ಸಿನೆಮಾ ಸಮಾಜದ ಪ್ರತಿಬಿಂಬ: Indian Cinema Museum ಉದ್ಘಾಟಿಸಿದ ಮೋದಿ

Team Udayavani, Jan 19, 2019, 1:17 PM IST

ಮುಂಬಯಿ : ‘ಸಿನೆಮಾ ನಮ್ಮ ಸಮಾಜದ ನೈಜ ಪ್ರತಿಬಿಂಬ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿನ ಫಿಲ್ಮ್ಸ್‌ ಡಿವಿಜನ್‌ ಕ್ಯಾಂಪಸ್‌ನಲ್ಲಿ 140.61 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನ್ಯಾಶನಲ್‌ ಮ್ಯೂಸಿಯಂ ಆಫ್ ಇಂಡಿಯನ್‌ ಸಿನೆಮಾ (ಎನ್‌ಎಂಐಸಿ) ಉದ್ಘಾಟಿಸಿದರು. 

‘ನಮ್ಮ ಸಿನೆಮಾಗಳು ವಿಶ್ವಕ್ಕೆ ಭಾರತೀಯತೆಯನ್ನು ತೋರಿಸುತ್ತವೆ. ಅವು ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿವೆ’ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು. 

‘ಭಾರತೀಯ ಸಿನೆಮಾಗಳು ಜಗದಗಲ ತಲುಪಿವೆ; ವಿಶ್ವದ ಮೂಲೆ ಮೂಲೆಯಲ್ಲೂ ಅದು ದರ್ಶಕರನ್ನು ಹೊಂದಿದೆ’ ಎಂದು ಪ್ರಧಾನಿ ಮೋದಿ ಹೇಳಿದರು. 

‘ಭಾರತ ಬದಲಾಗುತ್ತಿರುವುದಕ್ಕೆ ನಮ್ಮ ಸಿನೆಮಾಗಳೇ ಸಾಕ್ಷಿ; ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಭಾರತೀಯ ಸಿನೆಮಾಗಳು ಪರಿಹಾರವನ್ನು ಹುಡುಕುತ್ತವೆ. 10 ಲಕ್ಷ ಸಮಸ್ಯೆಗಳಿದ್ದರೆ ನೂರು ಕೋಟಿ ಪರಿಹಾರಗಳು ಇರುತ್ತವೆ’ ಎಂದು ಪ್ರಧಾನಿ ಮೋದಿ ಹೇಳಿದರು. 

‘ನಮ್ಮಲ್ಲಿ ಸಿನೆಮಾ ಜೋಶ್‌ ಹೇಗಿದೆ ?’ ಎಂಬ ಪ್ರಶ್ನೆಯೊಂದಿಗೆ ಮೋದಿ ತಮ್ಮ ಭಾಷಣ ಆರಂಭಿಸಿದಾಗ ನೆರೆದಿದ್ದ ಜನಸಮೂಹ ಕಿವಿಗಡ ಚಿಕ್ಕುವ ಕರತಾಡನೊಂದಿಗೆ ಜೋಶ್‌ ಪ್ರಕಟಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ