ಗುರುತ್ವ ಅನ್ವೇಷಕ ಐನ್ ಸ್ಟೀನ್ ಎಂದ ಪಿಯೂಷ್ ಗೋಯಲ್ : ನೆಟ್ಟಿಗರ ಟ್ರೋಲ್!

Team Udayavani, Sep 12, 2019, 10:41 PM IST

ನವದೆಹಲಿ: ಯಡವಟ್ಟು ಹೇಳಿಕೆಯೊಂದನ್ನು ನೀಡಿರುವ ರೈಲ್ವೆ ಸಚಿವ ಪಿಯೂಶ್‌ ಗೋಯೆಲ್‌, ಟ್ವಿಟರ್‌ನಲ್ಲಿ ಯುವಜನತೆಯ ಲೇವಡಿಗೆ ಗುರಿಯಾಗಿದ್ದಾರೆ.

ಗುರುವಾರ ನವದೆಹಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ, ದೇಶದ ಆರ್ಥಿಕತೆಯು 5 ಲಕ್ಷ ಕೋಟಿ ಡಾಲರ್‌ ಮಟ್ಟಕ್ಕೆ ಹೇಗೆ ಮುಟ್ಟುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೋಯೆಲ್‌, “ಐದು ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯ ಬಗ್ಗೆ ಟಿವಿಯಲ್ಲಿ ಬರುವ ಲೆಕ್ಕಾಚಾರಗಳನ್ನು ಯಾರೂ ನಂಬಬಾರದು. ಲೆಕ್ಕಾಚಾರಗಳೇ ಬೇರೆ, ವಾಸ್ತವವೇ ಬೇರೆ. ಗಣಿತದ ಲೆಕ್ಕಾಚಾರದಿಂದ ಐನ್‌ಸ್ಟೀನ್‌, ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿಯಲಿಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಟ್ವೀಟಿಗರು, ಗೋಯೆಲ್‌ ಅವರ ಹೇಳಿಕೆಯನ್ನು ಮೀಮ್‌ಗಳ ಮೂಲಕ ಟೀಕೆ ಮಾಡಿದ್ದಾರೆ. ಕೆಲವರು, “ಐನ್‌ಸ್ಟೀನ್‌ ಗುರುತ್ವಾಕರ್ಷಣ ಶಕ್ತಿ ಕಂಡು ಹಿಡಿದ ಎಂದಾದರೆ ನ್ಯೂಟನ್‌ ಏನು ಮಾಡಿದ’ ಎಂದು ಕೇಳಿದರೆ, ಮತ್ತಷ್ಟು ಜನ, “ನ್ಯೂಟನ್‌ ಗುರುತ್ವಾಕರ್ಷಣ ಶಕ್ತಿ ಕಂಡುಹಿಡಿದದ್ದು ಅಸಂಖ್ಯಾತ ಲೆಕ್ಕದ ಆಧಾರದಲ್ಲಿ’ ಎಂದು ಹೇಳಿ ಅದಕ್ಕೆ ಪೂರಕವಾದ ಪುಸ್ತಕಗಳ ಫೋಟೋಗಳನ್ನು ಸಾಕ್ಷ್ಯ ರೂಪದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ