Wayanad Tragedy: ವಿಶೇಷ ವಿಮಾನದ ಮೂಲಕ ಕೇರಳಕ್ಕೆ ಬಂದಿಳಿದ ಪ್ರಧಾನಿ ಮೋದಿ…
Team Udayavani, Aug 10, 2024, 12:14 PM IST
ಕಲ್ಪಟ್ಟಾ: ವಯನಾಡು ದುರಂತ ಪ್ರದೇಶಕ್ಕೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಆಗಮಿಸಿದ್ದಾರೆ.
ಇಂದು (ಆಗಸ್ಟ್ 10) ಬೆಳಗ್ಗೆ 11 ಗಂಟೆಗೆ ಮೋದಿ ಅವರ ವಿಶೇಷ ವಿಮಾನ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದು ಇಳಿಯಿತು. ಈ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪ್ರಧಾನಿಯವರನ್ನು ಬರಮಾಡಿಕೊಂಡರು. ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಕೂಡ ಮೋದಿ ಜೊತೆಗಿದ್ದರು.
ಬಳಿಕ ಭೂಕುಸಿತ ಸಂಭವಿಸಿದ ವಯನಾಡಿನ ಮುಂಡಕೈ-ಚುರಲ್ಮಲಾ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಸ್ಮಲಿಮಟ್ಟಂ, ಮುಂಡಕೈ ಮತ್ತು ಚುರಲ್ಮಲಾ ವೈಮಾನಿಕ ಸಮೀಕ್ಷೆಯ ನಂತರ ಪ್ರಧಾನಮಂತ್ರಿಯವರು ಚುರಲ್ಮಲಾ ದುರಂತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತಿತರರು ಪ್ರಧಾನಿ ಜೊತೆಯಲ್ಲಿದ್ದರು.
ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ ನಂತರ, ಕಲ್ಪಟ್ಟಾ ಎಸ್‌ಕೆಎಂಜೆ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿಯಲಿದ್ದು ಇಲ್ಲಿಂದ ರಸ್ತೆಯ ಮಾರ್ಗ ಮೂಲಕ ಚುರಲ್ಮಲಾಕ್ಕೆ ತೆರಳಲಿದ್ದಾರೆ ಅಲ್ಲಿ ಶಿಬಿರದಲ್ಲಿರುವವರನ್ನು ಮೋದಿ ಖುದ್ದಾಗಿ ಭೇಟಿ ಮಾಡಿ ಮಾತನಾಡಲಿದ್ದಾರೆ. ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರದಿಂದ 2000 ಕೋಟಿ ವಿಶೇಷ ಪ್ಯಾಕೇಜ್ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಶಾಸಕ ಕೆ.ಕೆ.ಶೈಲಜಾ ಟೀಚರ್, ಮುಖ್ಯ ಕಾರ್ಯದರ್ಶಿ ಡಾ. ವಿ.ವೇಣು, ಡಿಜಿಪಿ ಶೇಖ್ ದರ್ವೇಶ್ ಸಾಹಿಬ್, ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್, ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್, ಎಪಿ ಅಬ್ದುಲ್ಲಕುಟ್ಟಿ, ಸಿಕೆ ಪದ್ಮನಾಭನ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Viral Video: ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಂಚನೆ; ಕಾರ್ಯಕರ್ತೆ, ಸಹಾಯಕಿ ಅಮಾನತು
Kerala: Prime Minister Narendra Modi arrives at Kannur Airport; received by Governor Arif Mohammed Khan and CM Pinarayi Vijayan
PM Modi will visit Wayanad to review relief and rehabilitation efforts
(Pics source: CMO) pic.twitter.com/sfbP5lm0HU
— ANI (@ANI) August 10, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Rally: 20 ಸ್ಥಾನ ಹೆಚ್ಚು ಸಿಗುತ್ತಿದ್ದರೆ ಬಿಜೆಪಿಗರು ಜೈಲು ಸೇರ್ತಿದ್ರು: ಖರ್ಗೆ
Rahul Gandhi: ಸಿಕ್ಖ್ ವಿರೋಧಿ ಹೇಳಿಕೆ; ಬಿಜೆಪಿಯಿಂದ ರಾಹುಲ್ ನಿವಾಸಕ್ಕೆ ಮುತ್ತಿಗೆ ಯತ್ನ
Jammu: ಕಥುವಾ ಗಡಿಯಲ್ಲಿ ಎನ್‌ಕೌಂಟರ್… 2 ಭಯೋತ್ಪಾದಕರ ಹತ್ಯೆ, ಶೋಧ ಕಾರ್ಯ ಮುಂದುವರಿಕೆ
ಅಸ್ಪ್ರಶ್ಯತೆ ತೊಲಗಿಸಲು ಹೋರಾಡಿದ ಸಾವರ್ಕರ್ ಬಗ್ಗೆ ಅಭಿಮಾನವಿದೆ: ಮಾಜಿ ಸಿಎಂ ಶಿಂಧೆ
Liquor Policy Case: ಕೇಜ್ರಿವಾಲ್ ನ್ಯಾಯಾಂಗ ಬಂಧನ ಸೆಪ್ಟೆಂಬರ್ 25 ರವರೆಗೆ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Highway Department: ಚಾರ್ಮಾಡಿ ಘಾಟಿ: ತಡೆಗೋಡೆ ದುರಸ್ತಿಗೆ ಕ್ರಮ
Mangaluru: ತಿಗಳಾರಿ ಲಿಪಿಗೆ ಯುನಿಕೋಡ್ ಅನುಮೋದನೆ: ತಾರಾನಾಥ ಗಟ್ಟಿ
Film Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ’ ನಾಳೆ ತೆರೆಗೆ
Rahul Gandhi ಆಕಸ್ಮಿಕವಾಗಿ ಸಿಕ್ಕಿದರೆ ಓಡಿಹೋಗಲು ಆಗುತ್ತದೆಯೇ: ಪರಂ
Film Release: ಸೆ.13ರಂದು ರಾಜ್ಯಾದ್ಯಂತ “ಕಲ್ಜಿಗ’ ಕನ್ನಡ ಚಲನಚಿತ್ರ ತೆರೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.