ಪುಲ್ವಾಮಾ ದಾಳಿಯ 24 ತಾಸೊಳಗೆ ಯುದ್ಧಕ್ಕೆ ಅನುಮತಿ ನೀಡಿದ್ದ PM ಮೋದಿ
Team Udayavani, Feb 26, 2019, 6:33 AM IST
ಹೊಸದಿಲ್ಲಿ : 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಫೆ.14ರಂದು ಪುಲ್ವಾಮಾ ಉಗ್ರ ದಾಳಿ ನಡೆದ 24 ತಾಸಿನ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಗೆ ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ ಪಾಕಿಸ್ಥಾನದ ಇತರೆಡೆಗಳಲ್ಲಿನ ಉಗ್ರ ಶಿಬಿರಗಳನ್ನು ಧ್ವಂಸಗೈಯುವುದಕ್ಕೆ ಅನುಮತಿ ನೀಡಿದ್ದರು ಎಂದು ವರದಿಗಳು ಇಂದು ನೆನಪಿಸಿಕೊಟ್ಟಿವೆ.
ಆ ಪ್ರಕಾರ ಗಡಿ ನಿಯಂತ್ರಣ ರೇಖೆಯಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ನಾಶ ಮಾಡುವ ಕಾರ್ಯಾಚರಣೆಯನ್ನು ಭಾರತೀಯ ಸೇನೆ 24 ತಾಸೊಳಗೆ ರೂಪಿಸಿತ್ತು.
ಆ ಪ್ರಕಾರ ನಿನ್ನೆ ಸೋಮವಾರ ಮಧ್ಯರಾತ್ರಿ ಬಳಿಕ ಭಾರತೀಯ ವಾಯು ಪಡೆ ಪಾಕಿಸ್ಥಾನದ ಎಲ್ಓಸಿಯನ್ನು ದಾಟಿ ಬಾಲಕೋಟ್ ನಲ್ಲಿನ ಜೈಶ್ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ 1,000 ಕಿಲೋ ಬಾಂಬುಗಳನ್ನು ಹಾಕಿ 300ಕ್ಕೂ ಅಧಿಕ ಜೈಶ್ ಉಗ್ರರು, ಅವರ ತರಬೇತುದಾರರು, ಕಮಾಂಡರ್ಗಳು ಮುಂತಾಗಿ ದೊಡ್ಡ ಸಂಖ್ಯೆಯಲ್ಲಿ ಉಗ್ರರನ್ನು ಬಲಿಪಡೆಯಿತು.
1971ರಲ್ಲಿ ಪಾಕ್ ವಿರುದ್ಧ ನಡೆದ ಯುದ್ಧದ ಬಳಿಕದಲ್ಲಿ ಭಾರತೀಯ ಸೇನೆ ಇದೇ ಮೊದಲ ಬಾರಿಗೆ ಎಲ್ಓಸಿ ದಾಟಿ ಬಾಂಬ್ ದಾಳಿ ನಡೆಸಿರುವುದು ಗಮನಾರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು