ರಾಜಸ್ಥಾನದಲ್ಲಿ ಪೆಟ್ರೋಲ್‌, ಡೀಸಿಲ್‌ ಬೆಲೆ 5 ರೂ. ಏರಿಕೆ

Team Udayavani, Jul 6, 2019, 3:47 PM IST

ಜೈಪುರ : ಕೇಂದ್ರ ಸರಕಾರ ನಿನ್ನೆ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸಿಲ್‌ ಹಾಗೂ ರಸ್ತೆ ಸೆಸ್‌ ಏರಿಸಿರುವುದನ್ನು ಅನುಸರಿಸಿ ರಾಜಸ್ಥಾನದಲ್ಲಿ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆ ಲೀಟರಿಗೆ 5 ರೂ. ಏರಿದೆ. ರಾಜ್ಯ ಸರಕಾರದ ಸ್ಥಳೀಯ ಶುಲ್ಕ ಕೂಡ ಇದರಲ್ಲಿ ಸೇರಿದೆ.

ನಿನ್ನೆ ಶುಕ್ರವಾರ ಮಧ್ಯರಾತ್ರಿಯಿಂದಲೇ ರಾಜಸ್ಥಾನದಲ್ಲಿ ಪೆಟ್ರೋಲ್‌, ಡೀಸಿಲ್‌ ಬೆಲೆ ಲೀಟರ್‌ಗೆ 5 ರೂ. ಗಳ ಏರಿಕೆ ಜಾರಿಗೆ ಬಂದಿದೆ.

ರಾಜಸ್ಥಾನದಲ್ಲಿ ಈ ಮೊದಲು ಪೆಟ್ರೋಲ್‌ ಬೆಲೆ ಲೀಟರಿಗೆ 71.15 ರೂ. ಇತ್ತು. ಅದೀಗ 75.77 ಆಗಿದೆ (ಜೈಪುರದಲ್ಲಿ) ಎಂದು ರಾಜಸ್ಥಾನ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್‌ ಅಧ್ಯಕ್ಷ ಸುನೀತ್‌ ಬಗಾಯ್‌ ತಿಳಿಸಿದ್ದಾರೆ.

ಇದೇ ರೀತಿ ಡೀಸಿಲ್‌ ಬೆಲೆ ಕೂಡ ಜೈಪುರದಲ್ಲಿ ಲೀಟರಿಗೆ 4.59 ರೂ ಏರಿದ್ದು ಅದು 66.65 ರೂ.ಗಳಿಂದ 71.24 ರೂ.ಗಳಿಗೆ ಜಂಪ್‌ ಆಗಿದೆ ಎಂದವರು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ