸೋತ ನಂತರವೂ ದುರಹಂಕಾರ :ರಾಹುಲ್ ವಿರುದ್ಧ ಅಮಿತ್ ಶಾ ತೀವ್ರ ವಾಗ್ದಾಳಿ

Kundapura: ಚಲಿಸುತ್ತಿದ್ದಾಗಲೇ ಕಳಚಿದ ಬಸ್ಸಿನ ಟಯರ್‌

Kundapura: ಚಲಿಸುತ್ತಿದ್ದಾಗಲೇ ಕಳಚಿದ ಬಸ್ಸಿನ ಟಯರ್‌

SIddu-Savadhi

Government Doctor: ಆಸ್ಪತ್ರೆಯಲ್ಲಿ ರಾಜಕೀಯ ಮಾಡುವುದಾದ್ರೆ ಸರ್ಕಾರಿ ನೌಕರಿ ತ್ಯಜಿಸಿ

Mangalore: ಗಾಂಜಾ ಸೇವಿಸಿ ಗಲಾಟೆ; ಯುವತಿಯ ಬಂಧನ

Mangalore: ಗಾಂಜಾ ಸೇವಿಸಿ ಗಲಾಟೆ; ಯುವತಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.