ಪುಣೆಯ ನರ್ಸ್ ಗೆ ಪಿಎಂ ಮೋದಿ ಅಚ್ಚರಿಯ ಕರೆ ; ಸೋಂಕಿತರ ಸೇವೆಗಾಗಿ ಅಭಿನಂದನೆ

Team Udayavani, Mar 29, 2020, 5:54 AM IST

ಪುಣೆಯ ನರ್ಸ್ ಗೆ ಪಿಎಂ ಮೋದಿ ಅಚ್ಚರಿಯ ಕರೆ ; ಸೋಂಕಿತರ ಸೇವೆಗಾಗಿ ಅಭಿನಂದನೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಪುಣೆ: ದೇಶದಲ್ಲಿ ಕೋವಿಡ್ 19 ವೈರಸ್ ಕಾಣಿಸಿಕೊಂಡ ದಿನದಿಂದಲೂ ತಮ್ಮ ಸ್ಫೂರ್ತಿಯ ಮಾತುಗಳಿಂದ ದೇಶವಾಸಿಗಳಿಗೆ ಧೈರ್ಯ ತುಂಬುತ್ತಾ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಆರೋಗ್ಯ ವೀರರ ಶ್ರಮವನ್ನು ಶ್ಲಾಘಿಸಿದ್ದಾರೆ. ಪುಣೆಯಲ್ಲಿನ ನಾಯ್ಡು ಆಸ್ಪತ್ರೆಯಲ್ಲಿ ಸೋಂಕಿತರ ಸೇವೆಯಲ್ಲಿ ನಿರತರಾಗಿರುವ ಶುಶ್ರೂಶಕಿ ಛಾಯಾ ಮೊಬೈಲ್‌ಗೆ ಶುಕ್ರವಾರ ಪ್ರಧಾನಿ ಕಚೇರಿಯಿಂದ ಕರೆ ಬಂದಿದೆ.

ಅತ್ತಕಡೆಯಿಂದ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಆರಂಭದಲ್ಲಿ ಛಾಯಾ ಅವರ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಬಳಿಕ ರೋಗಿಗಳ ಆರೈಕೆ, ಕುಟುಂಬ ಸದಸ್ಯರು, ಅವರ ಆರೋಗ್ಯದ ಕುರಿತು ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕುಟುಂಬ ಸದಸ್ಯರು ನಿಮ್ಮ ಸುರಕ್ಷತೆ ಬಗ್ಗೆ ಆತಂಕಪಡುವುದಿಲ್ಲವೇ ಎಂಬ ಪ್ರಧಾನಿ ಪ್ರಶ್ನೆಗೆ ಉತ್ತರಿಸಿದ ಛಾಯಾ ಅವರು, ಆತಂಕ ಇಲ್ಲ ಎಂದಲ್ಲ. ಆದರೆ, ಇಂಥ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡಲೇಬೇಕು ಎಂದಿದ್ದಾರೆ. ರೋಗಿಗಳಿಗೆ ಧೈರ್ಯ ತುಂಬುವ ಕುರಿತು ಕೇಳಿದಾಗ, ಚಿಕಿತ್ಸೆ ಪಡೆಯುವ ಶಂಕಿತರಿಗೆ ಮುಂದೇನಾಗುವುದೋ ಎಂಬ ಭಯವಿರುತ್ತದೆ. ನಾವು ಅವರಿಗೆ ಸಮಾಧಾನ ಹೇಳುತ್ತೇವೆ. ಪರೀಕ್ಷೆಯ ವರದಿ ನೆಗಿಟಿವ್‌ ಬರುತ್ತದೆ ಎಂದು ಧೈರ್ಯ ತುಂಬುತ್ತೇವೆ, ಎಂದು ಛಾಯಾ ಮಾಹಿತಿ ನೀಡಿದ್ದಾರೆ.

ಬಳಿಕ, ನಿಸ್ವಾರ್ಥ ಸೇವೆ ಹಾಗೂ ಬದ್ಧತೆಗಾಗಿ ಛಾಯಾ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ನಿಮ್ಮಂತೆಯೇ ಲಕ್ಷಾಂತರ ಶುಶ್ರೂಶಕಿಯರು, ಅರೆವೈದ್ಯ ಸಿಬ್ಬಂದಿ ಮತ್ತು ವೈದ್ಯರು ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಅಕ್ಷರಶಃ ತಪಸ್ವಿಗಳಂತೆ ಕಾಯಾನಿರ್ವಹಿಸುತ್ತಿದ್ದಾರೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಸ್ಯಾನಿಟೈಸರ್‌ ರೀತಿಯ ಉತ್ಪನ್ನ ತಯಾರಿಸಿ
ಆಯುಷ್‌ ಔಷಧ ತಯಾರಕರು ತಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ನಮಗೆ ಅಗತ್ಯವಿರುವ ಹಾಗೂ ಅತಿ ಹೆಚ್ಚು ಬೇಡಿಕೆ ಇರುವ ಸ್ಯಾನಿಟೈಸರ್‌ ರೀತಿಯ ಉತ್ಪನ್ನಗಳ ಉತ್ಪಾದನೆಗೆ ಮುಂದಾಗುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಸೋಂಕಿಗೆ ಆಯುಷ್‌ನಲ್ಲಿ ಪರಿಹಾರವಿದೆ ಎಂಬ ಆಧಾರ ರಹಿತ ವದಂತಿಗಳ ಕುರಿತಾಗಿಯೂ ಗಮನಹರಿಸುವ ಅಗತ್ಯವಿದೆ ಎಂದಿದ್ದಾರೆ.

ಟಾಪ್ ನ್ಯೂಸ್

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.