ದೇಶದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ: ಪ್ರಧಾನಿ ಮೋದಿ
Team Udayavani, Jan 29, 2023, 11:18 AM IST
ಹೊಸದಿಲ್ಲಿ: ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ಬಿತ್ತುವ ಮತ್ತು ಒಡಕು ಮೂಡಿಸುವ ಪ್ರಯತ್ನಗಳ ವಿರುದ್ಧ ಶನಿವಾರ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ದೆಹಲಿ ಕಂಟೋನ್ಮೆಂಟ್‌ನ ಕರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ಭವ್ಯತೆಯನ್ನು ಸಾಧಿಸಲು ಏಕತೆಯ ಮಂತ್ರವೊಂದೇ ಮಾರ್ಗವಾಗಿದೆ ಎಂದು ಹೇಳಿದರು.
ದೇಶದ ಯುವಶಕ್ತಿಯಿಂದಾಗಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಸರ್ಕಾರ ಡಿಜಿಟಲ್, ಸ್ಟಾರ್ಟ್‌ಅಪ್ ಮತ್ತು ನಾವೀನ್ಯತೆ ಕ್ರಾಂತಿಗಳನ್ನು ಬಿಡುಗಡೆ ಮಾಡಿದೆ, ಅದು ಯುವಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ:ಈ ಆಟಗಾರ ಇರುವಾಗ ಏಕದಿನ ತಂಡದ ನಾಯಕತ್ವ ಹಾರ್ದಿಕ್ ಗೆ ಸಿಗುವುದು ಕಷ್ಟ: ಆಕಾಶ್ ಚೋಪ್ರಾ
ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಎನ್ ಸಿಸಿ ಕೆಡೆಟ್ ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಇದು ಭಾರತದ ಯುವಜನರಿಗೆ ಹೊಸ ಅವಕಾಶಗಳ ಸಮಯ. ಭಾರತದ ಸಮಯ ಬಂದಿದೆ ಎಂಬುದು ಎಲ್ಲೆಡೆ ಸ್ಪಷ್ಟವಾಗಿದೆ” ಎಂದು ಹೇಳಿದರು.
ಅದೇ ಸಮಯದಲ್ಲಿ, ದೇಶವನ್ನು ವಿಭಜಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ವಹಿಸಬೇಕೆಂದು ಪ್ರಧಾನಿ ಒತ್ತಾಯಿಸಿದರು.
“ದೇಶ ಒಡೆಯಲು ಹಲವಾರು ನೆಪಗಳನ್ನು ಹುಡುಕಲಾಗುತ್ತಿದೆ. ಭಾರತ ಮಾತೆಯ ಮಕ್ಕಳ ನಡುವೆ ಒಡಕು ಮೂಡಿಸಲು ಹಲವಾರು ಸಮಸ್ಯೆಗಳು ತಲೆದೋರಿವೆ” ಎಂದು ಪ್ರಧಾನಮಂತ್ರಿ ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎರಡು ವರ್ಷ ಜೈಲು ಶಿಕ್ಷೆ ಪ್ರಕಟ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ಪಣಜಿ: ಮಹಿಳೆಯರಿಗೆ ಸರಿಯಾದ ಗೌರವ ಕೊಡಬೇಕು, ಅವಮಾನಿಸಬಾರದು: ಡಾ.ನಿರ್ಮಲಾ ಸಿ.ಯಲಿಗಾರ
ಏಜೆನ್ಸಿಗಳ ದುರುಪಯೋಗ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ 14 ವಿರೋಧ ಪಕ್ಷಗಳು
ಪಾಕ್ ಗಡಿಯ ದೇಗುಲಕ್ಕೆ ಶೃಂಗೇರಿ ವಿಗ್ರಹ; ಕಾಶ್ಮೀರದ ಕುಪ್ವಾರದಲ್ಲಿ ಶಾರದಾ ದೇಗುಲ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
ಎರಡು ವರ್ಷ ಜೈಲು ಶಿಕ್ಷೆ ಪ್ರಕಟ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ
ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ
ರೈತರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ; ಶಾಂತಿ ಪ್ರಸಾದ್ ಹೆಗ್ಡೆ
ಸುಳ್ಯ ನ.ಪಂ. ಸಾಮಾನ್ಯ ಸಭೆ; ನೀರಿನ ಮಿತಬಳಕೆ, ಜಾಗೃತಿ ಅಗತ್ಯ
ಚಿಕ್ಕಮಗಳೂರು: ಮತದಾರರಿಗೆ ಹಂಚಲು ತಂದಿದ್ದ 150 ಕ್ವಿಂಟಾಲ್ ಅಕ್ಕಿ ವಶ