ನಾಳೆ ಪುಣೆಯ ಸಿರಮ್‌ಗೆ ಮೋದಿ; ಆಕ್ಸ್‌ಫರ್ಡ್ ಲಸಿಕೆ ಉತ್ಪಾದನೆ ಪ್ರಗತಿ ಪರಿಶೀಲನೆ
Team Udayavani, Nov 27, 2020, 6:20 AM IST
ಪುಣೆ: ಕೊರೊನಾ ಲಸಿಕೆ ಸಿದ್ಧಪಡಿಸುತ್ತಿರುವ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದು, ನ.28ರಂದು ಪ್ರವಾಸ ನಿಗದಿಗೊಂಡಿದೆ.
ಜಾಗತಿಕ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿವಿಯ ಅಘಈ1222 ಲಸಿಕೆಯನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪುಣೆ ಯಲ್ಲಿ ಸಿದ್ಧಪಡಿಸುತ್ತಿದೆ. “ಪ್ರಧಾನಿ ಮೋದಿ ಅವರು ಸೀರಮ್ ಸಂಸ್ಥೆಗೆ ಶನಿವಾರ ಭೇಟಿ ನೀಡುವ ಮಾಹಿತಿ ನಮಗೆ ಅಧಿಕೃತವಾಗಿ ತಲುಪಿದೆ. ಆದರೆ, ಆ ದಿನದ ಪ್ರಧಾನಿಯವರ ಪ್ರತೀ ನಿಮಿಷಗಳ ಕಾರ್ಯಕ್ರಮ ವೇಳಾಪಟ್ಟಿ ಇನ್ನೂ ಕೈಸೇರಿಲ್ಲ’ ಎಂದು ಪುಣೆ ವಿಭಾ ಗೀಯ ಕಮಿಷನರ್ ಸೌರಭ್ ರಾವ್ ತಿಳಿಸಿದ್ದಾರೆ.
ಭಾರತ್ ಬಯೋಗೂ ಭೇಟಿ: ಪ್ರಧಾನಿ ಮೋದಿ ಅವರು ನ. 29ರಂದು ಹೈದರಾಬಾದ್‌ನ ಭಾರತ್ ಬಯೋಟೆಕ್‌ಗೂ ಭೇಟಿ ನೀಡಲಿದ್ದಾರೆ.
ಭೇಟಿ ಏಕೆ?: ಎರಡೂ ಸಂಸ್ಥೆಗಳಿಂದ ಪ್ರಧಾನಿ ಲಸಿಕೆ ಉತ್ಪಾದನೆ, ಪ್ರಗತಿಯ ಕುರಿತು ಮಾಹಿತಿ ಪಡೆಯ ಲಿದ್ದಾರೆ. ಲಸಿಕೆ ಲಭ್ಯತೆಯ ಸಮಯ, ಹಂಚಿಕೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ರಾವ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಡಿ. 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿಷೇಧ ಮುಂದು ವರಿಸಲಾಗಿದೆ.
ಲಸಿಕೆ ಬಗ್ಗೆ ಸಂಶಯ
ಲಂಡನ್: ಶೇ.90ರಷ್ಟು ಪರಿಣಾಮಕಾರಿ, 1 ಕಪ್ ಕಾಫೀಗಿಂತ ಕಡಿಮೆ ದರ!- ಇಂಥ ಪ್ರಶಂಸೆಗಳ ಮೂಲಕ ಆಕ್ಸ್‌ಫರ್ಡ್- ಅಸ್ಟ್ರಾ ಜೆನೆಕಾ ಲಸಿಕೆ ಪ್ರಶಂಸೆಗಳ ಎವರೆಸ್ಟ್ ಏರಿದೆ. ಆದರೆ, ಇದರ ಫಲಿತಾಂಶದ ಬಗ್ಗೆ ಒಂದೊಂದೇ ಸಂದೇಹ ಸ್ಫೋಟಗೊಳ್ಳುತ್ತಿದೆ. ಲಸಿಕೆ ಶೇ.90, ಶೇ.62ರಷ್ಟು ಪರಿಣಾಮಕಾರಿ ಎಂದು 2 ಹಂತಗಳಲ್ಲಿ ತಿಳಿದುಬಂದಿದೆ. ಅಸ್ಟ್ರಾಜೆನೆಕಾ ಸಂಸ್ಥೆಯು ಅರ್ಧ ಡೋಸ್ ಅನ್ನು ಕೇವಲ 2,800 ಮಂದಿ ಮೇಲೆ, ಪೂರ್ಣ ಡೋಸ್ ಅನ್ನು 8,900 ಮಂದಿ ಮೇಲೆ ಪ್ರಯೋಗಿಸಿತ್ತು. ಶೇ.90 ಪರಿಣಾಮಕಾರಿ ಎನ್ನುವುದು ಲಸಿಕೆಯನ್ನು ಅರ್ಧ ಡೋಸ್ ತೆಗೆದುಕೊಂಡ ನಂತರ ಸಿಕ್ಕಿರುವ ಫಲಿತಾಂಶ. ಪೂರ್ಣ ಡೋಸ್ ಪಡೆದಾಗ ಲಸಿಕೆ ಫಲಿತಾಂಶ ಭಾರೀ ಕಡಿಮೆ ಹೊರಹೊಮ್ಮಿತ್ತು ಎಂದು ತಿಳಿದುಬಂದಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ
ಪ್ರತಿಭಟನೆ ಅಂತ್ಯಗೊಳಿಸಿ, ಕೂಡಲೇ ಸ್ಥಳ ಬಿಟ್ಟು ಹೊರಡಿ: ರೈತರಿಗೆ ಉತ್ತರ ಪ್ರದೇಶ ಸರ್ಕಾರ
ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?
ಅಪ್ರಾಪ್ತೆಯ ಕೈ ಹಿಡಿದು, ಜಿಪ್ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
ಕೋಣದ ಜತೆ 9 ವರ್ಷದ ಬಾಲಕನ ಕಂಬಳ ಓಟ ಪ್ರಾಕ್ಟಿಸ್! ಕಂಬಳದಲ್ಲೇ ಸಾಧನೆ ಮಾಡಬೇಕೆಂಬ ಹಂಬಲವಂತೆ
ಫೆ. 1ರಿಂದ 9 ಮತ್ತು 11ನೇ ತರಗತಿಗಳೂ ಆರಂಭ : ಸಚಿವ ಸುರೇಶ್ ಕುಮಾರ್
ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಈ ವಿದ್ಯಾರ್ಥಿನಿ ಏಕ್ ದಿನ ಕಾ ಸಿಇಓ !
ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ