ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕೊನೆಯುಸಿರೆಳೆದ ಒಡಿಶಾ ಖ್ಯಾತ ಗಾಯಕ ಮಹಾಪಾತ್ರ
ಮುರಳಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ.
Team Udayavani, Oct 4, 2022, 1:46 PM IST
ಭುವನೇಶ್ವರ್: ದುರ್ಗಾ ಪೂಜೆಯ ಕಾರ್ಯಕ್ರಮದ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಜನಪ್ರಿಯ ಒಡಿಶಾ ಗಾಯಕ ಮುರಳಿ ಮಹಾಪಾತ್ರ ಅವರು ಸಾವನ್ನಪ್ಪಿರುವ ಘಟನೆ ಕೋರಾಪುಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಚಿಂತಾಜನಕ; ಐಸಿಯುನಲ್ಲಿ ಚಿಕಿತ್ಸೆ
ಕಾರ್ಯಕ್ರಮದಲ್ಲಿ ಕೆಲವು ಹಾಡುಗಳನ್ನು ಹಾಡಿದ್ದ ಮುರಳಿ ಮಹಾಪಾತ್ರ ಅವರು ದಿಢೀರನೆ ವೇದಿಕೆ ಮೇಲಿದ್ದ ಕುರ್ಚಿಯ ಮೇಲೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಮುರಳಿ ಮಹಾಪಾತ್ರ (59ವರ್ಷ) ಅವರು ಹೃದಯಾಘಾತದಿಂದ ವೇದಿಕೆಯಲ್ಲೇ ಸಾವನ್ನಪ್ಪಿರುವುದಾಗಿ ಅವರ ಸಹೋದರ ವಿಭೂತಿ ಪ್ರಸಾದ್ ಮಹಾಪಾತ್ರ ತಿಳಿಸಿದ್ದರು. ಮುರಳಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ.
ದಿವಂಗತ ಒಡಿಯಾ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಜೇಪೋರ್ ಅಕ್ಷಯ ಮೊಹಾಂತಿ ಅವರ ಸಂಗೀತದ ಶೈಲಿಯನ್ನು ಮುರಳಿ ಅವರು ಅನುಕರಿಸುತ್ತಿದ್ದುದರಿಂದ “ಜೇಪೋರ್ ನ ಅಕ್ಷಯ್ ಮೊಹಾಂತಿ” ಎಂದು ಕರೆಯಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊದಲ ರಾತ್ರಿಯ ಫೋಟೋ, ವಿಡಿಯೋ ಅಪ್ ಲೋಡ್ ಮಾಡಿದ ಜೋಡಿಗೆ ನೆಟ್ಟಿಗರ ಶಾಸ್ತಿ
ದೆಹಲಿ ಅಬಕಾರಿ ನೀತಿ: ಮತ್ತೂಬ್ಬನ ಬಂಧನ
ಮೊಬೈಲ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್
ಊಟದ ತಟ್ಟೆ ವಿಚಾರ: ಮದುವೆ ಸಮಾರಂಭದಲ್ಲೇ ವ್ಯಕ್ತಿಯ ಕೊಲೆಗೈದ ಮ್ಯೂಸಿಕ್ ಬ್ಯಾಂಡ್ ಸಿಬ್ಬಂದಿ
ಒಂದು ವೇಳೆ ಕಾಂಗ್ರೆಸ್, ಸಿಪಿಐಎಂ ಅಧಿಕಾರದಲ್ಲಿದ್ದಿದ್ದರೆ…ತ್ರಿಪುರಾದಲ್ಲಿ ಸಿಎಂ ಯೋಗಿ …