ಅಯೋಧ್ಯೆ ಭೂ ಖರೀದಿ : 2 ದಿನಗಳಲ್ಲಿ ವಸ್ತುಸ್ಥಿತಿ ವಿವರಣೆ : ಪೇಜಾವರ ಶ್ರೀ
Team Udayavani, Jun 30, 2021, 6:08 PM IST
ರಾಮ ಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹೊರ ಬರುತ್ತಿರುವ ಪೇಜಾವರ ಶ್ರೀಗಳು
ಅಯೋಧ್ಯೆ : ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದ ಭೂಮಿಯ ಕುರಿತು ಇನ್ನೆರಡು ದಿನಗಳಲ್ಲಿ ಟ್ರಸ್ಟ್ ವತಿಯಿಂದ ಬಹಿರಂಗ ಪಡಿಸಲಾಗುವುದು ಎಂದು ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ತಿಳಿಸಿದ್ದಾರೆ.
ಇಂದು(ಬುಧವಾರ, ಜೂನ್ 30) ಅಯೋಧ್ಯೆಗೆ ಭೇಟಿ ನೀಡಿರುವ ಅವರು, ಟ್ರಸ್ಟ್ ಪದಾಧಿಕಾರಿಗಳ ಜತೆ ಸಭೆ ನಡೆಸಿದರು. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಜಿ ಶ್ರೀ ಗೋವಿಂದ ಗಿರಿ ಸರಸ್ವತಿ, ಟ್ರಸ್ಟಿಗಳಾದ ಅನಿಲ್ ಮಿಶ್ರಾ, ಕಾಮೇಶ್ವರ್ ಮೊದಲಾದವರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಪ.ಬಂಗಾಳ ಶಿಕ್ಷಣ ಕ್ರಾಂತಿ :10ಲಕ್ಷ ರೂ.ಗಳ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಯೋಜನೆ
ಟ್ರಸ್ಟಿಗಳು ಎರಡು ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಇದ್ದು, ಭೂ ಖರೀದಿ ಕುರಿತಾಗಿ ದಾಖಲೆ ಪರಿಶೀಲನೆ ನಡೆಸಲಿದ್ದಾರೆ. ಒಂದು ಹಂತದ ಸಭೆ ಇಂದು ನಡೆದಿದ್ದು, ಎಲ್ಲಾ ಆಯಾಮಗಳಲ್ಲಿ ವಿಚಾರ ನಡೆಸಿ ವಿಚಾರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇನ್ನು, ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿಯನ್ನು ಹದ ಮಾಡುವ ಕೆಲಸ ನಡೆಯುತ್ತಿದೆ. ಸಪ್ಟೆಂಬರ್ ತನಕ ಈ ಕೆಲಸ ನಡಯಿಲಿದೆ. ಸುಮಾರು 3200 ಕೋಟಿ ರೂ ದೇಣಿಗೆ ಈವರೆಗೆ ಬಂದಿದ್ದು, ಇನ್ನೂ ಕೂಡ ಕೆಲವರು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ರಾಮ ಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ : ಅಧಿಕ ಲಾಭಾಂಶ ಕಾಯ್ದಿರಿಸಿದ ಪರಿಣಾಮ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 67 ಅಂಕ ಕುಸಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಭಿವೃದ್ಧಿ ವೇಳೆ ಪರಿಸರಕ್ಕೆ ಧಕ್ಕೆ ಮಾಡುವುದಿಲ್ಲ: ಗೋವಾ ಸಿಎಂ ಸಾವಂತ್
ಮುಂಬೈ-ಪುಣೆ ಎಕ್ಸ್ಪ್ರೆಸ್ವೇ: ಬಸ್ಗೆ ಕಾರು ಢಿಕ್ಕಿ; ಎನ್ಸಿಪಿ ಶಾಸಕ ಸಂಗ್ರಾಮ್ ಪಾರು
ಅಮರನಾಥ ಯಾತ್ರೆ ಭದ್ರತಾ ವ್ಯವಸ್ಥೆ: 2 ಮಹತ್ವದ ಸಭೆ ನಡೆಸಿದ ಅಮಿತ್ ಶಾ
2ಜಿ ಯುಗ ಭ್ರಷ್ಟಾಚಾರದ ಸಂಕೇತವಾಗಿತ್ತು, ಈಗ ಪಾರದರ್ಶಕತೆ ಇದೆ: ಪ್ರಧಾನಿ
ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ
MUST WATCH
ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಹೊಸ ಸೇರ್ಪಡೆ
ಲಾರಿ ಪಲ್ಟಿ :ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 15ಕ್ಕೂ ಅಧಿಕ ಎಮ್ಮೆಗಳು ಸಾವು
ಕುಷ್ಟಗಿ: ಕಾಂಗ್ರೆಸ್ ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹಕ್ಕೆ ಹೈಕೋರ್ಟ್ ತಡೆ
ರಬಕವಿ-ಬನಹಟ್ಟಿ: ಬ್ಯಾಂಕ್ ಆಫ್ ಬರೋಡಾಗೆ ಮುತ್ತಿಗೆ ಹಾಕಿದ ರೈತರು
ಕಾಸರಗೋಡು: ಹೆಬ್ಬಾವು ಮರಿಗಳ ಜನನಕ್ಕಾಗಿ ಹೆದ್ದಾರಿ ಕಾಮಗಾರಿಯೇ ಸ್ಥಗಿತ
ಇಂದು ಭಗತ್ ಸಿಂಗ್, ನಾಳೆ ಮಹಾತ್ಮಾ ಗಾಂಧಿ ಪಠ್ಯದಿಂದ ತೆಗೆಯಬಹುದು: ಡಿ.ಕೆ.ಶಿವಕುಮಾರ್