ಪಶ್ಚಿಮ ಬಂಗಾಳದ ಬರ್ಧಮನ್ ರೈಲ್ವೆ ನಿಲ್ದಾಣ ಕಟ್ಟಡದ ಭಾಗ ಕುಸಿತ: ಹಲವರಿಗೆ ಗಾಯ
Team Udayavani, Jan 4, 2020, 10:00 PM IST
ಕೋಲ್ಕತಾ: ಪಶ್ಚಿಮ ಬಂಗಾಳದ ಬರ್ಧಾಮನ್ ರೈಲ್ವೆ ನಿಲ್ದಾಣದಲ್ಲಿರುವ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಇಬ್ಬರು ಗಾಯಗೊಂಡು
ಇನ್ನೂ ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂರ್ವ ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.
“ಬರ್ಧಾಮನ್ನಲ್ಲಿನ ನಿಲ್ದಾಣದ ಕಟ್ಟಡದ ಭಾಗವು ಶನಿವಾರ ರಾತ್ರಿ 8.10ರ ಸಮಯ ಕುಸಿದಿದ್ದು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯಿತ್ತಿದೆ.
ಬರ್ಧಾಮನ್ ರೈಲ್ವೆ ನಿಲ್ದಾಣವು ಕೋಲ್ಕತ್ತಾದಿಂದ 95 ಕಿ.ಮೀ ದೂರದಲ್ಲಿರುವ ಹೌರಾ-ನವದೆಹಲಿ ಸಂಚರಿಸುವ ಮಾರ್ಗದಲ್ಲಿದೆ.