ಇಡೀ ಜಿಲ್ಲೆಯ ವಿದ್ಯುತ್‌ ಬಿಲ್‌ ಈತನೊಬ್ಬನಿಗೇ ಬಂದಿತ್ತು !

Team Udayavani, Jul 21, 2019, 10:08 AM IST

ಹಾಪುರ್:‌ ಉತ್ತರ ಪ್ರದೇಶದ ಹಾಪುರ್‌ ಜಿಲ್ಲೆಯ ಚಾಮ್ರಿಯ ನಿವಾಸಿಯೊಬ್ಬನಿಗೆ ಬಂದ ವಿದ್ಯುತ್‌ ಬಿಲ್‌ ಎಷ್ಟೊಂದು ನೀವು ಕೇಳಿದರೆ ನಿಮಗೆ ಶಾಕ್‌ ಆಗಬಹುದು. ಇಡೀ ಜಿಲ್ಲೆಯ ವಿದ್ಯುತ್‌ ಬಿಲ್‌ ಒಬ್ಬನಿಗೇ ಬಂದಾಗ ಆತನಿಗೆ ನಿಜಕ್ಕೂ ಕರೆಂಟ್‌ ಶಾಕ್‌ ಹೊಡೆದ ಅನುಭವ. ಅಷ್ಟಕ್ಕೂ ಆತನಿಗೆ ಬಂದ ಬಿಲ್‌ ಎಷ್ಟು ಗೊತ್ತಾ ? ಬರೋಬ್ಬರಿ 1.28 ಕೋಟಿ.

ಹೌದು, ಚಾಮ್ರಿ ಗ್ರಾಮದ ನಿವಾಸಿಯಾದ ಶಮೀಮ್‌ ಎಂಬವರಿಗೆ ಇಷ್ಟು ಮೊತ್ತದ ವಿದ್ಯುತ್‌ ಬಿಲ್‌ ಬಂದಿರುವುದು. “ನಾವು ಬಡವರು. ನಮ್ಮ ಮನೆಯಲ್ಲಿ ಬಳಕೆ ಮಾಡುವುದು ಬಲ್ಬ್‌ ಮತ್ತು ಫ್ಯಾನ್‌ ಮಾತ್ರ. ಅಷ್ಟಕ್ಕೇ ಇಷ್ಟು ಬಿಲ್‌ ಹೇಗೆ ಬರುತ್ತದೆ ? ನಮಗೆ ಇಷ್ಟೊಂದು ಪ್ರಮಾಣದ ಬಿಲ್‌ ಕಟ್ಟಲು ಸಾಧ್ಯವಿಲ್ಲ” ಎಂದು ಶಮೀಮ್ ಬೇಸರ ವ್ಯಕ್ತಪಡಿಸಿದ್ದಾರೆ.‌

ವಿಪರ್ಯಾಸವೆಂದರೆ, ಶಮೀಮ್‌ ಬಿಲ್‌ ಪಾವತಿಸಿಲ್ಲ ಎಂಬ ಕಾರಣಕ್ಕೆ ಆತನ ಮನೆಯ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸಿದೆ. “ನಮ್ಮ ಅಳಲನ್ನು ಯಾರೂ ಕೇಳುತ್ತಿಲ್ಲ. ನಾವು ಹಣ ಪಾವತಿ ಮಾಡದೇ ನಮಗೆ ಮತ್ತೆ ವಿದ್ಯುತ್‌ ಸಂಪರ್ಕ ಮಾಡುವುದಿಲ್ಲ” ಎನ್ನುತ್ತಿದ್ದಾರೆ ಶಮೀಮ್.‌

“ಇದು ತಾಂತ್ರಿಕ ದೋಷದಿಂದಾದ ಪ್ರಮಾದ. ಅವರು ನಮಗೆ ಬಿಲ್‌ ಪ್ರತಿಯನ್ನು ತಂದು ಕೊಟ್ಟರೆ ನಾವು ಸರಿಪಡಿಸುತ್ತೇವೆ “ಎಂದು ಇಲೆಕ್ಟ್ರಿಕಲ್‌ ಇಂಜಿನಿಯರ್‌ ರಾಮ್‌ ಶರಣ್‌, ಶಮೀಮ್‌ ಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ