
ಗಣರಾಜ್ಯೋತ್ಸವದಲ್ಲಿ ಜಮ್ ನಗರದ “ಪಾಗ್ಡಿ”ಯಲ್ಲಿ ಕಂಗೊಳಿಸಿದ ಪ್ರಧಾನಿ
ಜಮ್ ನಗರದ ರಾಜ ಮನೆತನದಿಂದ ಗಣರಾಜ್ಯೋತ್ಸವದ ಸಮಾರಂಭಕ್ಕಾಗಿ ಗೌರವ ಪೂರ್ವಕವಾಗಿ ಉಡುಗೊರೆಯಾಗಿ ಕೊಟ್ಟಿರುವ ಪೇಟ
Team Udayavani, Jan 26, 2021, 12:45 PM IST

ನವದೆಹಲಿ: ಪ್ರಧಾನಿ ಮೋದಿ ಎಂದಿಗೂ ಶಿಸ್ತು ಮತ್ತು ವಿಶೇಷತೆಯಿಂದ ಕಾಣಿಸಿಕೊಳ್ಳುತ್ತಾರೆ. ದಿನನಿತ್ಯ ತೊಡುವ ಧಿರಿಸಿನಿಂದಲೇ ಅವರು ಎಂದಿಗೂ ವಿಶೇಷ ಆಕರ್ಷಿತರಾಗಿರುತ್ತಾರೆ. ಸ್ವಾತಂತ್ರ್ಯೋತ್ಸವ ಅಥವಾ ಗಣರಾಜ್ಯೋತ್ಸವದ ಸಂದರ್ಭದಲ್ಲಂತೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದರ ಮೂಲಕ ಇಡೀ ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ.
ಓದಿ : ಟಿಕ್ ಟಾಕ್ ಸೇರಿ ಚೀನಾ ಮೂಲದ 59 ಅಪ್ಲಿಕೇಶನ್ ಗಳಿಗೆ ಶಾಶ್ವತ ನಿಷೇಧ
ಹೌದು, 72 ನೇ ಗಣರಾಜ್ಯೋತ್ಸವದ ಸಮಾರಂಭದಲ್ಲೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣ ಬಣ್ಣದ ಪೇಟಗಳನ್ನು ಧರಿಸುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಇಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪ್ರಕಾಶಮಾನವಾದ ಕೇಸರಿ ಬಣ್ಣದ ಪೇಟವನ್ನು ಧರಿಸಿದ್ದಾರೆ. ಬೂದು ಬಣ್ಣದ ಜಾಕೆಟ್ ಮತ್ತು ಕೆನೆ ಹಾಲಿನ ಬಣ್ಣದ ಶಾಲು ಹೋಂದಿದ ಧಿರಿಸಿಗೆ ಪೇಟವು ಸುಂದರವಾಗಿ ಕಾಣಿಸುತ್ತಿತ್ತು.
ಪ್ರಧಾನಿ ತೊಟ್ಟ ಪೇಟದ ವಿಶೇಷತೆ ಏನು..?
ಈ ವರ್ಷ ಗಣರಾಜ್ಯೋತ್ಸವಕ್ಕೆ ಪ್ರಧಾನಿ ಧರಿಸಿದ್ದ ಪೇಟವು ಗುಜರಾತ್ ನ ಜಮ್ ನಗರದ ರಾಜ ಮನೆತನದಿಂದ ಗಣರಾಜ್ಯೋತ್ಸವದ ಸಮಾರಂಭಕ್ಕಾಗಿ ಗೌರವ ಪೂರ್ವಕವಾಗಿ ಉಡುಗೊರೆಯಾಗಿ ಕೊಟ್ಟಿರುವುದಾಗಿದೆ. ಈ ಕೇಸರಿ ವರ್ಣರಂಜಿತ ಪೇಟವನ್ನು ‘ಪಾಗ್ಡಿ’ ಅಥವಾ ‘ಹಲಾರಿ ಪಾಗ್’ (ರಾಯಲ್ ಹೆಡ್ ಪೇಟ) ಎಂದು ಕೂಡ ಹೇಳಲಾಗುತ್ತದೆ. ಉದ್ದವಾದ ಹತ್ತಿ ಬಟ್ಟೆಯಿಂದ ಇದನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ.
ಕಳೆದ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಕೇಸರಿ ಬಂದೆಜ್ ಶಿರಸ್ತ್ರಾಣ ಧರಿಸಿದ್ದರು. 2019 ರಲ್ಲಿ ಅವರು ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ಪೇಟವನ್ನು ಧರಿಸಿದ್ದರು.
ಓದಿ : ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ

ಸಲಿಂಗ ವಿವಾಹ : ಅರ್ಜಿಗಳ ಸಮೂಹ ಸುಪ್ರೀಂಗೆ ಸಲ್ಲಿಸಿದ ದೆಹಲಿ ಹೈಕೋರ್ಟ್

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ

ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
