ಇಂದು ಮೋದಿ ಹುಟ್ಟುಹಬ್ಬ: ತಾಯಿ ಆಶೀರ್ವಾದ ಬಳಿಕ ಸರ್ಧಾರ್ ಸರೋವರ್ ಗೆ ಭೇಟಿ
Team Udayavani, Sep 17, 2019, 12:23 AM IST
ಹೊಸದಿಲ್ಲಿ: ಇಂದು ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್ ಗೆ ಸೋಮವಾರ ರಾತ್ರಿ ಆಗಮಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.
ಆ ಬಳಿಕ ಪ್ರಧಾನಿ ಮೋದಿ ಅವರು ಸರ್ಧಾರ್ ಸರೋವರ್ ಡ್ಯಾಮ್ ಅನ್ನು ವೀಕ್ಷಿಸಲಿದ್ದಾರೆ. ಸರ್ಧಾರ್ ಸರೋವರ್ ಡ್ಯಾಂ ಮುಂಗಾರಿಗೆ ಮೈದುಂಬಿ ಸಮೃದ್ಧವಾಗಿದೆ. ಪ್ರಧಾನಿ ಭೇಟಿಯ ಹಿನ್ನಲೆಯಲ್ಲಿ ಡ್ಯಾಂ ಸುತ್ತಲೂ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.
ಇನ್ನು ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಗುಜರಾತ್ ರಾಜ್ಯಾದ್ಯಂತ ಸೆ. 17ರಂದು ಸುಮಾರು 5000 ಕಾರ್ಯಕ್ರಮಗಳ ಮೂಲಕ ಮೋದಿ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
ನರೇಂದ್ರ ಮೋದಿ ಆ್ಯಪ್
ಮೋದಿ ಹುಟ್ಟು ಹಬ್ಬದ ಸಂದರ್ಭ ‘ನರೇಂದ್ರ ಮೋದಿ’ ಆ್ಯಪ್ ಅನ್ನು ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ. 2019ರ ಚುನಾವಣೆ ವೇಳೆ ಬಿಡುಗಡೆಯಾಗಿದ್ದ ಈ ಆ್ಯಪ್ ಅಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ತಮ್ಮ ಹುಟ್ಟುಹಬ್ಬಕ್ಕೆ ಪ್ರತಿಯೊಬ್ಬರಿಗೂ ವಿಶ್ ಮಾಡಲು ಅವಕಾಶ ನೀಡುವ ಫೀಚರ್ ಗಳನ್ನು ಸೇರಿಸಿಕೊಳ್ಳಲಾಗಿದೆ. ಸರಕಾರದ ಅಭಿವೃದ್ಧಿ ಕೆಲಸವನ್ನು ಈ ಆ್ಯಪ್ ನಲ್ಲಿ ಅಪ್ ಟು ಡೇಟ್ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!