ಟ್ರಂಪ್‌ ಜತೆ ಪ್ರಧಾನಿ ನರೇಂದ್ರ ಮೋದಿ ಮಾತು

Team Udayavani, Aug 20, 2019, 5:45 AM IST

ಹೊಸದಿಲ್ಲಿ: ಕಾಶ್ಮೀರದ ಬೆಳವಣಿಗೆಯ ಅನಂತರದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಕೆಲವರು ಹಿಂಸೆಗೆ ಪ್ರಚೋ ದಿಸುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿ ಯುಂಟಾಗಿದೆ ಎಂದು ಟ್ರಂಪ್‌ಗೆ ಮೋದಿ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಪಾಕ್‌ ಸಂಬಂಧ ಸುಧಾರಿಸಿತು ಎಂದ ಟ್ರಂಪ್‌: ಪಾಕಿಸ್ಥಾನಕ್ಕೆ ನೀಡಬೇಕಿದ್ದ 1.3 ಬಿಲಿ ಯನ್‌ ಡಾಲರ್‌ ಮೊತ್ತವನ್ನು ಕಡಿತಗೊಳಿಸಿದ ಅನಂತರದಲ್ಲಿ ಅಮೆರಿಕ ದೊಂದಿಗಿನ ಸಂಬಂಧ ಸುಧಾ ರಣೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವುದರಲ್ಲಿ ಪಾಕಿ ಸ್ಥಾನ ಸೂಕ್ತ ಪ್ರಯತ್ನ ನಡೆಸಲಿಲ್ಲ ಎಂಬ ಕಾರಣಕ್ಕೆ ಅಮೆರಿಕವು ಅನುದಾನವನ್ನು ಕಡಿತ ಗೊಳಿಸಿತ್ತು. ಕಳೆದ ಸೆಪ್ಟಂಬರ್‌ನಲ್ಲೂ 300 ಮಿಲಿ ಯನ್‌ ಡಾಲರ್‌ ಮೊತ್ತ ವನ್ನು ಕಡಿತಗೊಳಿಸಿದ್ದರು. ಈ ಬಗ್ಗೆ ರವಿವಾರ ನ್ಯೂಜೆರ್ಸಿಯಲ್ಲಿ ಮಾತ ನಾಡಿದ ಟ್ರಂಪ್‌, ಒಂದು ವರ್ಷದಲ್ಲಿ ನಾನು 1.3 ಬಿಲಿಯನ್‌ ಡಾಲರ್‌ ಅನು ದಾನವನ್ನು ಪಾಕಿಸ್ಥಾನಕ್ಕೆ ಕಡಿತಗೊಳಿಸಿದ್ದೇನೆ. ನಾನು ಪ್ರತಿ ಬಾರಿ ಅನುದಾನ ಕಡಿತಗೊಳಿಸಿದಾಗಲೂ ಸಂಬಂಧ ಉತ್ತಮವಾಗುತ್ತಿದೆ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ