ಜಿ20ಕ್ಕೆ ಸಿಗಲಿದೆ ಪ್ರಧಾನಿ ಮೋದಿ ಟಚ್
Team Udayavani, Nov 14, 2022, 6:25 AM IST
ಪ್ರಧಾನಿ ಮೋದಿ ಸೋಮವಾರದಿಂದ ಮೂರು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ರಾಜಧಾನಿ ಬಾಲಿಯಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಅವರು ಭಾಗವಹಿಸಲಿದ್ದಾರೆ.
ವಿಶ್ವಶಾಂತಿಗೆ ಸಂಬಂಧಿಸಿ ಚರ್ಚೆಗಳೂ ನಡೆಯಲಿವೆ. ಮುಂದಿನ ವರ್ಷದ ಜಿ20 ನಾಯಕತ್ವ ಭಾರತಕ್ಕೆ ಸಿಗಲಿದ್ದು, ಒಂದು ವರ್ಷ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಅವರಿಂದ ಅಧ್ಯಕ್ಷ ಸ್ಥಾನ ಸ್ವೀಕರಿಸಲಿದ್ದಾರೆ.
ಪ್ರಧಾನಿ ಕಾರ್ಯಕ್ರಮಗಳೇನು?
– 45 ತಾಸುಗಳ ಇಂಡೋನೇಷ್ಯಾ ಪ್ರವಾಸದ ಅವಧಿಯಲ್ಲಿ 20 ಕಾರ್ಯಕ್ರಮಗಳಲ್ಲಿ ಭಾಗಿ.
– ಜಿ20 ರಾಷ್ಟ್ರಗಳ ಶೃಂಗದ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮೂರು ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
– ಉಕ್ರೇನ್ ಮೇಲೆ ರಷ್ಯಾದ ದಾಳಿಯಿಂದ ಉಂಟಾಗುವ ಪ್ರತಿಕೂಲ ಪರಿಣಾಮದ ಬಗ್ಗೆ ಚರ್ಚೆ.
– ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಅವರಿಂದ ಸಾಂಕೇತಿಕವಾಗಿ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಸ್ವೀಕಾರ.
– ಚೀನ ಅಧ್ಯಕ್ಷ ಕ್ಸಿಜಿನ್‌ಪಿಂಗ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಜಗತ್ತಿನ 10 ರಾಷ್ಟ್ರಗಳ ಮುಖ್ಯಸ್ಥರ ಜತೆಗೆ ಭೇಟಿ-ಮಾತುಕತೆ ಸಾಧ್ಯತೆ
ಭಾಗವಹಿಸಲಿರುವ ಪ್ರಮುಖರು
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್, ಜರ್ಮನ್ ಚಾನ್ಸಲರ್ ಒಲಾಫ್ ಶಲ್ಜ್, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್.
ಜಿ20 ರಾಷ್ಟ್ರಗಳು
ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟೆಲಿ, ಜಪಾನ್, ದ ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಟರ್ಕಿ, ಯು.ಕೆ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ. ಇದೊಂದು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಒಕ್ಕೂಟ. ಜಗತ್ತಿನ ಶೇ. 85 ಜಿಡಿಪಿ, ಜಗತ್ತಿನ ಶೇ. 75ರಷ್ಟು ಜಗತ್ತಿನ ವಾಣಿಜ್ಯ ವಹಿವಾಟು ಈ ದೇಶಗಳ ನಡುವೆ ನಡೆಯುತ್ತದೆ.
ಸಭೆ ಯಾವಾಗ?
ನ. 14ರಿಂದ ನ. 16
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸನಾತನ ಸಂಸ್ಥೆ ನಿಷೇಧಿತ …ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್, ಏನಿದು ಪ್ರಕರಣ?
ಅಪಘಾತದಲ್ಲಿ ಪೇದೆ ಮೃತ್ಯು: 5 ವರ್ಷದ ಮಗನನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿದ ಇಲಾಖೆ
ರಾಹುಲ್ ಅನರ್ಹತೆಗೆ ಪ್ರತ್ಯುತ್ತರವಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ: ಪ್ರಿಯಾಂಕಾ
15 ದಿನಗಳೊಳಗೆ ಶರಣಾಗಿ: ಸುಪ್ರೀಂ ಕೋರ್ಟ್ ನಿರ್ದೇಶನ
ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಕೆಟ್ ಚಕ್ಕರ್…