27.68 ಲಕ್ಷ ರೂ ದಂಡ ತೆತ್ತ ಪೋರ್ಷೆ ಕಾರು ಮಾಲಕ!
Team Udayavani, Jan 9, 2020, 12:46 PM IST
ಅಹಮದಾಬಾದ್: ದುಬಾರಿ ಬೆಲೆಯ ಪೋರ್ಷೆ ಕಾರಿನ ಒಡೆಯನೊಬ್ಬನಿಗೆ ಪೊಲೀಸರು ಬರೋಬ್ಬರಿ 27.68 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.
ಪೋರ್ಷೆ ಕಾರು ಮಾಲಕ ರಂಜಿತ್ ದೇಸಾಯಿ ದೇಶದ ಅತೀ ಹೆಚ್ಚಿನ ಮೊತ್ತದ ದಂಡ ಪಾವತಿ ಮಾಡಿದವರು. ಈ ಹಿಂದೆ ವಾಹನ ತಪಾಸಣೆ ಸಡೆಸುತ್ತಿದ್ದ ಸಂದರ್ಭ ಪೊಲೀಸರು ರಂಜಿತ್ ದೇಸಾಯಿಗೆ 9 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಯಾಕೆಂದರೆ ಕಾರಿಗೆ ನಂಬರ್ ಪ್ಲೇಟ್ ಸೇರಿದಂತೆ ಯಾವುದೇ ದಾಖಲೆಗಳಿರಲಿಲ್ಲ.
ಇತ್ತೀಚೆಗೆ ದಾಖಲೆ ಪಡೆಯುವ ಸಲುವಾಗಿ ಮತ್ತು ದಂಡ ಕಟ್ಟಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ತೆರಳಿದ ರಂಜಿತ್ ದೇಸಾಯಿ ಒಟ್ಟು 27.68 ಲಕ್ಷ ರೂ ಪಾವತಿಸಿದ್ದಾರೆ. ದಂಡ ಪಾವತಿಸುವಲ್ಲಿ ವಿಳಂಬವಾದ ಕಾರಣ 12 ಲಕ್ಷ ರೂಪಾಯಿ ಮತ್ತು ಉಳಿದ ಹಣ ರಸ್ತೆ ತೆರಿಗೆ , ವಾಹನ ನೋಂದಣಿ ಮತ್ತು ಇತರ ತೆರಿಗೆಗಳು ಸೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಂಜಿತ್ ದೇಸಾಯಿ 2.38 ಕೋಟಿ ರೂಪಾಯಿ ಬೆಲೆಯ ಪೋರ್ಷೆ 911 ಸ್ಪೋರ್ಟ್ಸ್ ಕಾರನ್ನು ಹೊಂದಿದ್ದು, 2017ರಿಂದ ದಾಖಲೆಯಿಲ್ಲದೆ ಓಡಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?