Udayavni Special

ಕೆಲಸವಿಲ್ಲದೆ 2 ಲಕ್ಷ ವೇತನ


Team Udayavani, Aug 14, 2018, 6:00 AM IST

18.jpg

ಹೊಸದಿಲ್ಲಿ: ಕರ್ನಾಟಕದ ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ)ಯಲ್ಲಿ ನೌಕರರು ಯಾವುದೇ ಕೆಲಸ ಮಾಡದೆ ಪ್ರತಿ ತಿಂಗಳು 2.5 ಲಕ್ಷ ರೂ. ಸಂಬಳ ತೆಗೆದುಕೊಳ್ಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮಂಡಳಿ ಹೊಸ ಅಧ್ಯಕ್ಷ ಎಂ.ಟಿ.ಕೃಷ್ಣ ಬಾಬು ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಸಭೆಯ ವೇಳೆ ಈ ಅಂಶ ಗೊತ್ತಾಗಿದೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

2009ರಲ್ಲಿ ಎನ್‌ಎಂಪಿಟಿಯಲ್ಲಿ ಕಾರ್ಗೊ ಹಡಗುಗಳಿಂದ ಸರಕುಗಳನ್ನು ಕ್ಷಿಪ್ರವಾಗಿ ಇಳಿಕೆ ಮಾಡುವ ಹಾರ್ಬರ್‌ ಮಷಿನ್‌ ಕ್ರೇನ್‌ (ಎಚ್‌ಎಂಸಿ) ವ್ಯವಸ್ಥೆ ನಿರ್ವಹಿಸಲು ಕೆಲಸಗಾರರಿಗೆ ಹೆಚ್ಚಿನ ಮೊತ್ತದ ಸಂಭಾವನೆ ನೀಡಲಾಗಿತ್ತು. ಹೀಗಾಗಿ, ವರ್ತಕರು ಬೇರೆ ಬಂದರಿಗೆ ತೆರಳುವ ನಿರ್ಧಾರವನ್ನು ತನ್ನ ಜತೆಗೆ ಹೇಳಿದ್ದಾಗಿ ಮಂಡಳಿ ಅಧ್ಯಕ್ಷ ಎಂ.ಟಿ.ಕೃಷ್ಣ ಬಾಬು ಹೇಳಿದ್ದಾರೆ. 

ಕೃಷ್ಣ ಬಾಬು  ಹೇಳಿದ ಪ್ರಕಾರ ಪ್ರತಿ ಪಾಳಿ (ಶಿಫ್ಟ್)ಯಲ್ಲಿ 10 ಮಂದಿ ಎಚ್‌ಎಂಸಿ ನಿರ್ವಹಣೆಗೆ ನಿಯೋಜಿತರಾಗಿದ್ದಾರೆ. ಕೆಲಸವಿಲ್ಲದಿದ್ದರೂ ಉದ್ಯೋಗಿಗಳನ್ನು ನಿಯೋಜಿಸಲಾಗುತ್ತದೆ. ಅವರಿಗೆ ಪ್ರತಿ ತಿಂಗಳಿಗೆ 60 ಸಾವಿರ ರೂ.ಗಳಿಂದ 80 ಸಾವಿರ ರೂ. ವರೆಗೆ ಸಂಬಳ ನೀಡಲಾಗುತ್ತದೆ. ಸರಕುಗಳನ್ನು ಹಡಗುಗಳಿಗೆ ತುಂಬಿಸಲು ಮತ್ತು ಅಲ್ಲಿಂದ ತೆಗೆಯಲು ಕೆಲಸಗಾರರಿಗೆ ಪ್ರತಿ ಟನ್‌ಗೆ 3 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಕುತೂಹಲಕಾರಿ ಅಂಶವೆಂದರೆ ಒಂದು ರೂಪಾಯಿ ಮೂವತ್ತು ಪೈಸೆಯನ್ನು ಚೆಕ್‌ ಮೂಲಕ  ನೀಡಿದರೆ, ಬಾಕಿ ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಆ.1ರಿಂದ ಈ ವ್ಯವಸ್ಥೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿಲ್ಲ’ ಎಂದು ಹೇಳಿದ್ದಾರೆ.

ಎನ್‌ಎಂಪಿಟಿಯಲ್ಲಿನ ವ್ಯವಸ್ಥೆ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ  ದೇಶದ ಇತರ 11 ಪ್ರಮುಖ ಬಂದರು ಮಂಡಳಿಗಳಲ್ಲಿ ಅದೇ ರೀತಿಯ ವ್ಯವಸ್ಥೆ ಮುಂದುವರಿದೆಯೇ ಎಂದು ಪರಿಶೀಲಿಸಲು ಹಡಗು ಯಾನ ಖಾತೆ ಸಚಿವಾಲಯ ನಿರ್ದೇಶನ ನೀಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಕಣಿವೆ ಪ್ರದೇಶದಲ್ಲಿ ತಗ್ಗಿದ ಉಗ್ರ ಚಟುವಟಿಕೆ

ಕಣಿವೆ ಪ್ರದೇಶದಲ್ಲಿ ತಗ್ಗಿದ ಉಗ್ರ ಚಟುವಟಿಕೆ

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಕೊಡಗು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ದ.ಕ. ಜಿಲ್ಲೆ: 7 ಸಾವು, 217 ಮಂದಿಗೆ ಪಾಸಿಟಿವ್‌

ದ.ಕ. ಜಿಲ್ಲೆ: 7 ಸಾವು, 217 ಮಂದಿಗೆ ಪಾಸಿಟಿವ್‌

ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ

ವಿವಿಧೆಡೆ ಮಾಸ್ಕ್ ಧರಿಸದವರಿಗೆ ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.