ಪ್ರಧಾನಿ ಕೇದಾರನಾಥ ಭೇಟಿ ; ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

Team Udayavani, May 19, 2019, 11:48 AM IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರು ದಾಖಲಸಿದೆ.

ಟಿಎಂಸಿ ನಾಯಕ ಡೆರೆಕ್‌ ಓಬ್ರೆಯಾನ್‌ ಅವರು ಬರೆದಿರುವ ಪತ್ರದಲ್ಲಿ  ಮತದಾನ ಕೊನೆಯ ಹಂತದ ಚುನಾವಣೆಯ ಪ್ರಚಾರ ಮುಗಿದರೂ ಸಹ ಮಾಧ್ಯಮಗಳು ಪ್ರಧಾನಿ ಕೇದಾರನಾಥ ಭೇಟಿಯನ್ನು ಸಂಪೂರ್ಣವಾಗಿ ಮತ್ತು ವ್ಯಾಪಕವಾಗಿ ಪ್ರಸಾರಮಾಡಿವೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇದಾರನಾಥದಲ್ಲಿ ಕಳೆದಿದ್ದರು, ಭಾನುವಾರ ಬದ್ರಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ