ಆಡ್ವಾಣಿ, ಜೋಷಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ

Team Udayavani, May 24, 2019, 11:50 AM IST

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಮತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಶುಕ್ರವಾರ ಪಕ್ಷದ ಹಿರಿಯ ನಾಯಕರಾದ ಎಲ್‌ ಕೆ ಆಡ್ವಾಣಿ ಮತ್ತು ಮರಳೀ ಮನೋಹರ್‌ ಜೋಷಿ ಅವರನ್ನು ಭೇಟಿಯಾದರು.

ಮೋದಿ ತಮ್ಮ ಟ್ವೀಟ್‌ ನಲ್ಲಿ ಹೀಗೆ ಬರೆದಿದ್ದಾರೆ : ಗೌರವಾನ್ವಿತ ಆಡ್ವಾಣಿ ಜೀ ಅವರನ್ನು ಇಂದು ಭೇಟಿಯಾದೆ. ಬಿಜೆಪಿಯ ಇಂದಿನ ಯಶಸ್ಸಿಗೆ ಕಾರಣೀಭೂತರಾಗಿರುವ ಆಡ್ವಾಣಿ ಜೀ ಪಕ್ಷವನ್ನು ಕಟ್ಟಿ ಬಲಪಡಿಸಲು ಹಲವು ದಶಕಗಳ ಕಾಲ ದುಡಿದಿದ್ದಾರೆ ಮತ್ತು ದೇಶದ ಜನರಿಗೆ ಸೈದ್ಧಾಂತಿಕ ಚಿಂತನೆಗಳನ್ನು ಕಾಲಕಾಲಕ್ಕೆ ನೀಡಿದ್ದಾರೆ’.

ಮೋದಿ ಅವರು ಆಡ್ವಾಣಿ ಅವರನ್ನು ಭೇಟಿಯಾದ ಸಂದರ್ಭದ ಫೋಟೋವನ್ನು ಕೂಡ ಟ್ಟಿಟರ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ಮೋದಿ ಮತ್ತು ಅಮಿತ್‌ ಶಾ ಅನಂತರ ಮುರಳೀ ಮನೋಹರ್‌ ಜೋಷಿ ಅವರನ್ನು ಕೂಡ ಭೇಟಿಯಾದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ