ಭಾರೀ ವೇಶ್ಯಾವಾಟಿಕೆ ಜಾಲ:ಏಕಕಾಲದಲ್ಲಿ 91 ಮಹಿಳೆಯರ ಬಂಧನ!
Team Udayavani, Mar 23, 2017, 4:06 PM IST
ನಾಗ್ಪುರ : ನಗರದ ಗಲ್ಲಿಯೊಂದರಲ್ಲಿ ನಡೆಯುತ್ತಿದ್ದ ಭಾರೀ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ ನಡೆಸಿದ ಪೊಲೀಸರು ಏಕಕಾಲಕ್ಕೆ 91 ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಭಾರೀ ದಂಧೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರ ತಂಡ ಭಾರೀ ಕಾರ್ಯಾಚರಣೆಗಿಳಿದು ವೇಶ್ಯಾವಾಟಿಕೆ ನಿರತ ಮಹಿಳೆಯರು ಮತ್ತು 45 ಮಂದಿ ಪುರುಷರನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದಿರುವವರ ಪೈಕಿ 18 ರಿಂದ 60 ವರ್ಷದ ಮಹಿಳೆಯರು ಸೇರಿದ್ದಾರೆ, ಯಾರೊಬ್ಬರು ಅಪ್ರಾಪ್ತ ವಯಸ್ಕರಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಲ್ಲಿ ಗಲ್ಲಿಗಳಲ್ಲಿ ದಾಳಿ ನಡೆಸಲಾಗಿದ್ದು, ಪೊಲೀಸರು ಇಂಚಿಂಚೂ ಶೋಧ ನಡೆಸಿದ್ದಾರೆ. ಈ ವೇಳೆ 6 ಅಡಿ ಆಳದಲ್ಲಿ ಕೋಣೆಗಳನ್ನು ನಿರ್ಮಿಸಿರುವುದು ಪತ್ತೆಯಾಗಿದೆ. 2 ಗುಪ್ತ ಸ್ಥಳದಲ್ಲಿ ಅಡಗಿದ್ದ 10 ಯುವತಿಯರನ್ನು ಕಾರ್ಯಾಚರಣೆಯ ಕೊನೆಯಲ್ಲಿ ಹೊರ ಕರೆತರಲಾಗಿದೆ.