Udayavni Special

ನಾಲ್ಕು ವರ್ಷಗಳ‌ಲ್ಲಿ ಹತ್ತು ಕೋಟಿ ಎಲ್‌ಪಿಜಿ ಸಂಪರ್ಕ


Team Udayavani, May 29, 2018, 6:00 AM IST

q-19.jpg

ಹೊಸದಿಲ್ಲಿ: ಎಲ್‌ಪಿಜಿ ಸಿಲಿಂಡರ್‌ ಸಂಪರ್ಕ ನೀಡುವುದರಲ್ಲಿ ಕಳೆದ ಆರು ದಶಕಗಳಲ್ಲಿ ಸಾಧಿಸದ್ದನ್ನು ನಾವು ಕೇವಲ ನಾಲ್ಕೇ ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಮಹಿಳೆಯರೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಈ 4 ವರ್ಷಗಳಲ್ಲಿ 10 ಕೋಟಿ ಹೊಸ ಎಲ್‌ಪಿಜಿ ಸಂಪರ್ಕ ನೀಡಿದ್ದೇವೆ. ಅದರಲ್ಲೂ ನಾಲ್ಕು ಕೋಟಿ ಅನಿಲ ಸಂಪರ್ಕಗಳನ್ನು ಬಡಮಹಿಳೆಯರಿಗೆ ಉಚಿತವಾಗಿ ನೀಡಿದ್ದೇವೆ. ಇದರಲ್ಲಿ ಶೇ.45 ರಷ್ಟು ಫ‌ಲಾನುಭವಿಗಳು ದಲಿತ ಮತ್ತು ಬುಡಕಟ್ಟು ವರ್ಗಕ್ಕೆ ಸೇರಿದವರು ಎಂದರು.

ನಮ್ಮದು ಬಡವರ ಸೇವೆಗಾಗಿಯೇ ಇರುವ ಸರಕಾರ ಎಂದ ಮೋದಿ, ಹಿಂದಿನ ಸರಕಾರಗಳ ಆಡಳಿತವನ್ನೂ ಟೀಕಿಸಿದರು. ನಾನು ಚಿಕ್ಕವನಾಗಿದ್ದಾಗ ತೀರಾ ಪ್ರಭಾವಿಗಳು ಮಾತ್ರ ಎಲ್‌ಪಿಜಿ ಸಂಪರ್ಕ ಹೊಂದಿದ್ದರು. ಅಲ್ಲದೆ ಇದು ಬಡವರು ಉಪಯೋಗಿಸಲು ಅಲ್ಲ, ಅವರಿಗೆ ಇದು ಸುರಕ್ಷೆಯೂ ಅಲ್ಲ ಎಂದು ಬಿಂಬಿಸಿದ್ದರು. ಮತ್ತೆ ನೀವೇಕೆ ಮನೆಯಲ್ಲಿ ಇರಿಸಿಕೊಂಡಿದ್ದೀರಿ ಎಂದು ಕೇಳಿದಾಗ ಅವರು ಮೌನಕ್ಕೆ ಶರಣಾಗಿದ್ದರು. ಕೇವಲ ಶ್ರೀಮಂತರು ಮತ್ತು ಪ್ರಭಾವಿಗಳು ಮಾತ್ರ ಇರಿಸಿಕೊಳ್ಳಬಹುದು ಎಂಬಂತಿದ್ದ ಈ ಎಲ್‌ಪಿಜಿ ಸಂಪರ್ಕವನ್ನು ಬಡವರ ಮನೆಗೂ ತಲುಪಿಸಿದ್ದೇವೆ ಎಂದು ತಮ್ಮ ಸರಕಾರವನ್ನು ಶ್ಲಾಘಿಸಿದರು. 

2010 ರಿಂದ 2014ರ ವರೆಗಿನ ಯುಪಿಎ ಆಳ್ವಿಕೆ ವೇಳೆ ದೇಶದಲ್ಲಿ 445 ದಲಿತರಿಗೆ ಪೆಟ್ರೋಲ್‌ ಬಂಕ್‌ ನೀಡಲಾಗಿತ್ತು. ಅದೇ 2014 ರಿಂದ 18ರ ಅವಧಿಯಲ್ಲಿ ನಾವು 1200 ಪೆಟ್ರೋಲ್‌ ಬಂಕ್‌ಗಳಿಗೆ ಒಪ್ಪಿಗೆ ನೀಡಿದ್ದೇವೆ ಎಂದರು. ಅಲ್ಲದೆ ಯುಪಿಎ ಅವಧಿಯಲ್ಲಿ ದಲಿತ ಸಮುದಾಯದವರಿಗೆ 900 ಎಲ್‌ಪಿಜಿ ವಿತರಣಾ ಕೇಂದ್ರ ನೀಡಿದ್ದರೆ, ನಮ್ಮ ಅವಧಿಯಲ್ಲಿ 1300 ವಿತರಣಾ ಕೇಂದ್ರಕ್ಕೆ ಅನುಮತಿ ನೀಡಿದ್ದೇವೆ ಎಂದರು. 

ಇಡ್ಲಿ, ದೋಸಾ ಮಾಡಿ ಕೊಡ್ತೀರಾ?
ಇಡ್ಲಿ, ದೋಸೆ ಮಾಡಿದಾಗ ನನ್ನನ್ನೂ ತಿನ್ನಲು ಕರೆಯು ತ್ತೀರಾ? ಇದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ರುದ್ರಮ್ಮನಿಗೆ ಪ್ರಧಾನಿ ಮೋದಿ ಕೇಳಿದ ಪ್ರಶ್ನೆ. ಇದಕ್ಕೆ ತಟ್ಟನೆ ಉತ್ತರಿಸಿದ ಅವರು, “”ನಿಜವಾ ಗಿಯೂ, ಬನ್ನಿ ಮಾಡಿಕೊಡ್ತೇನೆ” ಎಂದರು. ಸಂವಾದದಲ್ಲಿ ಪಾಲ್ಗೊಂ ಡಿದ್ದ ರುದ್ರಮ್ಮನಿಗೆ ಎಲ್‌ಪಿಜಿ ಸಿಲಿಂಡರ್‌ನಿಂದ ನಿಮಗೆ ಉಪಯೋಗವಾಗುತ್ತಿದೆಯೇ ಎಂದು ಮೋದಿ ಪ್ರಶ್ನಿಸಿ ದ್ದರು. ಅದಕ್ಕೆ ಹೌದು, ಹಿಂದೆ ಸೌದೆ ಬಳಸಿ ಅಡುಗೆ ಮಾಡುತ್ತಿದ್ದೆ, ಕಷ್ಟವಾಗುತ್ತಿತ್ತು. ಆದರೆ ಈಗ ಸುಲಭ ವಾಗಿದೆ ಎಂದರು. ಸೌದೆ ಒಲೆಯಲ್ಲಿ ಸರಳವಾಗಿ ಇಡ್ಲಿ, ದೋಸೆ ಮಾಡಲು ಸಾಧ್ಯವಾಗುತ್ತಿತ್ತೇ ಎಂಬ ಪ್ರಧಾನಿ ಪ್ರಶ್ನೆಗೆ, ತುಂಬಾ ಕಷ್ಟವಾಗು¤ತಿತ್ತು. ಆದರೆ, ಈಗ ಸಿಲಿಂಡರ್‌ ಬಂದ ಮೇಲೆ ಸರಳವಾಗಿದೆ ಎಂದರು. 

ನೀವೇ ಪ್ರಧಾನಿಯಾಗಿ ಮುಂದುವರಿಯಿರಿ
“”ಇದು ರಂಜಾನ್‌ ತಿಂಗಳಾಗಿದ್ದು, ನಾವು ಪ್ರತಿನಿತ್ಯವೂ ಕುರಾನ್‌ ಪಠಣ ಮಾಡುತ್ತೇವೆ. ಮುಂದೆಯೂ ನೀವೇ ಪ್ರಧಾನಿಯಾಗಬೇಕು ಎಂದು ನಾವು ಪ್ರಾರ್ಥಿಸುತ್ತಿದ್ದೇವೆ…” ಇದು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಕಾಶ್ಮೀರದ ಅನಂತ್‌ನಾಗ್‌ನ ಮಹಿಳಾ ಗುಂಪೊಂದು ಪ್ರಧಾನಿ ಮೋದಿ ಅವರಿಗೆ ಹಾರೈಸಿದ ಪರಿ. ಈ ಸಂದರ್ಭದಲ್ಲಿ ತಾವು ಚಿಕ್ಕವರಾಗಿದ್ದಾಗ ತಮ್ಮ ನೆರೆಹೊರೆಯಲ್ಲಿದ್ದ ಹಮೀದ್‌ ಎಂಬುವವರನ್ನು ನೆನೆದ ಪ್ರಧಾನಿ, ಇವರಿಂದ ತಾವು ಪ್ರಭಾವಿತರಾಗಿದ್ದುದನ್ನೂ ನೆನಪಿಸಿಕೊಂಡರು. ಹಮೀದ್‌ ತನ್ನ ಅಜ್ಜಿ ಒಲೆಯಲ್ಲಿ ಕೈ ಸುಟ್ಟುಕೊಳ್ಳುತ್ತಿದ್ದುದನ್ನು ನೋಡಲಾಗದೆ ಈದ್‌ ಕೊಡುಗೆಯಾಗಿ ಚಿಮಾrವನ್ನು ತಂದುಕೊಟ್ಟದ್ದನ್ನು ಸ್ಮರಿಸಿದರು. ಹಮೀದ್‌ಗೆ ಇದು ಸಾಧ್ಯವಾಗುತ್ತದೆ ಎಂಬುದಾದರೆ ಪ್ರಧಾನಿ ಕೈಯ್ಯಲ್ಲಿ ಏಕೆ ಸಾಧ್ಯವಾಗುವುದಿಲ್ಲ ಅಲ್ಲವೇ ಎಂದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?

Air India One:ವಿವಿಐಪಿಗಳ ಪ್ರಯಾಣಕ್ಕಾಗಿ ದೆಹಲಿಗೆ ಬಂದಿಳಿದ ಬಿ 777 ವಿಮಾನ; ಏನಿದರ ವಿಶೇಷ?

631

ಕೋವಿಡ್‌ನಿಂದ ರದ್ದಾದ ವಿಮಾನದ ಟಿಕೆಟ್‌ ರೀಫ‌ಂಡ್‌; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ದೆಹಲಿ ಗಲಭೆ: ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಮತ್ತೆ ಬಂಧನ, 3 ದಿನ ಪೊಲೀಸ್ ವಶಕ್ಕೆ

ದೆಹಲಿ ಗಲಭೆ: ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಮತ್ತೆ ಬಂಧನ, 3 ದಿನ ಪೊಲೀಸ್ ವಶಕ್ಕೆ

ಗುಡ್ ನ್ಯೂಸ್: ಭಾರೀ ಗಾತ್ರದ ಮೀನು ಹಿಡಿದು ಒಂದೇ ದಿನದಲ್ಲಿ ಶ್ರೀಮಂತೆಯಾದ ಬಡ ಮಹಿಳೆ!

ಗುಡ್ ನ್ಯೂಸ್: ಭಾರೀ ಗಾತ್ರದ ಮೀನು ಹಿಡಿದು ಒಂದೇ ದಿನದಲ್ಲಿ ಶ್ರೀಮಂತೆಯಾದ ಬಡ ಮಹಿಳೆ!

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

ಕೊಡಗು: ಗುರುವಾರ 53 ಹೊಸ ಪ್ರಕರಣ

ಕೊಡಗು: ಗುರುವಾರ 53 ಹೊಸ ಪ್ರಕರಣ

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ: ಡಿಸಿ ಡಾ| ರಾಜೇಂದ್ರ

ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ: ಡಿಸಿ ಡಾ| ರಾಜೇಂದ್ರ

ಡ್ರಗ್ಸ್‌ ಕಾರ್ಯಾಚರಣೆ: ಮೂವರು ಆರೋಪಿಗಳು ಸಿಸಿಬಿ ವಶಕ್ಕೆ

ಡ್ರಗ್ಸ್‌ ಕಾರ್ಯಾಚರಣೆ: ಮೂವರು ಆರೋಪಿಗಳು ಸಿಸಿಬಿ ವಶಕ್ಕೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.