ಪಿಎನ್‌ಬಿ ಹಗರಣ : ಆರೋಪಿಗಳು ಸಿಬಿಐ ಬಲೆಗೆ


Team Udayavani, Feb 18, 2018, 7:30 AM IST

a-33.jpg

ಹೊಸದಿಲ್ಲಿ: ದೇಶೀಯ ಬ್ಯಾಂಕಿಂಗ್‌ ಕ್ಷೇತ್ರವನ್ನು ತಲ್ಲಣಗೊಳಿಸಿರುವ ಪಂಜಾಬ್‌ ನ್ಯಾಶ‌ನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಬಿಐ ಮೂವರನ್ನು ಬಂಧಿಸಿದೆ. ದಕ್ಷಿಣ ಕನ್ನಡದ ಮೂಲ್ಕಿ ಮೂಲದವರಾದ, ಪಿಎನ್‌ಬಿಯ ಮಾಜಿ ಉಪ ವ್ಯವಸ್ಥಾಪಕ ಗೋಕುಲನಾಥ್‌ ಶೆಟ್ಟಿ, ಪಿಎನ್‌ಬಿಯ ಸಿಂಗಲ್‌ ವಿಂಡೋ ಆಪರೇಟರ್‌ ಮನೋಜ್‌ ಖಾರಟ್‌ ಹಾಗೂ ಹಗರಣದ ಪ್ರಮುಖ ಆರೋಪಿ ನೀರವ್‌ ಮೋದಿಯವರ ಕಂಪೆನಿಗಳ ಅಧಿಕೃತ ಸಹಿದಾರ ಹೇಮಂತ್‌ ಭಟ್‌ ಬಂಧಿತರು. ಬಂಧಿತರನ್ನು ಮುಂಬಯಿಯ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಈ ಮೂವರನ್ನು ಮಾ. 3ರ ವರೆಗೆ ಸಿಬಿಐ ವಶಕ್ಕೊಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಇವರಲ್ಲಿ ಗೋಕುಲನಾಥ್‌ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದ ಮೂಲ್ಕಿಯವರು. ಶೆಟ್ಟಿ ಹಾಗೂ ಮನೋಜ್‌ ಖಾರಟ್‌ ಅವರ ಹೆಸರುಗಳನ್ನು ಸಿಬಿಐ ತನ್ನ ಎರಡನೇ ಎಫ್ಐಆರ್‌ನಲ್ಲಿ ದಾಖಲಿಸಿದ್ದು, ಮತ್ತೂಬ್ಬ ಆರೋಪಿ ಹೇಮಂತ್‌ ಭಟ್‌, 2014ರ ನವೆಂಬರ್‌ನಿಂದ 2017ರ ಡಿಸೆಂಬರ್‌ವರೆಗೆ ಸಿಂಗಲ್‌ ವಿಂಡೋ ಆಪರೇಟರ್‌ ಆಗಿ ಸೇವೆ ಸಲ್ಲಿಸಿದ್ದರೆಂದು ಇದೇ ಎಫ್ಐಆರ್‌ನಲ್ಲಿ ಸಿಬಿಐ ಹೇಳಿದೆ.

ಮತ್ತೂಂದು ಎಫ್ಐಆರ್‌: ಏತನ್ಮಧ್ಯೆ, 11,400 ಕೋಟಿ ರೂ. ಮೊತ್ತದ ಪಿಎನ್‌ಬಿ ಹಗರಣದಲ್ಲಿ, 143 ಎಲ್‌ಒಯು (ಪಿಎನ್‌ಬಿ ಬ್ಯಾಂಕಿನ ಅಧಿಕೃತ ಖಾತ್ರಿ ಪತ್ರ) ಬಳಸಿ  ಪ್ರಕ ರಣದ ಮತ್ತೂಬ್ಬ ಪ್ರಮುಖ ಆರೋಪಿ ಮೆಹುಲ್‌ ಚೋಕ್ಸಿ ಒಡೆತನದ ಗೀತಾಂಜಲಿ ಜ್ಯುವೆಲರ್ಸ್‌, ನಕ್ಷತ್ರ ಡೈಮಂಡ್ಸ್‌ ಹಾಗೂ ಗಿಲಿ ವಜ್ರಾಭರಣ ಕಂಪೆನಿಗಳಿಗೆ 4,886 ಕೋಟಿ ರೂ.ಗಳನ್ನು ಅಕ್ರಮವಾಗಿ ನೀಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.

ಸಿವಿಸಿಯಿಂದಲೂ ತನಿಖೆ: ಈಗಾಗಲೇ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಸೆಬಿ ತನಿಖೆ ಆರಂಭಿಸಿದ್ದು, ಈಗ, ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸಹ ತನಿಖೆಗೆ ಕೈ ಹಾಕಿದೆ. ಜಾರಿ ನಿರ್ದೇಶನಾಲಯದ ದಾಳಿ ಮುಂದುವರಿದಿದ್ದು, ಶನಿವಾರ 25 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ಜಪ್ತಿ ಮಾಡಿದೆ.

ಬಂಧಿತರಲ್ಲಿ ಕರ್ನಾಟಕ ಮೂಲದ ಮಾಜಿ ಬ್ಯಾಂಕ್‌ ಅಧಿಕಾರಿ
ಪಿಎನ್‌ಬಿ ಬ್ಯಾಂಕ್‌ ಉದ್ಯೋಗಿ, ನೀರವ್‌ನ ಅಧಿಕೃತ ಸಹಿದಾರ ಕೂಡ ವಶಕ್ಕೆ
ಮಾ.3ರ ವರೆಗೆ ಆರೋಪಿಗಳನ್ನು ಸಿಬಿಐ ವಶಕ್ಕೊಪ್ಪಿಸಿದ ನ್ಯಾಯಾಲಯ

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.