ಯುವ ಸೈಕ್ಲಿಸ್ಟ್‌ಗೆ ರೇಸಿಂಗ್ ಸೈಕಲ್ ನೀಡಿದ ರಾಷ್ಟ್ರಪತಿ
Team Udayavani, Aug 1, 2020, 8:47 AM IST
ರಾಷ್ಟ್ರಪತಿ ರಾಮನಾಥ ಕೋವಿಂದ್, ಪತ್ನಿ ಸವಿತಾ ಕೋವಿಂದ್ ಅವರು ರಿಯಾಜ್‌ಗೆ ರೇಸಿಂಗ್ ಸೈಕಲ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದು.
ಹೊಸದಿಲ್ಲಿ: ಬಡತನದ ನಡುವೆಯೂ ಶಿಕ್ಷಣದ ಜೊತೆಗೆ ಸೈಕ್ಲಿಂಗ್‌ನಲ್ಲಿ ಸಾಧನೆ ತೋರಿದ್ದ ಬಾಲಕನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರೇಸಿಂಗ್ ಬೈಸಿಕಲ್ ಅನ್ನು ಈದ್ ಪ್ರಯುಕ್ತ ಕೊಡುಗೆಯಾಗಿ ನೀಡಿದ್ದಾರೆ. ಹೊಸದಿಲ್ಲಿಯ ಸರ್ವೋದಯ ಬಾಲ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿರುವ ರಿಯಾಜ್, ಸೈಕಲ್ ಖರೀದಿಸಲು ಹಣವಿಲ್ಲದ ಕಾರಣ ಸೈಕಲ್ ಬಾಡಿಗೆ ಪಡೆದು ಹಲವು ಶಾಲಾ ಹಾಗೂ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ವಿಜೇತನಾಗಿದ್ದನು.
ಈತನ ಪೋಷಕರು ಬಿಹಾರದವರಾಗಿದ್ದು, ಬಡತನದ ಕಾರಣ ರಿಯಾಜ್ ಬಿಡುವಿನ ವೇಳೆಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ಶಿಕ್ಷಣ ಪಡೆಯುತ್ತಿದ್ದನು. ರಿಯಾಜ್ ಸ್ವಂತ ಸೈಕಲ್ ಇಲ್ಲದಿದ್ದರೂ ನ್ಪೋರ್ಟ್ಸ್ ಸೈಕಲ್ ಬಾಡಿಗೆ ಪಡೆದು ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದನು. ರಿಯಾಜ್‌ನ ಪರಿಶ್ರಮ, ಸಾಧನೆ ಯನ್ನು ಕಂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು ಆತನಿಗೆ ರೇಸಿಂಗ್ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.