ಕೇಂದ್ರ ಸರಕಾರಿ ನೌಕರರ ವೇತನ ಹೆಚ್ಚಳ?
Team Udayavani, Oct 4, 2019, 5:58 AM IST
ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಈ ಬಾರಿಯ ದಸರೆಗೂ ಮುನ್ನವೇ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ಕೇಂದ್ರ ನೌಕರರ ಮೂಲ ವೇತನ 18,000 ರೂ.ಗಳಷ್ಟಿದ್ದು ಅದನ್ನು ಹೆಚ್ಚಿಸಬೇಕೆಂದು ನೌಕರರು ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಮೂಲ ವೇತನ ಹೆಚ್ಚಳದ ಜತೆಗೆ, ತುಟ್ಟಿ ಭತ್ತೆಯಲ್ಲೂ ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ.