ಗುಜರಾತ್, ಹಿಮಾಚಲದಲ್ಲೂ ಕಾಂಗ್ರೆಸ್ ಸೋಲು ಖಚಿತ: ಪ್ರಶಾಂತ್ ಕಿಶೋರ್
ಕಾಂಗ್ರೆಸ್ ಚಿಂತನ ಶಿಬಿರ ಸಂಪೂರ್ಣ ವಿಫಲ
Team Udayavani, May 20, 2022, 7:56 PM IST
ನವದೆಹಲಿ: ಇತ್ತೀಚೆಗಷ್ಟೇ “ಕೈ’ ಹಿಡಿಯಲೆಂದು ಕಾಂಗ್ರೆಸ್‌ನ ಹೊಸ್ತಿಲಿಗೆ ಹೋಗಿ ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ್ದ ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್ ಕಿಶೋರ್, ಈಗ ರಾಜಸ್ಥಾನದಲ್ಲಿ ನಡೆದ ಪಕ್ಷದ ಚಿಂತನ ಶಿಬಿರದ ಬಗ್ಗೆ ಲೇವಡಿ ಮಾಡಿದ್ದಾರೆ.
ಜತೆಗೆ, ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ಖಚಿತ ಎಂದು ಹೇಳುವ ಮೂಲಕ ಪಕ್ಷದ ನಾಯಕರ ಕಾಲೆಳೆದಿದ್ದಾರೆ.
ಉದಯಪುರ ಚಿಂತನ ಶಿಬಿರದ ಪರಿಣಾಮವೇನಾಯಿತು ಎಂದು ಎಲ್ಲರೂ ಪ್ರಶ್ನಿಸುತ್ತಿರುವುದಕ್ಕೆ ಉತ್ತರವಾಗಿ ತಾವು ಈ ಪ್ರತಿಕ್ರಿಯೆ ನೀಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. “ಚಿಂತನ ಶಿಬಿರವು ಸಂಪೂರ್ಣ ವಿಫಲವಾಗಿದೆ. ಅರ್ಥಪೂರ್ಣವಾದ ಏನನ್ನೂ ಅಲ್ಲಿ ಸಾಧಿಸಲಾಗಿಲ್ಲ.
ಇದನ್ನೂ ಓದಿ:ಚಿತ್ರಾ ರಾಮಕೃಷ್ಣ ಕೇಸ್: ಸಿಬಿಐಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್
ಪಕ್ಷದ ಯಥಾಸ್ಥಿತಿ ಮುಂದುವರಿದಿದ್ದು, ಕಾಂಗ್ರೆಸ್ ನಾಯಕತ್ವಕ್ಕೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಹೀನಾಯ ಸೋಲಿನವರೆಗೂ ಕಾಲಾವಕಾಶ ಸಿಕ್ಕಿದೆ’ ಎಂದು ಪ್ರಶಾಂತ್ ಕಿಶೋರ್ ಬರೆದುಕೊಂಡಿದ್ದಾರೆ.