ಚೀನ ಅಧ್ಯಕ್ಷರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ ಯಾವುದು ಗೊತ್ತಾ ? ಏನಿದರ ವಿಶೇಷತೆ ?
Team Udayavani, Oct 12, 2019, 9:25 AM IST
ಮಹಾಬಲಿಪುರಂ : ಭಾರತ ಮತ್ತು ಚೀನ ದೇಶದ ಮಹಾ ನಾಯಕರಾದ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಅವರ ಸ್ನೇಹ ಸಮ್ಮಿಲನಕ್ಕೆ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಗಿದೆ. ಈ ವೇಳೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ಚಿನ್ನ ಲೇಪಿತ ಅಣ್ಣಂ ದೀಪ ಮತ್ತು ತಾಂಜಾವೂರ್ ಶೈಲಿಯಲ್ಲಿರುವ ನೃತ್ಯ ಸರಸ್ವತಿಯ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಣ್ಣಂ ದೀಪ 6 ಅಡಿ ಎತ್ತರವಿದ್ದು ಇದನ್ನು ನಾಚಿಯಾರ್ ಕೊಯಿಲ್ ಸಮುದಾಯದ ಎಂಟು ಜನರ ತಂಡ ಕಂಚಿನಿಂದ ತಯಾರಿಸಿದೆ. ಇದನ್ನು ಸಿದ್ದಪಡಿಸಲು 12 ದಿನಗಳು ಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಇದು 108 ಕೆ.ಜಿ. ತೂಕವಿದೆ. ತಮಿಳುನಾಡು ಕರಕುಶಲ ಅಭಿವೃದ್ಧಿ ನಿಗಮವು ಈ ದೀಪ ಮತ್ತು ಕಲಾಕೃತಿಯನ್ನು ಜಿನ್ಪಿಂಗ್ಗೆ ಉಡುಗೊರೆಯಾಗಿ ತಂದಿತ್ತು.
ನೃತ್ಯ ಸರಸ್ವತಿದೇವಿ ಕಲಾಕೃತಿಯನ್ನು ಕಲಾವಿದ ಬಿ.ಲೋಕನಾಥ್ ಬಿಡಿಸಿದ್ದಾರೆ. ಇದು 3 ಅಡಿ ಎತ್ತರ ಮತ್ತು 4 ಅಡಿ ಅಗಲವನ್ನು ಹೊಂದಿದ್ದು 40 ಕೆ.ಜಿ. ತೂಕವಿದೆ. ಈ ಕಲಾಕೃತಿ 45 ದಿನದಲ್ಲಿ ತಯಾರಾಗಿದೆ. ನೃತ್ಯ ಮಾಡುವ ಸರಸ್ವತಿಯನ್ನು ಜ್ಞಾನ, ಸಂಗೀತ, ಕಲೆ, ಪ್ರಕೃತಿ ಮತ್ತು ಬುದ್ಧಿವಂತಿಕೆಯ ಸಾಕಾರವೆಂದು ಪರಿಗಣಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ