ಕರ್ಕರೆ ಸಾವಿನ ಹೇಳಿಕೆ ನೀಡಿದ್ದ ಪ್ರಜ್ಞಾ ಠಾಕೂರ್‌ಗೆ ಚು. ಆಯೋಗದ ನೊಟೀಸ್‌

Team Udayavani, Apr 20, 2019, 3:42 PM IST

ಭೋಪಾಲ : 26/11ರ ಮುಂಬಯಿ ಉಗ್ರ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದ ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಸಾವಿಗೆ ನನ್ನ ಶಾಪವೇ ಕಾರಣ ಎಂದು ಹೇಳಿ ವಿವಾದ ಸೃಷ್ಟಿಸಿರುವ ಮಾಲೆಗಾಂವ್‌ ಬ್ಲಾಸ್ಟ್‌ ಆರೋಪಿ ಮತ್ತು ಭೋಪಾಲದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಚುನಾವಣಾ ಆಯೋಗ ನೊಟೀಸ್‌ ಜಾರಿ ಮಾಡಲಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಮೊನ್ನೆ ಗುರುವಾರ ಬೋಪಾಲ್‌ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು “ನನಗೆ ಚಿತ್ರಹಿಂಸೆ ನೀಡಿದ್ದ ಕರ್ಕರೆ ಮುಂಬಯಿ ಉಗ್ರ ದಾಳಿಯ ವೇಳೆ ಸಾಯಲು ನನ್ನ ಶಾಪವೇ ಕಾರಣ’ ಎಂದು ಹೇಳಿದ್ದರು.

ಆದರೆ ತನ್ನ ಈ ಹೇಳಿಕೆ ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಗುರಿಯಾಗುತ್ತಿದ್ದಂತೆಯೇ ಆಕೆ ನಿನ್ನೆ ಶುಕ್ರವಾರ ಕ್ಷಮೆಯಾಚಿಸಿದ್ದರು.

“ಪ್ರಜ್ಞಾ ಸಿಂಗ್‌ ಠಾಕೂರ್‌ ಅವರ ಈ ಹೇಳಿಕೆಯನ್ನು ನಾವು ಸ್ವಪ್ರೇರಿತವಾಗಿ ಪರಿಗಣಿಸಿ ಆ ಬಗ್ಗೆ ಸಹಾಯಕ ನಿರ್ವಚನ ಅಧಿಕಾರಿಯಿಂದ ವರದಿ ಕೇಳಿದ್ದೇವೆ. ಇವತ್ತು ಶನಿವಾರ ಬೆಳಗ್ಗೆ ನಮಗೆ ವರದಿ ಸಿಕ್ಕಿದೆ ಮತ್ತು ನಾವು ಈ ಬಗ್ಗೆ ನೊಟೀಸ್‌ ಜಾರಿ ಮಾಡಲಿದ್ದೇವೆ.  ಕಾರ್ಯಕ್ರಮ ಸಂಘಟಕರು ಮತ್ತು ಹೇಳಿಕೆ ನೀಡಿದವರು 24 ತಾಸುಗಳ ಒಳಗೆ ಆದಕ್ಕೆ ಉತ್ತರಿಸಬೇಕಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಭೋಪಾಲ ಜಿಲ್ಲಾಧಿಕಾರಿ ಸುಧಾಮ್‌ ಖಡೆ ತಿಳಿಸಿದ್ದಾರೆ.

ನಾವು ಎಆರ್‌ಓ ವರದಿಯನ್ನು ಚುನಾವಣಾ ಆಯುಕ್ತರಿಗೆ ಕಳಿಸಲಿದ್ದೇವೆ ಎಂದವರು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೈದ್ರಾಬಾದ್ : ಬಲಿದಾನದ ದ್ಯೋತಕವಾಗಿ ಮುಸ್ಲಿಂ ಸಮುದಾಯದವರು ಆಚರಿಸುವ ಈದ್–ಉಲ್–ಅದಾ ಅಥವಾ ಬಕ್ರ್–ಈದ್ ಸಂದರ್ಭದಲ್ಲಿ ಗೋವಿನ ಹತ್ಯೆಯನ್ನು ಸ್ವಯಂಪ್ರೇರಿತರಾಗಿ...

  • ನವದೆಹಲಿ: ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ವಾಯು ಯಾನವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳಿಗೆ ಬದಲೀ ಉದ್ಯೋಗ ಕಂಡುಕೊಳ್ಳಲು...

  • ಹೊಸದಿಲ್ಲಿ: ಎಸ್‌ಪಿ ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದ ಮಾಜಿ ಪ್ರಧಾನಿ ದಿ| ಚಂದ್ರಶೇಖರ್‌ ಪುತ್ರ ನೀರಜ್‌ ಶೇಖರ್‌ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ....

  • ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶ ಪ್ರವೇಶಿಸದಂತೆ ವಿಧಿಸಿದ್ದ ನಿರ್ಬಂಧವನ್ನು ಪಾಕಿಸ್ಥಾನ ಹಿಂಪಡೆದಿದೆ. ಬಾಲಕೋಟ್‌...

  • ಹೊಸದಿಲ್ಲಿ: ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಇದೇ ವರ್ಷ ಫೆ. 1ರಂದು ಮಿರಾಜ್‌ 2000 ವಿಮಾನದ ಹಾರಾಟದ ವೇಳೆ ಉಂಟಾದ ಅವಘಡದಲ್ಲಿ ಹುತಾತ್ಮರಾಗಿದ್ದ ಐಎಎಫ್...

ಹೊಸ ಸೇರ್ಪಡೆ