ಕಾಂಗ್ರೆಸ್‌ “ಬೇಲ್‌ ಗಾಡಿ’


Team Udayavani, Jul 8, 2018, 6:00 AM IST

v-22.jpg

ಜೈಪುರ: ಕಾಂಗ್ರೆಸ್‌ನ ಹಲವಾರು ಮುಖಂಡರು ಪ್ರಸ್ತುತ “ಬೇಲ್‌’  ಮೇಲೆ ಇದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಾರ್ಟಿ “ಬೇಲ್‌ ಗಾಡಿ’ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಶನಿವಾರ ರಾಜಸ್ಥಾನದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಕಟ್ಟಾಳು ಎಂದು ಕರೆಸಿಕೊಳ್ಳುವ ಹಲವು ನಾಯಕರು ಹಾಗೂ ಮಾಜಿ ಕೇಂದ್ರ ಸಚಿವರು ಇತ್ತೀಚಿನ ದಿನಗಳಲ್ಲಿ “ಬೇಲ್‌’ ರಕ್ಷಣೆ ಪಡೆದಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹಾಗೂ ಸಂಸದ ಶಶಿ ತರೂರು ನ್ಯಾಯಾಲಯದಲ್ಲಿ ಜಾಮೀನು ತೆಗೆದುಕೊಂಡಿರುವುದನ್ನು ಉಲ್ಲೇಖೀಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಶ್ಮೀರ ಗಡಿಯಲ್ಲಿ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಟೀಕಿಸುತ್ತಿರುವ ಕಾಂಗ್ರೆಸ್‌ ನಾಯಕರು ಭಾರತೀಯ ಸೇನೆಯ ಸಾಮರ್ಥ್ಯ ಹಾಗೂ ವಿಶ್ವಾಸವನ್ನು ಪ್ರಶ್ನಿಸುವ ಮೂಲಕ ಸೇನೆಗೆ ಅಪಮಾನ ಮಾಡುತ್ತಿದ್ದಾರೆ. ಈ ರೀತಿಯ ಕೊಳಕು ರಾಜಕಾರಣವ‌ನ್ನು ಜನತೆ ಎಂದಿಗೂ ಮರೆಯುವುದಿಲ್ಲ. ಅಲ್ಲದೇ ಕಾಂಗ್ರೆಸ್‌ ಮತ್ತೆ ತನ್ನ ಕುಟುಂಬ ಹಾಗೂ ವಂಶಪಾರಂಪರ್ಯ ರಾಜಕಾರಣವನ್ನು ಮುಂದುವರಿಸಲು ಇಚ್ಛಿಸುತ್ತಿದೆ. ಆದರೆ, ಬಿಜೆಪಿ ಸರ್ಕಾರ ದೇಶದ ರಕ್ಷಣೆ ಹಾಗೂ ಪ್ರತಿಷ್ಠೆ ಹೆಚ್ಚಿಸಲು ಬದ್ಧತೆ ತೋರುತ್ತಿದೆ ಎಂದು ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ರ್ಯಾಲಿಯನ್ನು ಪ್ರಚಾರದ ವೇದಿಕೆಯನ್ನಾಗಿ ಬಳಸಿಕೊಂಡ ಪ್ರಧಾನಿ ಮೋದಿ, ಕಾಂಗ್ರೆಸ್‌ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂ ಡರು. ಇದೇ ವೇಳೆ ಸಿಎಂ ರಾಜೇ ಹಾಗೂ ಸಚಿವರು ಉಪಸ್ಥಿತರಿದ್ದರು.

ಬಾಂಬ್‌ ಬೆದರಿಕೆ, ವ್ಯಕ್ತಿ ಬಂಧನ
ಮೋದಿ ಕಾರ್ಯಕ್ರಮದ ಸ್ಥಳದಲ್ಲಿ ಬಾಂಬ್‌ ಇಟ್ಟಿದ್ದೇನೆ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿದ್ದ ದಿನೇಶ್‌ ಸೈನಿ ಎಂಬ ವ್ಯಕ್ತಿಯನ್ನು ಎಟಿಎಸ್‌ ಬಂಧಿಸಿದೆ. ಹೆಚ್ಚಿನ ಮಾಹಿತಿಗಾಗಿ ಈತನ ವಿಚಾರಣೆ ನಡೆಸಲಾಗುತ್ತಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡು ಹುಸಿ ಕರೆ ಮಾಡಿದ್ದ ಎಂದು ಹೇಳಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪುತ್ರ ಸೇರಿದಂತೆ ಕೇಂದ್ರದ ಹಲವು ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆಪಾದನೆ ಹೊತ್ತಿದ್ದರೂ ಈ ಕುರಿತು ಪ್ರಧಾನಿ ಮೋದಿ ಚಕಾರವೆತ್ತುತ್ತಿಲ್ಲ. ಯಾರೊಬ್ಬರ ವಿರುದ್ಧವೂ ತನಿಖೆ ನಡೆಸುತ್ತಿಲ್ಲ.  ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟ ಬಿಜೆಪಿ ನಾಯಕರನ್ನು ಜೈಲಿಗೆ ಅಟ್ಟಲಿದೆ.
ಆರ್‌.ಪಿ.ಎನ್‌.ಸಿಂಗ್‌, ಕಾಂಗ್ರೆಸ್‌ ವಕ್ತಾರ

ಟಾಪ್ ನ್ಯೂಸ್

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Chikkamagaluru: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Chikkamagaluru: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Raichur: ಪ್ರೀತಿ ನಿರಾಕರಿಸಿದಕ್ಕಾಗಿ ಯುವಕ ಆತ್ಮಹತ್ಯೆ

Raichur: ಪ್ರೀತಿ ನಿರಾಕರಿಸಿದಕ್ಕಾಗಿ ಯುವಕ ಆತ್ಮಹತ್ಯೆ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನದ ಇತಿಹಾಸ…

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

ಮೋದಿ ಪಾದ ಮುಟ್ಟಿ ನಿತೀಶ್ ಕುಮಾರ್ ಬಿಹಾರಕ್ಕೆ ಅವಮಾನಿಸಿದ್ದಾರೆ: ಪ್ರಶಾಂತ್ ಕಿಶೋರ್

RSS

RSS; ಭಾಗ್ವತ್ ‘ನಿಜವಾದ ಸೇವಕ’ ಹೇಳಿಕೆ ಮೋದಿ ಉದ್ದೇಶಿಸಿ ನೀಡಿದ್ದಲ್ಲ: ಸಂಘ ಸ್ಪಷ್ಟನೆ

NDA ಸರ್ಕಾರದ ತಳಪಾಯವೇ ಸರಿಯಿಲ್ಲ ಯಾವಾಗ ಬೇಕಾದರೂ ಬೀಳಬಹುದು… ಮಲ್ಲಿಕಾರ್ಜುನ ಖರ್ಗೆ

NDA ಸರ್ಕಾರದ ತಳಪಾಯವೇ ಸರಿಯಿಲ್ಲ ಯಾವಾಗ ಬೇಕಾದರೂ ಬೀಳಬಹುದು… ಮಲ್ಲಿಕಾರ್ಜುನ ಖರ್ಗೆ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Tragedy: ನೇರಳೆ ಹಣ್ಣು ಕೊಯ್ಯುವ ವೇಳೆ ವಿದ್ಯುತ್ ಶಾಕ್… 7ನೇ ತರಗತಿ ವಿದ್ಯಾರ್ಥಿ ಮೃತ್ಯು

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Mangaluru; ಪಾಕಿಸ್ತಾನದ ಕುನ್ನಿಗಳನ್ನು ಖಾದರ್ ಅವರೇ ಗಡಿಪಾರು ಮಾಡಿಸಲಿ: ಸಿ.ಟಿ ರವಿ

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Indi: ಸಾವಳಸಂಗ ಅರಣ್ಯ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Indi: ಸಾವಳಸಂಗ ಅರಣ್ಯ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Raichur; 371ಜೆ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Raichur; 371ಜೆ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.