ಸೆ.17ರಂದು ಚೀತಾ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
Team Udayavani, Sep 7, 2022, 7:30 PM IST
ಭೋಪಾಲ್: ನಮೀಬಿಯಾದಿಂದ ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ಬರಮಾಡಿಕೊಳ್ಳುವ ಯೋಜನೆಗೆ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ವಿಶೇಷವಾಗಿ ಆ ದಿನದಂದು ಮೋದಿ ಅವರು 72ನೇ ವರ್ಷದ ಹುಟ್ಟಿದ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಅದೇ ಕಾರಣಕ್ಕೆ ಅದೇ ದಿನದಂದು ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆಯೋಜಿಸಿದ್ದಾರೆ.
ಚೀತಾಗಳು ಸೆ.16ರಂದು ಒಟ್ಟು 9,000 ಕಿ.ಮೀ. ಪ್ರಯಾಣ ಮುಗಿಸಿ ಕುನೋ ಉದ್ಯಾನಕ್ಕೆ ಬರಲಿವೆ. ಚೀತಾಗಳು ಹಾಗೂ ಗಣ್ಯರ ಆಗಮನಕ್ಕೆಂದೇ ಉದ್ಯಾನದ ಬಳಿ 10 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.
ಚೀತಾಗಳ ವಾಸಕ್ಕೆಂದೇ 500 ಹೆಕ್ಟೇರ್ ಜಾಗಕ್ಕೆ ಬೇಲಿ ಹಾಕಿ ಸಜ್ಜುಗೊಳಿಸಲಾಗಿದೆ.