ಮರ್ಸಿಡಿಸ್‌, ಹಾಲಿಗೆ ಏಕ ತೆರಿಗೆ ಸಾಧ್ಯವೇ? ನರೇಂದ್ರ ಮೋದಿ

Team Udayavani, Jul 2, 2018, 11:21 AM IST

modi.jpg

ನವದೆಹಲಿ: ಜಿಎಸ್‌ಟಿ ದೇಶದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿದೆ. ಇಂಥ ಸುಧಾರಣಾ ಕ್ರಮ ಕೈಗೊಳ್ಳುವ ವೇಳೆ ಕೆಲವೊಂದು ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳನ್ನು ಆಯಾಯ ಕಾಲಕ್ಕೆ ಬಗೆಹರಿಸಲಾಗಿದೆ.’ ಇದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವರಾಜ್‌ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು. ಸಂದರ್ಶನದ
ಪೂರ್ಣಪಾಠ ಇಲ್ಲಿದೆ.

* ಒಂದು ಉತ್ತಮ ಮತ್ತು ಸರಳ ತೆರಿಗೆ ಎಂಬ ಭರವಸೆಯೊಂದಿಗೆ ವರ್ಷದ ಹಿಂದೆ ನೀವೇ ಜಿಎಸ್ಟಿ ಪದ್ಧತಿ ಜಾರಿಗೆ ತಂದಿದ್ದಿರಿ. ವಿಮರ್ಶಕರು ಇದು ತೀರಾ ಕ್ಲಿಷ್ಟಕರ ವಾಗಿದೆ ಎನ್ನುತ್ತಿದ್ದಾರೆ. ಇದು ಒಂದೇ ಹಂತದ ತೆರಿಗೆ ರೂಪದಲ್ಲಿ ಇರಬೇಕಿತ್ತು ಎನ್ನುವುದು ಅವರ ವಾದ. ನಿಮ್ಮ ಅಭಿಪ್ರಾಯ?
ಮೋದಿ: ಹೌದು, ಒಂದೇ ಹಂತದ ತೆರಿಗೆ ರೂಪದಲ್ಲಿ ಇದ್ದಿದ್ದರೆ ಸರಳವಾಗಿ ಇರುತ್ತಿತ್ತು. ಆದರೆ, ಆಹಾರ ಪದಾರ್ಥಗಳನ್ನು ಶೂನ್ಯ ತೆರಿಗೆಯಲ್ಲಿ ಇರಿಸಲು ಆಗುತ್ತಿರಲಿಲ್ಲವಲ್ಲ. ನಾವು ಮರ್ಸಿಡಿಸ್‌ ಬೆಂಜ್‌ ಮತ್ತು ಹಾಲನ್ನು ಸಮಾನ ತೆರಿಗೆಯಲ್ಲಿ ಇರಿಸಲು ಸಾಧ್ಯವೇ? ಆದರೆ ನಮ್ಮ 
ಕಾಂಗ್ರೆಸ್ಸಿನ ಮಿತ್ರರು ಜಿಎಸ್‌ಟಿಯನ್ನು ಒಂದೇ ಹಂತದಲ್ಲಿ ಇರಿಸುತ್ತೇವೆ ಎನ್ನುತ್ತಿದ್ದಾರೆ. ಜತೆಗೆ ಈಗ ಶೂನ್ಯದಿಂದ ಶೇ.5ರ ತೆರಿಗೆ ದರದಲ್ಲಿ ಇರುವ ಆಹಾರ ಮತ್ತು ದಿನನಿತ್ಯದ ವಸ್ತುಗಳಿಗೂ ಶೇ.18ರ ತೆರಿಗೆ ಹಾಕುತ್ತೇವೆ ಎಂದೂ ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ! 

*ಇಷ್ಟೆಲ್ಲಾ ಆದರೂ ಇದುವರೆಗೂ ನಾವು ಏಕೆ ವ್ಯಾಪಾರ ವಲಯ, ಆರ್ಥಿಕ ತಜ್ಞರಿಂದ ಟೀಕೆ ಕೇಳುತ್ತಿದ್ದೇವೆ? 
ಮೋದಿ: ಜಿಎಸ್‌ಟಿ ಒಂದು ಬಹುದೊಡ್ಡ ಬದಲಾವಣೆ. ಜಗತ್ತಿನ ಅತಿದೊಡ್ಡ ಆರ್ಥಿಕ ವ್ಯವಸ್ಥೆಯನ್ನೇ ಸಂಪೂರ್ಣ ಬದಲಾವಣೆ ಮಾಡಿದ ಪ್ರಯತ್ನವಿದು. ಈ ಸುಧಾರಣೆಯಲ್ಲಿ 17 ತೆರಿಗೆಗಳು, 23 ಸೆಸ್‌ಗಳನ್ನು ಒಂದೇ ಒಂದು ತೆರಿಗೆಗೆ ವಿಲೀನಗೊಳಿಸಲಾಯಿತು. ಅಂತಿಮವಾಗಿ ಇದನ್ನು ಜಾರಿ ಮಾಡಿದಾಗ ನಮ್ಮ ಉದ್ದೇಶ ಸರಳ ಮತ್ತು ಯಾವುದೇ ಗೊಂದಲವಿಲ್ಲದೇ ಮೃದುವಾಗಿ ನಡೆದುಕೊಂಡು ಹೋಗ 
ಬೇಕು ಎನ್ನುವುದಾಗಿತ್ತು.  ಆದರೆ ಕೆಲವೊಮ್ಮೆ ಅನಿರೀಕ್ಷಿತ ತೊಂದರೆಗಳು ಎದುರಾಗುತ್ತವೆ. ಈ ತೊಂದರೆಗಳನ್ನು ಆಯಾಯ ಸಮಯದಲ್ಲೇ ಬಗೆಹರಿಸಿದ್ದೇವೆ. ಇಡೀ ದೇಶಾದ್ಯಂತ ಇದ್ದ ಚೆಕ್‌ ಪೋಸ್ಟ್‌ಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಯಾವುದೇ ರಾಜ್ಯದ ಗಡಿಯಲ್ಲೂ ಸಾಲು ಗಟ್ಟಿ ನಿಲ್ಲುವ ಹಾಗಿಲ್ಲ. ಇದರಿಂದ ಟ್ರಕ್‌ ಚಾಲಕರ ಬಹಳಷ್ಟು ಸಮಯ ಉಳಿತಾಯವಾಗಿದೆ. ಸರಕು ಮತ್ತು ಸಾಗಣೆ ವಲಯಕ್ಕೂ ಭಾರೀ ಪ್ರಮಾಣದ ಅನುಕೂಲವಾಗಿದೆ.

*ಪ್ರಶ್ನೆ: ಒಂದು ವರ್ಷವಾದರೂ ಜಿಎಸ್ಟಿಯಲ್ಲಿ ಪ್ರಕ್ರಿಯೆ ನಡೆಯುತ್ತಲೇ ಇದೆ…
ಮೋದಿ: ಜಿಎಸ್ಟಿ ಎಲ್ಲವನ್ನೂ ಒಳಗೊಳ್ಳುವ ಒಂದು ವ್ಯವಸ್ಥೆಯಾ ಗಿದ್ದು, ಅದು ರಾಜ್ಯ ಸರ್ಕಾರಗಳ, ಜನರ, ಮಾಧ್ಯಮಗಳ ಪ್ರತಿಕ್ರಿಯೆ ಗಳನ್ನು ಗಣನೆಗೆ ತೆಗೆದುಕೊಂಡು ಬದಲಾಗಬೇಕಿದೆ. ಅಲ್ಲದೇ ಈಗಾಗಲೇ ಜನ, ವರ್ತಕರ ಸಲಹೆಗಳನ್ನು ಪಡೆದು, ಅಳವಡಿಕೆ ಮಾಡಿಕೊಂಡಿದ್ದೇವೆ. ಭಾರತದಂಥ ಒಕ್ಕೂಟ ವ್ಯವಸ್ಥೆಯುಳ್ಳ ದೇಶಕ್ಕೆ ಜಿಎಸ್ಟಿ ಉತ್ತಮವಾಗಿದೆ. ನಾವು ಎಲ್ಲ ರಾಜ್ಯಗಳನ್ನು
ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಒಪ್ಪಿಸಿ ಜಾರಿ ಮಾಡಿದ್ದೇವೆ. ಆದರೆ ಹಿಂದಿನ ಸರ್ಕಾರಗಳು ಇದರಲ್ಲಿ ವಿಫ‌ಲವಾಗಿದ್ದವು.

*ಪ್ರಶ್ನೆ: ಮುಂದಿನ ದಿನಗಳಲ್ಲಿ ತೆರಿಗೆ ದರ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಬಹುದೇ?

ಮೋದಿ: ದರಗಳ ಬಗ್ಗೆ ಮಾತನಾಡುವುದಾದರೆ, ಹಿಂದೆ ಹಲವಾರು  ತೆರಿಗೆಗಳು ರಹಸ್ಯವಾಗಿದ್ದವು. ಆದರೆ ನೀವು ಈಗ ಏನು ಪಾವತಿಸುತ್ತೀರೋ ಅದು ನಿಮ್ಮ ಕಣ್ಣಿಗೇ ಕಾಣಿಸುತ್ತದೆ. ಸರ್ಕಾರವು ಸರಿಸುಮಾರು 400 ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಅಂದಾಜು 150 ವಸ್ತುಗಳ ತೆರಿಗೆಯನ್ನೇ ತೆಗೆದುಹಾಕಲಾಗಿದೆ. ನೀವು ತೆರಿಗೆಯನ್ನು ಗಮನಿಸುವುದಾದರೆ, ದಿನಬಳಕೆ ವಸ್ತುಗಳ ಬೆಲೆ ತೀರಾ ಕಡಿಮೆಯಾಗಿದೆ. ಅಕ್ಕಿ, ಗೋಧಿ, ಸಕ್ಕರೆ, ಮಸಾಲೆ ವಸ್ತುಗಳ ದರ ಇಳಿಕೆಯಾಗಿದೆ. ದಿನನಿತ್ಯದ ವಸ್ತುಗಳ ತೆರಿಗೆ ಪೂರ್ಣ ರದ್ದಾಗಿದೆ ಅಥವಾ ಶೇ.5ರಲ್ಲಿದೆ. ಅಲ್ಲದೆ ಶೇ.95ಕ್ಕೂ ಹೆಚ್ಚು ವಸ್ತುಗಳು ಶೇ.18ರ ಕೆಳಗಿನ ಹಂತದಲ್ಲಿವೆ.

ಪ್ರಶ್ನೆ: ಜಿಎಸ್ಟಿಯನ್ನು ನಿಮ್ಮ ಕನಿಷ್ಠ ಸರ್ಕಾರದ ಆರ್ಥಿಕ ತತ್ವಶಾಸ್ತ್ರಕ್ಕೆ ಜೋಡಣೆ ಮಾಡಬಹುದೇ?

ಮೋದಿ: ಜಿಎಸ್ಟಿಯನ್ನು ತಾಂತ್ರಿಕ ವ್ಯವಸ್ಥೆಯ ಸಹಕಾರದಿಂದ ಇನ್ಸ್‌ ಪೆಕ್ಟರ್‌ ರಾಜ್‌ ವ್ಯವಸ್ಥೆಯನ್ನು ತೆಗೆದುಹಾಕಲು ರೂಪಿಸಲಾಗಿದೆ.  ರಿಟರ್ನ್ ನಿಂದ ರಿಫ‌ಂಡ್‌ವರೆಗೆ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ.

*ಸರಕು ಮತ್ತು ಸೇವಾ ತೆರಿಗೆಯಿಂದ ಇದುವರೆಗೆ ಆಗಿರುವ ಲಾಭಗಳೇನು?
ಮೋದಿ: ನಾನು ಕೆಲವು ಸಂಖ್ಯೆಗಳೊಂದಿಗೆ ಶುರು ಮಾಡುತ್ತೇನೆ. ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ದೇಶದಲ್ಲಿ ನೋಂದಣಿಯಾದ ಉದ್ದಿಮೆಗಳ ಸಂಖ್ಯೆ 66 ಲಕ್ಷ. ಆದರೆ, ಜಿಎಸ್‌ಟಿ ಜಾರಿಯಾದ ಒಂದು ವರ್ಷದಲ್ಲಿ ನೋಂದಣಿಯಾದ ಹೊಸ ಉದ್ದಿಮೆಗಳ ಸಂಖ್ಯೆ 48 ಲಕ್ಷ. ಸುಮಾರು 350 ಕೋಟಿ ಇನ್ವಾಯ್ಸಗಳು ವಿಲೇವಾರಿಯಾಗಿವೆ ಮತ್ತು 11 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿವೆ. ಇಷ್ಟೆಲ್ಲಾ ಅಂಕಿಅಂಶಗಳನ್ನು ನೋಡಿದ ಮೇಲೆ ಜಿಎಸ್‌ಟಿ ನಿಜವಾಗಿಯೂ ಕ್ಲಿಷ್ಟ ಎಂದು ಅನ್ನಿಸುತ್ತದೆಯೇ?

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.