ವಿಶ್ವ ಆಯುರ್ವೇದ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ: ಗೋವಾ ಸಿಎಂ
Team Udayavani, Dec 6, 2022, 4:38 PM IST
ಪಣಜಿ: ಡಿಸೆಂಬರ್ 8 ರಿಂದ 11 ರವರೆಗೆ ಪಣಜಿಯಲ್ಲಿ ನಡೆಯುತ್ತಿರುವ ವಿಶ್ವ ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆ ಹಾಗೂ ಇನ್ನೆರಡು ಸಂಸ್ಥೆಗಳನ್ನು ಪ್ರಧಾನಮಂತ್ರಿಯವರು ವರ್ಚುವಲ್ ರೀತಿಯಲ್ಲಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಉತ್ತರ ಪ್ರದೇಶದಲ್ಲಿ ಘಾಜಿಯಾಬಾದ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ ಮತ್ತು ದೆಹಲಿಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೋಮಿಯೋಪತಿ ಎಂಬ ಎರಡು ಸಂಸ್ಥೆಗಳನ್ನು ಪ್ರಧಾನಿಯವರು ಒಂದೇ ದಿನ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು 50 ಎಕರೆ ಜಾಗದಲ್ಲಿ 302 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 210 ಸ್ನಾತಕ ಮತ್ತು 56 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯುರ್ವೇದ ಅಧ್ಯಯನಕ್ಕೆ ಸೌಲಭ್ಯ ಕಲ್ಪಿಸಲಾಗುವುದು. ವಿಶ್ವ ಆಯುರ್ವೇದ ಕಾಂಗ್ರೆಸ್ ಕಲಾ ಅಕಾಡೆಮಿ, ದರ್ಬಾರ್ ಹಾಲ್ ರಾಜಭವನ, ಬಂದೋಡ್ಕರ್ ಸ್ಟೇಡಿಯಂ, ಐನಾಕ್ಸ್ ಕಾಂಪ್ಲೆಕ್ಸ್, ಎನ್‍ಐಒ ಆಡಿಟೋರಿಯಂನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಲ್ಲಿಯವರೆಗೆ 5 ಸಾವಿರ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 30 ದೇಶಗಳಿಂದ 250 ವಿದೇಶಿ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ. 150 ಉಪನ್ಯಾಸಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಅಲ್ಲದೆ 450 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕುರುಗೋಡು: ದೇಶದ ಅಖಂಡತೆಗೆ ಅಂಬೇಡ್ಕರ್ ಸೇವೆ ಅನನ್ಯ: ಟಿ. ಮುದಿಯಪ್ಪ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳಾ ಅಧಿಕಾರಿಯಿಂದ ಡಾಕ್ಟರ್ ಗೆ ಮಸಾಜ್! ಫೋಟೊ- ವಿಡಿಯೋ ವೈರಲ್
ದುರಂತ ಅಂತ್ಯ:ನ್ಯೂಮೋನಿಯಾಕ್ಕೆ ಕಾದ ರಾಡ್ ನಿಂದ 3ತಿಂಗಳ ಹಸುಳೆಗೆ 51 ಬಾರಿ ಚುಚ್ಚಿ ಚಿಕಿತ್ಸೆ
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR
ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ಸಿಆರ್ ಪಿಎಫ್ ಜವಾನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಮಹಿಳಾ ಅಧಿಕಾರಿಯಿಂದ ಡಾಕ್ಟರ್ ಗೆ ಮಸಾಜ್! ಫೋಟೊ- ವಿಡಿಯೋ ವೈರಲ್
ದುರಂತ ಅಂತ್ಯ:ನ್ಯೂಮೋನಿಯಾಕ್ಕೆ ಕಾದ ರಾಡ್ ನಿಂದ 3ತಿಂಗಳ ಹಸುಳೆಗೆ 51 ಬಾರಿ ಚುಚ್ಚಿ ಚಿಕಿತ್ಸೆ
ಬೆಂಗಳೂರಲ್ಲಿ ಮಲಯಾಳಂನ “ಕೋಲ್ಡ್ ಕೇಸ್” ಸಿನೆಮಾ ಹೋಲುವ ಪ್ರಕರಣ
ಹಿಟ್ & ರನ್’ಗೆ ಇಬ್ಬರ ಬಲಿ ಪ್ರಕರಣ! ‘ಮ್ಯಾಡ್ ಇನ್ ಕುಡ್ಲ’ ಕಾಮಿಡಿಯನ್ ಅರ್ಪಿತ್ ಬಂಧನ
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR